ಅಕ್ರಮ ಮರಳು ದಂಧೆ ತಡೆಯಲು ಬಂದ ಪೊಲೀಸರ ಮೇಲೆ ಟ್ರ್ಯಾಕ್ಟರ್​ ಹತ್ತಿಸಿದ ವ್ಯಕ್ತಿ

|

Updated on: May 05, 2024 | 2:05 PM

ವ್ಯಕ್ತಿಯೊಬ್ಬ ಅಕ್ರಮ ಮರಳುಗಾರಿಕೆ ತಡೆಯಲು ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಟ್ರ್ಯಾಕ್ಟರ್​ ಹತ್ತಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಅಕ್ರಮ ಮರಳು ದಂಧೆ ತಡೆಯಲು ಬಂದ ಪೊಲೀಸರ ಮೇಲೆ ಟ್ರ್ಯಾಕ್ಟರ್​ ಹತ್ತಿಸಿದ ವ್ಯಕ್ತಿ
ಪೊಲೀಸ್​
Follow us on

ಅಕ್ರಮ ಮರಳು ದಂಧೆ ತಡೆಯಲು ಯತ್ನಿಸಿದ್ದ ಪೊಲೀಸ್​ ಅಧಿಕಾರಿ ಮೇಲೆ ವ್ಯಕ್ತಿಯೊಬ್ಬ ಟ್ರ್ಯಾಕ್ಟರ್​ ಹತ್ತಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ಸಾಗಿಸಲು ಬಳಸುತ್ತಿದ್ದ ಟ್ರ್ಯಾಕ್ಟರ್‌ ಪೊಲೀಸ್​ ಪೇದೆಯೊಬ್ಬರ ಮೇಲೆ ಹರಿದಿದ್ದು, ಗಾಯಗೊಂಡಿದ್ದಾರೆ.

ಎಎಸ್‌ಐ ಮಹೇಂದ್ರ ಬಾಗ್ರಿ ಮತ್ತು ಇಬ್ಬರು ಸಹಚರರು ವಾರಂಟ್ ಹಿಡಿದು ಹೋಗಿದ್ದರು. ದಾರಿಯಲ್ಲಿ ಮರಳು ತುಂಬಿದ ಟ್ರ್ಯಾಕ್ಟರ್ ಟ್ರಾಲಿಯನ್ನು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತಮ್ಮ ಕಡೆಗೆ ಬರುತ್ತಿರುವುದನ್ನು ಕಂಡು ಅದನ್ನು ನಿಲ್ಲಿಸಲು ಹೇಳಿದರು ಆದರೂ ಅಧಿಕಾರಿಯ ಮೇಲೆ ಹತ್ತಿಸಿದ್ದಾರೆ ಎಂದು ತಿಳಿಸಿದ್ದಾರೆ.

ಬಗ್ರಿ ಮತ್ತು ಇತರ ಪೊಲೀಸರು ಟ್ರ್ಯಾಕ್ಟರ್ ನಿಲ್ಲಿಸಲು ಚಾಲಕನಿಗೆ ಸಿಗ್ನಲ್ ನೀಡಿದರು, ಆದರೆ ಅವರು ನಿಲ್ಲಿಸಲಿಲ್ಲ, ಮತ್ತು ವಾಹನವು ಎಎಸ್ಐ ಮೇಲೆ ಹರಿದುಹೋಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಘಟನೆ ಬಳಿಕ ಚಾಲಕ ಟ್ರ್ಯಾಕ್ಟರ್‌ನಿಂದ ಹಾರಿ ಓಡಿ ಹೋಗಿದ್ದಾನೆ. ವೇಗವಾಗಿ ಬಂದ ವಾಹನ ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮತ್ತಷ್ಟು ಓದಿ:Raichur: ಮರಳು ಅಡ್ಡೆಗಳ ಮೇಲೆ ದೇವದುರ್ಗ ಶಾಸಕಿ ಕರಿಯಮ್ಮ ನಾಯಕ್​​ ದಾಳಿ

ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಾಹನದ ಮಾಲೀಕ ಮೂರನೇ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆತನ ಹೆಸರಿಗೆ 30,000 ರೂಪಾಯಿ ಬಹುಮಾನ ಘೋಷಿಸಿದ್ದೇವೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನಾವು ಪ್ರಯತ್ನಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ, ಶಾಹದೋಲ್ ಜಿಲ್ಲೆಯ ಗೋಪಾಲ್‌ಪುರ ಪ್ರದೇಶದ ಸೋನ್ ನದಿಯಿಂದ ಅಕ್ರಮವಾಗಿ ಗಣಿಗಾರಿಕೆ ಮಾಡಿದ ಮರಳನ್ನು ಸಾಗಿಸಲು ಬಳಸಲಾದ ಟ್ರ್ಯಾಕ್ಟರ್-ಟ್ರಾಲಿ ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿಯೊಬ್ಬರ ಮೇಲೆ ಹರಿದು ಸಾವನ್ನಪ್ಪಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ