ಕೊವಿಡ್ 3ನೇ ಅಲೆ ಎದುರಿಸಲು ತಯಾರಿ ನಡೆಸುತ್ತಿದೆ ಮಧ್ಯಪ್ರದೇಶ ಸರ್ಕಾರ

|

Updated on: May 10, 2021 | 3:40 PM

Covid 3rd Wave: ಮಧ್ಯಪ್ರದೇಶದಲ್ಲಿ ಮೇ 9ರಂದು 11,051 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿವೆ. ಈವರೆಗೆ ಒಟ್ಟು 6,71,763 ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಮೃತಪಟ್ಟವರ ಸಂಖ್ಯೆ 6,420.

ಕೊವಿಡ್ 3ನೇ ಅಲೆ ಎದುರಿಸಲು ತಯಾರಿ ನಡೆಸುತ್ತಿದೆ ಮಧ್ಯಪ್ರದೇಶ ಸರ್ಕಾರ
ಶಿವ್​ರಾಜ್ ಸಿಂಗ್ ಚೌಹಾಣ್ (ಸಂಗ್ರಹ ಚಿತ್ರ)
Follow us on

ಭೋಪಾಲ್: ಮುಂದಿನ ದಿನಗಳಲ್ಲಿ ಬರಬಹುದಾದ ಕೊವಿಡ್ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಮಧ್ಯಪ್ರದೇಶ ಸರ್ಕಾರ ಈಗಿನಿಂದಲೇ ತಯಾರಿ ಆರಂಭಿಸಿದೆ. ಮೂರನೇ ಅಲೆ ಚಿಕ್ಕ ಮಕ್ಕಳಿಗೆ ತೊಂದರೆ ಉಂಟುಮಾಡಲಿದೆ ಎಂದು ವರದಿಗಳು ಹೇಳಿರುವ ಬೆನ್ನಲ್ಲೇ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಕ್ಕಳಿಗಾಗಿಯೇ ಆಸ್ಪತ್ರೆಗಳಲ್ಲಿ 360 ಐಸಿಯು ಬೆಡ್​ಗಳನ್ನು ನಿರ್ಮಿಸುವಂತೆ ಆದೇಶಿಸಿದ್ದಾರೆ. ಅಲ್ಲದೇ ಮಧ್ಯಪ್ರದೇಶ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಕೈಲಾಶ್ ಸಾರಂಗ್ ಮೇ 9ರಂದು ಸರ್ಕಾರಿ ವೈದ್ಯಕೀಯ ಕಾಲೇಜು ಮ್ತತು ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಂವಾದ ನಡೆಸಿದ್ದಾರೆ. ಕೊವಿಡ್ ಮೂರನೇ ಅಲೆಯನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಿದ್ದಾರೆ.  

ಮಧ್ಯಪ್ರದೇಶದ ವಿವಿಧ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಕೊವಿಡ್ ಮೂರನೇ ಅಲೆ ತಡೆಯಲು ಈಗಿನಿಂದಲೇ ಸಜ್ಜುಗೊಳ್ಳಬೇಕು. ಅದರಲ್ಲೂ ಮಕ್ಕಳಿಗೆ ಹೆಚ್ಚು ಬಾಧಿಸಬಲ್ಲ ಕೊವಿಡ್ ಮೂರನೇ ಅಲೆಗೆ ಎಂದೇ ಪ್ರತಿ ವೈದ್ಯಕೀಯ ಕಾಲೇಜುಗಳಲ್ಲೂ ಮಕ್ಕಳಿಗಾಗಿ 360 ಐಸಿಯು ಬೆಡ್ ನಿರ್ಮಿಸಬೇಕು. 1,000 ಆಕ್ಸಿಜನ್ ಕಾನ್ಸ್​ಟ್ರೇಟರ್​ಗಳನ್ನು ರಾಜ್ಯದ 13 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸಜ್ಜುಗೊಳಿಸಬೇಕು ಎಂದು ಅವರು ನಿರ್ದೇಶಿಸಿದರು.

ಮಧ್ಯಪ್ರದೇಶದಲ್ಲಿ ಮೇ 9ರಂದು 11,051 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿವೆ. ಈವರೆಗೆ ಒಟ್ಟು 6,71,763 ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಮೃತಪಟ್ಟವರ ಸಂಖ್ಯೆ 6,420.

ಇದನ್ನೂ ಓದಿ: ಕೊವಿಡ್​ 19 ಚಿಕಿತ್ಸೆಗೆ ವರವಾಗಲಿದೆಯೇ ಪಶು ಔಷಧಿ ಐವೆರ್ಮೆಕ್ಟಿನ್?

ನೀವು ಕೂಡ ಬೇಗ ಲಸಿಕೆ ಪಡೆಯಿರಿ; ಮೊದಲ ಹಂತದ ಕೊರೊನಾ ಲಸಿಕೆ ಪಡೆದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

(Madhya Pradesh set up 360 ICU beds for children in govt medical colleges to war against Covid 3rd wave)