ಒಂದೇ ಆಸ್ಪತ್ರೆಯ 80 ವೈದ್ಯರಿಗೆ ಕೊರೊನಾ ಸೋಂಕು; ಒಪಿಡಿ ಬಂದ್
ದೆಹಲಿಯ ಗುರು ತೇಜ್ ಬಜದ್ದೂರ್ ಆಸ್ಪತ್ರೆಯ ಯುವ ವೈದ್ಯ ಡಾ. ಅನಾಸ್ ಮುಜಾಹಿದ್ದ ಅವರು ಕೊರೊನಾ ದೃಢಪಟ್ಟ ಒಂದೇ ತಾಸಿನಲ್ಲಿ ಸಾವನ್ನಪ್ಪಿದ್ದಾರೆ.
ದೆಹಲಿಯ ಸರೋಜ್ ಆಸ್ಪತ್ರೆಯ 80 ವೈದ್ಯರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಇಂಥ ಹೊತ್ತಲ್ಲೂ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ಮುಂದುವರಿದಿದೆ. ಈ ಆಸ್ಪತ್ರೆಯ ಹಿರಿಯ ಸರ್ಜನ್ ಅನಿಲ್ಕುಮಾರ್ ರಾವತ್ ಅವರೂ ಸಹ ಎರಡು ದಿನಗಳ ಹಿಂದೆ ಕೊರೊನಾದಿಂದಲೇ ಮೃತಪಟ್ಟಿದ್ದರು.
ಕೊವಿಡ್ ಸೋಂಕಿಗೆ ಒಳಗಾಗಿರುವ 80 ವೈದ್ಯರಲ್ಲಿ 12 ವೈದ್ಯರು ಇದೇ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. ಸದ್ಯ ಸರೋಜ್ ಆಸ್ಪತ್ರೆಯಲ್ಲಿ ಒಪಿಡಿಯನ್ನು ಬಂದ್ ಮಾಡಲಾಗಿದೆ. ದೆಹಲಿಯಾದ್ಯಂತ ಒಟ್ಟು 300 ವೈದ್ಯರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಇನ್ನು ದೆಹಲಿಯ ಗುರು ತೇಜ್ ಬಜದ್ದೂರ್ ಆಸ್ಪತ್ರೆಯ ಯುವ ವೈದ್ಯ ಡಾ. ಅನಾಸ್ ಮುಜಾಹಿದ್ದ ಅವರು ಕೊರೊನಾ ದೃಢಪಟ್ಟ ಒಂದೇ ತಾಸಿನಲ್ಲಿ ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಮಿತಿಮೀರುತ್ತಿದ್ದು ಭಾನುವಾರ ಒಂದೇ ದಿನ 13,336 ಸೋಂಕಿತರು ದಾಖಲಾಗಿದ್ದು, 273ಮಂದಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಮಂಡ್ಯದ ಮಿಮ್ಸ್‌ನಲ್ಲಿ ಕೊರೊನಾ ಸೋಂಕಿತರ ಪರದಾಟ; ಬೆಡ್ ಇಲ್ಲದೆ ಕುಳಿತಲ್ಲೇ ಆಕ್ಸಿಜನ್ ಪಡೆಯುವ ದುಃಸ್ಥಿತಿ ನಿರ್ಮಾಣ
ನೀವು ಕೂಡ ಬೇಗ ಲಸಿಕೆ ಪಡೆಯಿರಿ; ಮೊದಲ ಹಂತದ ಕೊರೊನಾ ಲಸಿಕೆ ಪಡೆದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ
80 doctors at Saroj Hospital tested Positive for Coronavirus in Delhi