ಮಧ್ಯಪ್ರದೇಶ: ವೇಗವಾಗಿ ಬಂದು ಗೋವುಗಳ ಮೇಲೆ ಹರಿದ ಟ್ರಕ್, 16 ಹಸುಗಳು ಸಾವು

ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ಶುಕ್ರವಾರ ಭಾರೀ ಅಪಘಾತ ಸಂಭವಿಸಿದೆ. ಇಲ್ಲಿ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದು 16 ಹಸುಗಳು ಸಾವನ್ನಪ್ಪಿವೆ. ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಘಟನೆ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ.

ಮಧ್ಯಪ್ರದೇಶ: ವೇಗವಾಗಿ ಬಂದು ಗೋವುಗಳ ಮೇಲೆ ಹರಿದ ಟ್ರಕ್, 16 ಹಸುಗಳು ಸಾವು
ಹಸು-ಸಾಂದರ್ಭಿಕ ಚಿತ್ರ
Image Credit source: Animalfriendlylife

Updated on: Sep 15, 2024 | 8:55 AM

ವೇಗವಾಗಿ ಬಂದ ಟ್ರಕ್​ವೊಂದು ಗೋವುಗಳ ಮೇಲೆ ಹರಿದ ಪರಿಣಾಮ 16 ಹಸುಗಳು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಛತ್ತರ್​ಪುರ ಜಿಲ್ಲೆಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಝಾನ್ಸಿ-ಖಜುರಾಹೊ ರಸ್ತೆಯ ಕೈದಿ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಐದು ಗೋವುಗಳು ಗಾಯಗೊಂಡಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

ಅಪರಿಚಿತ ವಾಹನವೊಂದು ಹಸುಗಳನ್ನು ಕಡಿದು ಹಾಕಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಗೊಂಡ ಪ್ರಾಣಿಗಳನ್ನು ಪಶು ಆಸ್ಪತ್ರೆಗೆ ರವಾನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್), ಮೋಟಾರು ವಾಹನ ಕಾಯ್ದೆ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಮತ್ತಷ್ಟು ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ 3 ಲಾರಿಗಳು, 1 ಸ್ಲೀಪರ್ ಕೋಚ್ ಬಸ್, ಕಾರು ನಡುವೆ ಸರಣಿ ಅಪಘಾತ; ಹಲವರಿಗೆ ಗಾಯ

ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ, ಪೊಲೀಸರು ಟ್ರಕ್ ಅನ್ನು ಪತ್ತೆಹಚ್ಚಿ ವಶಪಡಿಸಿಕೊಂಡರು ಮತ್ತು ಉತ್ತರ ಪ್ರದೇಶದ ನಿವಾಸಿಗಳಾದ ಚಾಲಕ ಧೀರೇಂದ್ರ ಕುಶ್ವಾಹಾ ಮತ್ತು ಸಹಾಯಕ ಪ್ರಮೋದ್ ಕುಶ್ವಾಹಾ ಅವರನ್ನು ಬಂಧಿಸಿದ್ದಾರೆ. ಘಟನೆಯಲ್ಲಿ 16 ಹಸುಗಳು ಸಾವನ್ನಪ್ಪಿದ್ದು, ಐದು ಹಸುಗಳು ಗಾಯಗೊಂಡಿವೆ ಎಂದು ಪಶುವೈದ್ಯಾಧಿಕಾರಿ ಆರ್.ಎನ್.ಸೇನ್ ತಿಳಿಸಿದ್ದಾರೆ. ಝಾನ್ಸಿ-ಖಜುರಾಹೊ ರಸ್ತೆಯ ಕಡಿ ಗ್ರಾಮದ ಬಳಿ ಸಂಭವಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ