ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕತ್ತಲೆಯಲ್ಲೇ ಇದೆ ಈ ಗ್ರಾಮ, ರಸ್ತೆ ಇಲ್ಲ, ಕುಡಿಯಲು ನೀರೂ ಇಲ್ಲ

|

Updated on: May 23, 2024 | 9:44 AM

ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಈ ಗ್ರಾಮ ಕತ್ತಲಲ್ಲೇ ಇದೆ. ವಿದ್ಯುತ್​ ಸಂಪರ್ಕವೂ ಇಲ್ಲ, ವಾಹನ ಸಂಪರ್ಕವೂ ಇಲ್ಲ, ನೀರು ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳೂ ಇಲ್ಲದೆ ಜನರು ಪರಿತಪಿಸುತ್ತಿದ್ದಾರೆ.

ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕತ್ತಲೆಯಲ್ಲೇ ಇದೆ ಈ ಗ್ರಾಮ, ರಸ್ತೆ ಇಲ್ಲ, ಕುಡಿಯಲು ನೀರೂ ಇಲ್ಲ
ಬುಡಕಟ್ಟು
Image Credit source: Etv Bharat
Follow us on

ಒಂದೆಡೆ ಮೆಟ್ರೋ ರೈಲು, ಇನ್ನೊಂದೆಡೆ ಬುಲೆಟ್​ ರೈಲುಗಳು ಓಡುತ್ತಿರುವ ಈ ಕಾಲದಲ್ಲೂ ಈ ಊರಿಗೆ ಸೈಕಲ್​​ನಲ್ಲಿ ಬರುವುದೂ ಕಷ್ಟ. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕತ್ತಲೆಯಲ್ಲೇ ಬದುಕುತ್ತಿರುವ ಸಮುದಾಯ ಇದು.
ನಮ್ಮ ಭಾರತ ದೇಶವು ಇಂದು ವಿಶ್ವದ ಅಗ್ರ ರಾಷ್ಟ್ರಗಳಿಗೆ ಸಮನಾಗಿ ನಿಂತಿದೆ ಮತ್ತು ಅನೇಕ ಕ್ಷೇತ್ರಗಳಲ್ಲಿ ವಿಶ್ವದ ಎಲ್ಲಾ ದೇಶಗಳಿಗಿಂತ ಮುಂದಿದೆ.

ಆದರೆ ವಿದ್ಯುತ್, ರಸ್ತೆ ಮತ್ತು ನೀರಿಗಾಗಿ ಜನರು ಕಾಯುತ್ತಿರುವ ಅನೇಕ ಸ್ಥಳಗಳು ದೇಶದಲ್ಲಿವೆ. ಮಧ್ಯಪ್ರದೇಶದ ಅನುಪ್ಪುರ್ ಜಿಲ್ಲೆಯಲ್ಲಿರುವ ಬುಡಕಟ್ಟು ಸಮುದಾಯ ಎಲ್ಲಾ ಯೋಜನೆಗಳಿಂದ ವಂಚಿತವಾಗಿದೆ.

ಈ ಜಿಲ್ಲೆಯಲ್ಲಿ ವಿದ್ಯುತ್​, ರಸ್ತೆ ನೀರಿನಂತಹ ಮೂಲಸೌಕರ್ಯಗಳೇ ಇಲ್ಲ, ಪಸನ್ ಪುರಸಭೆಯಿಂದ ಕೇವಲ 1 ರಿಂದ 2 ಕಿಲೋಮೀಟರ್ ದೂರದಲ್ಲಿ ಈ ಸಮುದಾಯ ನೆಲೆಸಿದೆ.

ಮತ್ತಷ್ಟು ಓದಿ: Health Ministry Budget Webinar: ‘ಪ್ರತಿ ಹಳ್ಳಿ, ಜಿಲ್ಲೆಗಳಲ್ಲಿ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿ ಮಾಡುವುದು ನಮ್ಮ ಉದ್ದೇಶ’: ಪ್ರಧಾನಿ ಮೋದಿ

ನಮ್ಮ ಗ್ರಾಮದಲ್ಲಿ ಬೆಳಕಿನ ವ್ಯವಸ್ಥೆ, ನೀರಿನ ವ್ಯವಸ್ಥೆ ಇಲ್ಲ. ಈ ಗ್ರಾಮವು ಪಸನ್ ಪುರಸಭೆಯ ವ್ಯಾಪ್ತಿಗೆ ಬರುತ್ತದೆ. ನೀರಿಗಾಗಿ ನಾಲ್ಕೈದು ದಿನಕ್ಕೊಮ್ಮೆ ನಗರಸಭೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ.
ಪುರಸಭೆ ಹತ್ತಿರದಲ್ಲೇ ಇದ್ದರೂ ಈ ಗ್ರಾಮದಲ್ಲಿ ಯಾವ ಮೂಲಸೌಲಭ್ಯವೂ ಇಲ್ಲದಿರುವುದು ಆಶ್ಚರ್ಯಕರ ಸಂಗತಿ.

ಪಸನ್ ಪುರಸಭೆಯ ಸಿಎಂಒ, ಆ ಜನರು ವಾಸಿಸುವ ಸ್ಥಳವು ಅರಣ್ಯ ಪ್ರದೇಶದಲ್ಲಿ ಬರುತ್ತದೆ, ದೀಪಗಳಿಗಾಗಿ ಕಂಬಗಳನ್ನು ಅಳವಡಿಸಲಾಗಿದೆ, ಶೀಘ್ರವೇ ಸುಗುಮವಾಗಿ ವಿದ್ಯುತ್ ಪೂರೈಕೆ ಆರಂಭಿಸಲಾಗುವುದು, ಅರಣ್ಯ ಪ್ರದೇಶದಿಂದ ಅನುಮತಿ ಪಡೆದ ತಕ್ಷಣ ನೀರು, ರಸ್ತೆ ಕಾಮಗಾರಿಯನ್ನು ಆರಂಭಿಸಲಾಗುತ್ತದೆ ಎಂದು ಮೊದಲೇ ಹೇಳಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ