ಅಪಘಾತದಲ್ಲಿ ಪತಿ ಸಾವನ್ನಪ್ಪಿದ ಒಂದು ಗಂಟೆಯ ಬಳಿಕ ಮಗುವಿಗೆ ಜನ್ಮ ನೀಡಿದ ಮಹಿಳೆ
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಮಹಿಳೆಯೊಬ್ಬರು ಕಾರು ಅಪಘಾತದಲ್ಲಿ ಪತಿ ಸಾವನ್ನಪ್ಪಿದ ಕೇವಲ ಒಂದು ಗಂಟೆಯ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತಕ್ಕೀಡಾದಾಗ ಮಹಿಳೆ ತನ್ನ ಪತಿಯೊಂದಿಗೆ ತಮ್ಮ ಕಾರಿನಲ್ಲಿ ಹೋಗಿದ್ದರು. ಘಟನೆಯಲ್ಲಿ ಪತಿ ಮೃತಪಟ್ಟರೆ, ಮಹಿಳೆ ಬದುಕುಳಿದಿದ್ದಾಳೆ. ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವಳು ಮಗುವಿಗೆ ಜನ್ಮ ನೀಡಿದ್ದಾಳೆ.
ಎಲ್ಲಾ ಪತಿ-ಪತ್ನಿಗೂ ತಾವು ಪೋಷಕರಾಗುವುದು ಹೊಸ ಅನುಭವ, ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ದಂಪತಿ ಮಗುವನ್ನು ಹೇಗೆ ಬೆಳೆಸಬೇಕೆಂದು ಕನಸು ಕಾಣಲು ಶುರು ಮಾಡುತ್ತಾರೆ. ಆದರೆ ಕನಸು ಆರಂಭವಾಗುವ ಮುನ್ನವೇ ಕಮರಿಹೋಗಿದೆ. ಹಾಗೆಯೇ ಪತ್ನಿ ಹೆರಿಗೆಗೆಂದು ಆಸ್ಪತ್ರೆಗೆ ಹೋಗುತ್ತಿದ್ದಾಗ ಪತಿ ಕಾರು ಅಪಘಾತದಲ್ಲಿ ಜೀವ ಕಳೆದುಕೊಂಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಮಹಿಳೆಯೊಬ್ಬರು ಕಾರು ಅಪಘಾತದಲ್ಲಿ ಪತಿ ಸಾವನ್ನಪ್ಪಿದ ಕೇವಲ ಒಂದು ಗಂಟೆಯ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತಕ್ಕೀಡಾದಾಗ ಮಹಿಳೆ ತನ್ನ ಪತಿಯೊಂದಿಗೆ ತಮ್ಮ ಕಾರಿನಲ್ಲಿ ಹೋಗಿದ್ದರು. ಘಟನೆಯಲ್ಲಿ ಪತಿ ಮೃತಪಟ್ಟರೆ, ಮಹಿಳೆ ಬದುಕುಳಿದಿದ್ದಾಳೆ. ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವಳು ಮಗುವಿಗೆ ಜನ್ಮ ನೀಡಿದ್ದಾಳೆ.
ದಂಪತಿ ಪ್ರಯಾಣಿಸುತ್ತಿದ್ದ ಹ್ಯಾಚ್‌ಬ್ಯಾಕ್ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಭೋಪಾಲ್‌ನ ಲಾಲ್‌ಘಾಟಿಯ ಹಲಾಲ್‌ಪುರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮತ್ತಷ್ಟು ಓದಿ: ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ; ಆ ಒಂದು ಸುಳ್ಳು ನಂಬಿ ರೈಲಿನಿಂದ ಹಾರಿ 11 ಜನರ ದೇಹ ಛಿದ್ರ
ಈ ದುರ್ಘಟನೆಯಲ್ಲಿ ವಾಹನ ಸವಾರ ಮಹೇಂದ್ರ ಮೇವಾಡ ಹಾಗೂ ಅವರ ಸೋದರ ಮಾವ ಸತೀಶ ಮೇವಾಡ ಮೃತಪಟ್ಟಿದ್ದಾರೆ. ಪೊಲೀಸರ ಪ್ರಕಾರ, ರಾತಿಬಾದ್ ನಿವಾಸಿ ಬಾಬ್ಲಿ ಗರ್ಭಿಣಿಯಾಗಿದ್ದು, ಮಂಗಳವಾರ ತಡರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಾಗ, ಆಕೆಯ ಪತಿ ಮಹೇಂದ್ರ ಅವರು ತಮ್ಮ ಆಲ್ಟೋ ಕಾರಿನಲ್ಲಿ ಭೋಪಾಲ್‌ಗೆ ತೆರಳಿದ್ದರು.
ದಂಪತಿ ಜೊತೆಗೆ ಮಹೇಂದ್ರನ ತಾಯಿ, ಚಿಕ್ಕಮ್ಮ ಮತ್ತು ಸೋದರ ಮಾವ ಕೂಡ ಕಾರಿನಲ್ಲಿದ್ದರು. ಹಲಾಲಪುರ ಬಸ್ ನಿಲ್ದಾಣದ ಮುಂಭಾಗದ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಡಿಕ್ಕಿ ಹೊಡೆದ ನಂತರ ಕಾರಿನಲ್ಲಿದ್ದ ಐವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ನಂತರ ಅವರೆಲ್ಲರನ್ನೂ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ವೈದ್ಯರು ಮಹೇಂದ್ರ ಮೇವಾಡ ಮತ್ತು ಅವರ ಸೋದರ ಸತೀಶ್ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.
ಕೇವಲ ಒಂದು ಗಂಟೆಯ ನಂತರ ಅವರ ಪತ್ನಿ ಬಬ್ಲಿ ತಡರಾತ್ರಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಪ್ರಸ್ತುತ, ತಾಯಿ ಮತ್ತು ನವಜಾತ ಇಬ್ಬರೂ ಸಂಪೂರ್ಣವಾಗಿ ಸುರಕ್ಷಿತ ಮತ್ತು ಸ್ಥಿರರಾಗಿದ್ದಾರೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:38 am, Fri, 24 January 25