ಭಾರತದ ಈ ಪ್ರದೇಶದಲ್ಲಿ ಶೇಕಡಾ 97 ರಷ್ಟು ಮುಸ್ಲಿಮರೇ ಇರುವುದಂತೆ, ಹಾಗಾದ್ರೆ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ? ಇಲ್ಲಿದೆ ಮಾಹಿತಿ
ಭಾರತವು ವಿಶ್ವದಲ್ಲಿ ಎರಡನೇ ಅತಿ ದೊಡ್ಡ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ. ಪ್ಯೂ ರಿಸರ್ಚ್ ಸೆಂಟರ್ ಪ್ರಕಟಿಸಿದ ವರದಿಯ ಪ್ರಕಾರ, ಭಾರತವು 2050 ರ ವೇಳೆಗೆ ( 311 ಮಿಲಿಯನ್) ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿ ಇಂಡೋನೇಷ್ಯಾವನ್ನು ಮೀರಿಸಲಿದೆ ಎನ್ನಲಾಗಿದೆ. ಅದಲ್ಲದೇ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಜನಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತದ ಈ ಕೆಲವು ಪ್ರದೇಶಗಳಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಿದೆ ಎನ್ನಲಾಗಿದೆ. ಸುಮಾರು 97 ಪ್ರತಿಶತದಷ್ಟು ಜನರು ಮುಸ್ಲಿಂ ಧರ್ಮವನ್ನು ಅನುಸರಿಸುವ ರಾಜ್ಯವಿದ್ದು, ಇಲ್ಲಿನ ಪ್ರತಿ 100 ಜನರಲ್ಲಿ 97 ಜನರು ಮುಸ್ಲಿಮರಾಗಿದ್ದಾರೆ. ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶ. ಇಲ್ಲಿ ವಿವಿಧ ಧರ್ಮದ ಜನರು, ವಿವಿಧ ಭಾಷೆ ಮಾತನಾಡುವವರು, ವಿವಿಧ ಸಂಸ್ಕೃತಿಯ ಹಿನ್ನಲೆಯನ್ನು ಹೊಂದಿರುವ ಒಂದೇ ತಾಯಿಯ ಮಕ್ಕಳು ಎನ್ನುವಂತೆ ಬದುಕುತ್ತಿದ್ದಾರೆ. ಹೀಗಾಗಿ ಭಾರತದಲ್ಲಿ ಹಿಂದೂ, ಮುಸ್ಲಿಂ, ಕಿಶ್ಚಿಯನ್, ಜೈನ್, ಬೌದ್ಧ ಸೇರಿದಂತೆ ವಿವಿಧ ಧರ್ಮದ ಜನರನ್ನು ಕಾಣಬಹುದು. ಆದರೆ ಭಾರತವು ವಿಶ್ವದಲ್ಲಿ ಎರಡನೇ ಅತಿದೊಡ್ಡ ಮುಸ್ಲಿಂ ಜನಸಂಖ್ಯೆ ಹೊಂದಿರುವ ದೇಶ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ, ಭಾರತದಲ್ಲಿ ಈ ರಾಜ್ಯದಲ್ಲಿ ಮುಸ್ಲಿಮರು ಬಹುಸಂಖ್ಯೆಯಲ್ಲಿದ್ದಾರೆ ಎಂದು ಬಹುತೇಕರಿಗೆ ತಿಳಿದಿಲ್ಲ. ಭಾರತದಲ್ಲಿ ಪ್ರತಿ 100 ಕ್ಕೆ 97 ಮುಸ್ಲಿಮರು ಇರುವ ರಾಜ್ಯವೊಂದಿದೆ.
ಹೌದು, ಜನಸಂಖ್ಯೆಯ ದೃಷ್ಟಿಯಿಂದ ದೇಶದ ಅತಿ ದೊಡ್ಡ ರಾಜ್ಯವೆಂದರೆ ಅದುವೇ ಉತ್ತರ ಪ್ರದೇಶ. ಈ ರಾಜ್ಯದ ಒಟ್ಟು ಜನಸಂಖ್ಯೆ 25 ಕೋಟಿಗೂ ಹೆಚ್ಚು. 2011 ರ ಜನಗಣತಿಯ ಪ್ರಕಾರ, ಈ ರಾಜ್ಯದ ಜನಸಂಖ್ಯೆಯು ಸುಮಾರು 20 ಕೋಟಿ ಆಗಿತ್ತು. ಆ ಸಮಯದಲ್ಲಿ 20 ಕೋಟಿಯಲ್ಲಿ 3.84 ಕೋಟಿ ಮುಸ್ಲಿಂ ಜನರಿದ್ದರು.ಅಂದರೆ ಒಟ್ಟು ಜನಸಂಖ್ಯೆಯ ಶೇ.19.26. ಮುಸ್ಲಿಂ ಜನಸಂಖ್ಯೆಯ ಹೊಂದಿದ ದೇಶದ ಅತಿದೊಡ್ಡ ರಾಜ್ಯವಾಗಿದೆ.
ಅದಲ್ಲದೇ, ಭಾರತದಲ್ಲಿ ಈ ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರತಿ 100 ಕ್ಕೆ 97 ಜನರು ಇಸ್ಲಾಂ ಧರ್ಮವನ್ನು ಅನುಸರಿಸುತ್ತಿದ್ದಾರೆ. ಆ ಈ ಕೇಂದ್ರಾಡಳಿತ ಪ್ರದೇಶವೇ ಲಕ್ಷದ್ವೀಪ. ಈ ಪ್ರದೇಶವು ಚಿಕ್ಕದಾಗಿದ್ದರೂ 2011 ರ ಜನಗಣತಿಯ ಪ್ರಕಾರ ಇಲ್ಲಿನ ಜನಸಂಖ್ಯೆಯೂ 64,473 ರಷ್ಟು ಇತ್ತು. ಈ ಜನಸಂಖ್ಯೆಯಲ್ಲಿ 62,268 ಜನರು ಮುಸ್ಲಿಮರಾಗಿದ್ದು , ಜನಸಂಖ್ಯೆಯ 96.58% ರಷ್ಟು ಮುಸ್ಲಿಂ ಇಲ್ಲಿದ್ದಾರೆ. ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚು. 2011 ರ ಜನಗಣತಿಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು ಜನಸಂಖ್ಯೆಯು 1.25 ಕೋಟಿ ಆಗಿತ್ತು. ಅದರಲ್ಲಿ 85.67 ಲಕ್ಷ ಮುಸ್ಲಿಂ ಜನರಿದ್ದರು. ಈ ಪ್ರದೇಶದಲ್ಲಿಯೂ ಶೇ.68.31ರಷ್ಟು ಮುಸ್ಲಿಮರು ವಾಸವಿದ್ದಾರೆ.
ಅಸ್ಸಾಂ ಶೇ 34.22 ರಷ್ಟು ಮುಸ್ಲಿಂ ಜನಸಂಖ್ಯೆ ಹೊಂದುವ ಮೂಲಕ ಮೂರನೇ ಸ್ಥಾನವನ್ನು ಗಳಿಸಿಕೊಂಡಿದೆ. ಪಶ್ಚಿಮ ಬಂಗಾಳ ಶೇ 27.01, ಕೇರಳ ಶೇ 26.56, ಉತ್ತರ ಪ್ರದೇಶ ಶೇ 19.26, ಬಿಹಾರ ಶೇ 16.87, ಜಾರ್ಖಂಡ್ ಶೇ 14.53, ಉತ್ತರಾಖಂಡ ಶೇ 13.95, ಕರ್ನಾಟಕ ಶೇ 12.92, ದೆಹಲಿ ಶೇ 12.86 ಹಾಗೂ ಮಹಾರಾಷ್ಟ್ರ ಶೇ 11.54 ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ. ಉಳಿದ ರಾಜ್ಯಗಳಲ್ಲಿ ಮುಸ್ಲಿಂ ಜನಸಂಖ್ಯೆ ಶೇ.10ಕ್ಕಿಂತ ಕಡಿಮೆ ಇದೆ.
ಶೇಕಡಾ 10 ಕ್ಕಿಂತ ಕಡಿಮೆ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಮೊದಲನೇಯದಾಗಿ ಗುಜರಾತ್ ಇದ್ದು, ಇಲ್ಲಿ ಶೇ 9.67 ರಷ್ಟು ಮುಸ್ಲಿಮರು ವಾಸವಿದ್ದಾರೆ. ಆಂಧ್ರ ಪ್ರದೇಶ ಶೇ 9.56, ರಾಜಸ್ಥಾನ ಶೇ 9.07, ತ್ರಿಪುರ ಶೇ 8.60, ಅಂಡಮಾನ್ ನಿಕೋಬಾರ್ ಶೇ 8.52, ಮಣಿಪುರ ಶೇ 8.40, ಗೋವಾ ಶೇ 8.33, ದಮನ್ ಮತ್ತು ದಿಯು ಶೇ 7.92, ಹರಿಯಾಣ ಶೇ 7.03, ಮಧ್ಯಪ್ರದೇಶ ಶೇ 6.57, ಪುದುಚೇರಿ ಶೇ 6.05 ಮತ್ತು ತಮಿಳುನಾಡು ಶೇ 5.86 ರಷ್ಟು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ.
ಇದನ್ನೂ ಓದಿ: ʼವರ್ಲ್ಡ್ ಆಫ್ ಮೈಸೂರು ಪಾಕ್ʼ ವಿಶ್ವದ ಅತಿ ದೊಡ್ಡ ಮೈಸೂರ್ ಪಾಕ್ ಮಳಿಗೆಯಿದು
ಅದಲ್ಲದೇ, ಶೇಕಡಾ 5 ಕ್ಕಿಂತ ಕಡಿಮೆ ಮುಸ್ಲಿಂ ಜನಸಂಖ್ಯೆ ಹೊಂದಿರುವ ರಾಜ್ಯಗಳ ಪೈಕಿ ಚಂಡೀಗಢವು ಮೊದಲ ಸ್ಥಾನದಲ್ಲಿದ್ದು, ಶೇ 4.87 ರಷ್ಟು ಮುಸ್ಲಿಮರು ಇಲ್ಲಿ ವಾಸವಿದ್ದಾರೆ. ಇನ್ನು ಉಳಿದಂತೆ ಮೇಘಾಲಯ ಶೇ 4.40, ದಾದ್ರಾ ಹಾಗೂ ನಗರ ಹವೇಲಿ ಶೇ 3.67, ನಾಗಾಲ್ಯಾಂಡ್ ಶೇ2.47, ಹಿಮಾಚಲ ಪ್ರದೇಶ ಶೇ 2.18, ಒಡಿಶಾ ಶೇಕಡಾ 2.17, ಛತ್ತೀಸ್‌ಗಢ ಶೇ 2.02 ಹಾಗೂ ಅರುಣಾಚಲ ಪ್ರದೇಶ ಶೇ 1.95 ರಷ್ಟು ಜನಸಂಖ್ಯೆಯನ್ನು ಹೊಂದಿದ್ದಾರೆ. ಅತೀ ಕಡಿಮೆ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಪ್ರದೇಶಗಳ ಪೈಕಿ ಮೊದಲ ಸ್ಥಾನದಲ್ಲಿ ಮಿಜೋರಾಂನಿಂದ ಸೇರಿದ್ದು, ಇಲ್ಲಿ ಶೇ 1.35 ರಷ್ಟು ಮುಸ್ಲಿಂ ಜನರು ವಾಸವಿದ್ದಾರೆ. ಸಿಕ್ಕಿಂ ಶೇ 1.62, ಪಂಜಾಬ್ ನಲ್ಲಿ ಶೇ.1.93ರಷ್ಟು ಮುಸ್ಲಿಮರು ವಾಸವಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ