ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಮತ್ತು ಪೊಲೀಸ್ ಸಿಬ್ಬಂದಿ ವಿರುದ್ಧ ಘೋಷಣೆ ಕೂಗಿದ್ದ ದೇಶದ್ರೋಹದ ಆರೋಪದಡಿ ಬಂಧಿತರಾಗಿದ್ದ ಇಬ್ಬರು ವ್ಯಕ್ತಿಗಳಿಗೆ ಮದ್ರಾಸ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಪೊಲೀಸ್ ಎನ್ಕೌಂಟರ್ ಒಂದರಲ್ಲಿ ಹತನಾಗಿದ್ದ ಮಾವೋವಾದಿ ನಾಯಕನ ಪರ ಪ್ರತಿಭಟನೆಯಲ್ಲಿ ಘೋಷಣೆ ಕೂಗಿದ್ದ ಆರೋಪದಡಿ ಇವರನ್ನು ಬಂಧಿಸಲಾಗಿತ್ತು. 2019ರಲ್ಲಿ ನಡೆದ ಈ ಘಟನೆಯಲ್ಲಿ ಇಬ್ಬರು ಪ್ರತಿಭಟನಾಕರರು ಎನ್ಕೌಂಟರ್ ಆದ ಮಾವೋವಾದಿ ನಾಯಕನ ಪರ ಘೋಷಣೆ ಕೂಗಿದ್ದರು ಎಂದು ಆರೋಪಿಸಲಾಗಿತ್ತು.
ಆರೋಪಿಗಳ ಜಾಮೀನು ನಿರಾಕರಣೆ ಅರ್ಜಿಯನ್ನು ನಿರಾಕರಿಸುವಂತೆ ಮನವಿ ಮಾಡಿದ ಪ್ರಾಸಿಕ್ಯೂಟರ್, ಆರೋಪಿಗಳು ನಿಷೇಧಿತ ಸಂಘಟನೆಯೊಂದರ ಬೆಂಬಲಿಗರಾಗಿದ್ದಾರೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪೊಲೀಸ್ ಸಿಬ್ಬಂದಿಯ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ಕಾರಣಗಳಿಂದ ಜಾಮೀನು ನೀಡಬಾರದು ಎಂದು ಕೋರ್ಟ್ಗೆ ಮನವಿ ಮಾಡಿದರು.
ಆದರೆ ಈ ವಾದಕ್ಕೆ ಪ್ರತ್ಯುತ್ತರಿಸಿದ ಆರೋಪಿಗಳ ಪರ ವಕೀಲರು, ಘಟನೆಯಲ್ಲಿ ಯಾವುದೇ ಹಿಂಸಾಚಾರ ನಡೆದಿಲ್ಲ. ಹೀಗಾಗಿ ಜಾಮೀನು ನೀಡಬೇಕೆಂದು ಕೋರಿಕೊಂಡರು. ಅವರ ಕೋರಿಕೆಯನ್ನು ಮನ್ನಿಸಿದ ಮದ್ರಾಸ್ ಹೈಕೋರ್ಟ್ ಇಬ್ಬರಿಗೂ ಜಾಮೀನು ನೀಡಿತು.
ಇದನ್ನೂ ಓದಿ: ಕರ್ನಾಟಕದ ಆಕ್ಸಿಜನ್ ಕೋಟಾ ಹೆಚ್ಚಿಸ್ತೀರೋ ಇಲ್ಲವೋ? ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಖಡಕ್ ಎಚ್ಚರಿಕೆ
(Madras High Court grants bail accused slogans against PM Narendra Modi)