Ladakh earthquake: ಲಡಾಖ್‌ನ ಕಾರ್ಗಿಲ್​​ನಲ್ಲಿ 4.4 ತೀವ್ರತೆಯ ಭೂಕಂಪ

|

Updated on: Nov 14, 2023 | 4:03 PM

ಲಡಾಖ್‌ನಲ್ಲಿ (Ladakh) 4.4 ತೀವ್ರತೆಯ ಭೂಕಂಪ (earthquake) ಇಂದು ಮಧ್ಯಾಹ್ನ 1:08 ಕ್ಕೆ ಸಂಭವಿಸಿದೆ. ಭೂಕಂಪನ ಕೇಂದ್ರ ತಿಳಿಸಿರುವಂತೆ ಲಡಾಖ್‌ನ ಕಾರ್ಗಿಲ್​​ನಲ್ಲಿ (Kargil) ಸಂಭವಿಸಿದೆ ಎಂದು ಹೇಳಲಾಗಿದೆ.

Ladakh earthquake: ಲಡಾಖ್‌ನ ಕಾರ್ಗಿಲ್​​ನಲ್ಲಿ 4.4 ತೀವ್ರತೆಯ ಭೂಕಂಪ
ಸಾಂದರ್ಭಿಕ ಚಿತ್ರ
Follow us on

ಲಡಾಖ್​​, ನ.14: ಲಡಾಖ್‌ನಲ್ಲಿ (Ladakh) 4.4 ತೀವ್ರತೆಯ ಭೂಕಂಪ (earthquake) ಇಂದು ಮಧ್ಯಾಹ್ನ 1:08 ಕ್ಕೆ ಸಂಭವಿಸಿದೆ. ಭೂಕಂಪನ ಕೇಂದ್ರ ತಿಳಿಸಿರುವಂತೆ ಲಡಾಖ್‌ನ ಕಾರ್ಗಿಲ್​​ನಲ್ಲಿ (Kargil) ಸಂಭವಿಸಿದೆ ಎಂದು ಹೇಳಲಾಗಿದೆ. ಭೂಕಂಪನ ತೀವ್ರತೆ 4.4 ಆಗಿದ್ದು, 14-11-2023ರ 13:08:50 ISTರಂದು ಸಂಭವಿಸಿದೆ. ಭೂಕಂಪನ ಲ್ಯಾಟ್: 37.28 & ಉದ್ದ: 75.21, ಆಳ: 20 ಕಿಮೀ , ಸ್ಥಳ: ಕಾರ್ಗಿಲ್‌ನ 314ಕಿಮೀ NNW, ಲಡಾಖ್ ಎಂದು ಭೂಕಂಪನ ಕೇಂದ್ರ ಎಕ್ಸ್​​ನಲ್ಲಿ ತಿಳಿಸಿದೆ. ಶ್ರೀಲಂಕಾದಲ್ಲೂ 6.2 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಬಗ್ಗೆ ಭೂಕಂಪನ ಕೇಂದ್ರ ಎಕ್ಸ್​​ನಲ್ಲಿ ಹಂಚಿಕೊಂಡಿದೆ. ಇದರ ಪರಿಣಾಮವಾಗಿ ಭಾರತದ ಲಡಾಖ್​​ನಲ್ಲೂ  ಭೂಕಂಪ ಸಂಭವಿಸಿದೆ ಎಂದು ಹೇಳಲಾಗಿದೆ.

ಶ್ರೀಲಂಕಾದ ಆಗ್ನೇಯಕ್ಕೆ 800 ಕಿ.ಮೀ ದೂರದಲ್ಲಿ ಹಿಂದೂ ಮಹಾಸಾಗರದಲ್ಲಿ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದ್ದು, ಶ್ರೀಲಂಕಾಕ್ಕೆ ಯಾವುದೇ ಅಪಾಯವಿಲ್ಲ ಎಂದು ಭೂವೈಜ್ಞಾನಿಕ ಸಮೀಕ್ಷೆ ಮತ್ತು ಗಣಿ ಬ್ಯೂರೋ ತಿಳಿಸಿದೆ. ಸೋಮವಾರ ದಕ್ಷಿಣ ಸುಡಾನ್ ಮತ್ತು ಉಗಾಂಡಾ ನಡುವಿನ ಗಡಿ ಭಾಗದಲ್ಲಿ 4.9 ತೀವ್ರತೆ ಭೂಕಂಪ ಸಂಭವಿಸಿದೆ. ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ (EMSC) ತಿಳಿಸಿದೆ.

 

 

 

Published On - 2:33 pm, Tue, 14 November 23