ಮಹಾರಾಷ್ಟ್ರ: ರೈಲಿನಲ್ಲಿ ಹಿಂದಿಯಲ್ಲಿ ಮಾತನಾಡಿದ್ದಕ್ಕೆ ಹಲ್ಲೆ, ಅವಮಾನ ತಾಳಲಾರದೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

ರೈಲಿನಲ್ಲಿ ಹಿಂದಿ(Hindi) ಭಾಷೆಯಲ್ಲಿ ಮಾತನಾಡಿದ್ದಕ್ಕೆ ವಿದ್ಯಾರ್ಥಿಯನ್ನು ಜನರು ಥಳಿಸಿರುವ ಘಟನೆ ಮಹಾರಾಷ್ಟ್ರದ ಕಲ್ಯಾಣ್​ನಲ್ಲಿ ನಡೆದಿದೆ. ಆದರೆ ಆಘಾತಕಾರಿ ಘಟನೆ ಏನೆಂದರೆ ವಿದ್ಯಾರ್ಥಿ ಅವಮಾನ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆಯಿಂದ ಉಂಟಾದ ಮಾನಸಿಕ ಒತ್ತಡವು ಅವನನ್ನು ಈ ತೀವ್ರ ಕ್ರಮಕ್ಕೆ ತಳ್ಳಿರಬಹುದು ಎಂದು ಆತನ ತಂದೆ ಹೇಳಿದ್ದಾರೆ. ಕೊಲ್ಸೆವಾಡಿ ಪೊಲೀಸರು ಆಕಸ್ಮಿಕ ಸಾವಿನ ವರದಿಯನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮಹಾರಾಷ್ಟ್ರ: ರೈಲಿನಲ್ಲಿ ಹಿಂದಿಯಲ್ಲಿ ಮಾತನಾಡಿದ್ದಕ್ಕೆ ಹಲ್ಲೆ, ಅವಮಾನ ತಾಳಲಾರದೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ
ಪ್ರಾತಿನಿಧಿಕ ಚಿತ್ರ

Updated on: Nov 21, 2025 | 9:12 AM

ಪುಣೆ, ನವೆಂಬರ್ 21: ರೈಲಿನಲ್ಲಿ ಹಿಂದಿ(Hindi) ಭಾಷೆಯಲ್ಲಿ ಮಾತನಾಡಿದ್ದಕ್ಕೆ ವಿದ್ಯಾರ್ಥಿಯನ್ನು ಜನರು ಥಳಿಸಿರುವ ಘಟನೆ ಮಹಾರಾಷ್ಟ್ರದ ಕಲ್ಯಾಣ್​ನಲ್ಲಿ ನಡೆದಿದೆ. ಆದರೆ ಆಘಾತಕಾರಿ ಘಟನೆ ಏನೆಂದರೆ ವಿದ್ಯಾರ್ಥಿ ಅವಮಾನ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆಯಿಂದ ಉಂಟಾದ ಮಾನಸಿಕ ಒತ್ತಡವು ಅವನನ್ನು ಈ ತೀವ್ರ ಕ್ರಮಕ್ಕೆ ತಳ್ಳಿರಬಹುದು ಎಂದು ಆತನ ತಂದೆ ಹೇಳಿದ್ದಾರೆ. ಕೊಲ್ಸೆವಾಡಿ ಪೊಲೀಸರು ಆಕಸ್ಮಿಕ ಸಾವಿನ ವರದಿಯನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಅರ್ನವ್ ಮುಲುಂದ್‌ನ ಕೇಳ್ಕರ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿಜ್ಞಾನ ವಿದ್ಯಾರ್ಥಿಯಾಗಿದ್ದ. ನವೆಂಬರ್ 18 ರ ಬೆಳಗ್ಗೆ, ಆತ ಅಂಬರ್ನಾಥ್-ಕಲ್ಯಾಣ್ ಸ್ಥಳೀಯ ರೈಲಿನಲ್ಲಿ ಕಾಲೇಜಿಗೆ ಪ್ರಯಾಣಿಸುತ್ತಿದ್ದಾಗ, ಕೆಲವು ಪ್ರಯಾಣಿಕರೊಂದಿಗೆ ಸಣ್ಣ ಜಗಳ ನಡೆಯಿತು. ಅವರ ತಂದೆ ಪೊಲೀಸರಿಗೆ ನೀಡಿದ ಹೇಳಿಕೆಯ ಪ್ರಕಾರ, 4–5 ಜನರು ಅರ್ನವ್ ಮೇಲೆ ಹಲ್ಲೆ ನಡೆಸಿ ಮರಾಠಿ ಮಾತನಾಡದಿದ್ದಕ್ಕಾಗಿ ಪ್ರಶ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಭಯಭೀತರಾದ ಅರ್ನವ್ ಥಾಣೆ ನಿಲ್ದಾಣದಲ್ಲಿ ರೈಲಿನಿಂದ ಇಳಿದು ಮನೆಗೆ ಹೋಗುವ ಮೊದಲು ಮುಲುಂಡ್‌ಗೆ ಮರಳಿದ್ದ. ಮನೆಗೆ ತಲುಪಿದ ನಂತರ, ಅರ್ನವ್ ಮಧ್ಯಾಹ್ನ ಮತ್ತೆ ತನ್ನ ತಂದೆಯೊಂದಿಗೆ ಮಾತನಾಡಿ ಆತಂಕ ವ್ಯಕ್ತಪಡಿಸಿದ್ದ ಎಂದು ತಂದೆ ಬೇಸರ ವ್ಯಕ್ತಪಡಿಸಿದ್ದಾರೆ. ಅವನ ತಂದೆ ಧೈರ್ಯ ತುಂಬಲು ಪ್ರಯತ್ನಿಸಿದ್ದರು ಆದರೆ ಅರ್ನವ್ ಸಮಾಧಾನಗೊಳ್ಳಲೇ ಇಲ್ಲ.

ಅರ್ನವ್ ಅವರ ತಂದೆ ಜಿತೇಂದ್ರ ಖೈರೆ ಸಂಜೆ ಕೆಲಸದಿಂದ ಮನೆಗೆ ಬಂದಾಗ, ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಕಂಡರು. ಅಕ್ಕಪಕ್ಕದ ಮನೆಯವರ ಸಹಾಯದಿಂದ, ಬಾಗಿಲು ಒಡೆದು ತೆರೆದಾಗ, ಅರ್ನವ್ ದುಪಟ್ಟಾದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾ. ಅರ್ನವ್ ಅವರನ್ನು ರುಕ್ಮಿಣಿಬಾಯಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ರಾತ್ರಿ 9.05 ಕ್ಕೆ ಆತ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಭಾಷಾ ವಿವಾದದಿಂದಾಗಿ ಹಲ್ಲೆಯಿಂದ ಉಂಟಾದ ಭಯ ಮತ್ತು ಮಾನಸಿಕ ಒತ್ತಡದಿಂದಾಗಿ ತನ್ನ ಮಗ ಈ ಕಠಿಣ ಕ್ರಮ ಕೈಗೊಂಡಿದ್ದಾನೆ ಎಂದು ಜಿತೇಂದ್ರ ಖೈರೆ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಮಗ್ರ ತನಿಖೆ ನಡೆಸಿ ಅರ್ನವ್‌ಗೆ ನ್ಯಾಯ ಒದಗಿಸಬೇಕೆಂದು ಅವರು ಒತ್ತಾಯಿಸಿದರು.

ಮತ್ತಷ್ಟು ಒದಿ: ಹಿಂದಿ ಹೇರಿಕೆ ವಿರೋಧಿಸಿ ಉತ್ತರ ಭಾರತದ ಸಂಸದರಿದ್ದ ಬೆಂಗಳೂರಿನ ಹೋಟೆಲ್​​ಗೆ ಕರವೇ ಮುತ್ತಿಗೆ

ಕೊಲ್ಸೆವಾಡಿ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ರೈಲು ಪ್ರಯಾಣದ ಸಮಯದಲ್ಲಿ ನಡೆದ ಹಲ್ಲೆಯ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆಯಲು ಪ್ರಯತ್ನಗಳು ನಡೆಯುತ್ತಿವೆ. ಇತ್ತೀಚಿನ ತಿಂಗಳುಗಳಲ್ಲಿ ಮರಾಠಿ-ಹಿಂದಿ ಉದ್ವಿಗ್ನತೆಗಳು ಹೆಚ್ಚುತ್ತಿರುವ ನಡುವೆ ಅರ್ನವ್ ಸಾವು ರಾಜ್ಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ