AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದಿ ಹೇರಿಕೆ ವಿರೋಧಿಸಿ ಉತ್ತರ ಭಾರತದ ಸಂಸದರಿದ್ದ ಬೆಂಗಳೂರಿನ ಹೋಟೆಲ್​​ಗೆ ಕರವೇ ಮುತ್ತಿಗೆ

ಹಿಂದಿ ಹೇರಿಕೆ ವಿರೋಧಿಸಿ ಉತ್ತರ ಭಾರತದ ಸಂಸದರಿದ್ದ ಬೆಂಗಳೂರಿನ ಹೋಟೆಲ್​​ಗೆ ಕರವೇ ಮುತ್ತಿಗೆ

Kiran Surya
| Updated By: ಸುಷ್ಮಾ ಚಕ್ರೆ|

Updated on:Sep 25, 2025 | 9:48 PM

Share

ತಾಜ್‌ ವೆಸ್ಟೆಂಡ್‌ ಹೋಟೆಲ್‌ನಲ್ಲಿ 3 ದಿನಗಳ ಕಾರ್ಯಕ್ರಮ ನಡೆಯುತ್ತಿತ್ತು. ಹಿಂದಿ ಮಾತನಾಡುವವರಿಗೆ ಉತ್ತಮ ವೇತನ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ಕಚೇರಿಯಲ್ಲಿ ಹಿಂದಿ ಹೇರಿಕೆಯ ವಿಚಾರ ಸಂಕಿರಣ ನಡೆದಿದೆ. ಹಿಂದಿಯನ್ನು ಕಟ್ಟುವ ಕೆಟ್ಟ ಕನಸು ಕೇಂದ್ರ ಸರ್ಕಾರಕ್ಕಿದೆ ಎಂದು ಬೆಂಗಳೂರಿನಲ್ಲಿ ಕರವೇ ಅಧ್ಯಕ್ಷ ನಾರಾಯಣಗೌಡ ಹೇಳಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 25: ಬೆಂಗಳೂರಿನ ತಾಜ್‌ ವೆಸ್ಟೆಂಡ್‌ ಹೋಟೆಲ್‌ನಲ್ಲಿ ಉತ್ತರ ಭಾರತದ ಸಂಸದರ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಅದು ಹಿಂದಿ ಹೇರಿಕೆಯ ಬಗ್ಗೆ ಕಾರ್ಯಕ್ರಮ ಎಂದು ಆಕ್ಷೇಪ ವ್ಯಕ್ತಪಡಿಸಿದ ಕರವೇ (Karave) ನಾರಾಯಣ ಗೌಡ ಬಣದ ಕಾರ್ಯಕರ್ತರು ತಾಜ್‌ ವೆಸ್ಟೆಂಡ್‌ ಹೋಟೆಲ್‌ಗೆ ನುಗ್ಗಿದ್ದಾರೆ. ಕೇಂದ್ರ ಸರ್ಕಾರದ ಭಾಷಾ ನೀತಿ ಅಂತ ಹೇಳಿಕೊಂಡು ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ತಾಜ್‌ ವೆಸ್ಟೆಂಡ್‌ ಹೋಟೆಲ್‌ನಲ್ಲಿ 3 ದಿನಗಳ ಕಾರ್ಯಕ್ರಮ ನಡೆಯುತ್ತಿತ್ತು. ಹಿಂದಿ ಮಾತನಾಡುವವರಿಗೆ ಉತ್ತಮ ವೇತನ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ಕಚೇರಿಯಲ್ಲಿ ಹಿಂದಿ ಹೇರಿಕೆಯ ವಿಚಾರ ಸಂಕಿರಣ ನಡೆದಿದೆ. ಹಿಂದಿಯನ್ನು ಕಟ್ಟುವ ಕೆಟ್ಟ ಕನಸು ಕೇಂದ್ರ ಸರ್ಕಾರಕ್ಕಿದೆ ಎಂದು ಬೆಂಗಳೂರಿನಲ್ಲಿ ಕರವೇ ಅಧ್ಯಕ್ಷ ನಾರಾಯಣಗೌಡ ಹೇಳಿದ್ದಾರೆ.

ಈ ವಿಚಾರ ಸಂಕಿರಣದಲ್ಲಿ 16 ಅಧಿಕಾರಿಗಳು ಭಾಗಿಯಾಗಿದ್ದರು. ಒತ್ತಾಯ ಪೂರ್ವಕವಾಗಿ ಪ್ರಾದೇಶಿಕ ಭಾಷೆಯ ಮೇಲೆ ಹಿಂದಿಯ ಹೇರಿಕೆ ಮಾಡಲಾಗುತ್ತಿದೆ. ಅದನ್ನು ವಿರೋಧಿಸಿದ ನಮ್ಮ ಬ್ಯಾನರ್ ಹರಿದುಹಾಕಿದ್ದಾರೆ, ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಚಾರ ಸಂಕಿರಣದ ಬಗ್ಗೆ ಪೊಲೀಸರಿಗೆ ಮಾಹಿತಿಯೂ ಇಲ್ಲ. ಅ.18ರಂದು ಹಿಂದಿ ವಿರೋಧಿಸಿ ವಿಚಾರ ಸಂಕಿರಣ ಮಾಡುತ್ತೇವೆ. ನವೆಂಬರ್ 17ರಂದು ದೆಹಲಿಯಲ್ಲಿ ಹೋರಾಟ ಮಾಡುತ್ತೇವೆ. ಹಿಂದಿಯನ್ನು ನಾವು ಸಹಿಸಲ್ಲ, ಬಲವಂತ ಹೇರಿಕೆ ಅಗತ್ಯವೇ ಇಲ್ಲ ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ಹೇಳಿದ್ದಾರೆ.

ಬೆಂಗಳೂರಿನ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published on: Sep 25, 2025 09:48 PM