AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಡಿ ದಾಳಿಯಿಂದ ಪವಾಡದಂತೆ ಪಾರಾದ ವ್ಯಕ್ತಿ; ಕಾರೊಳಗೆ ಹಾರಿ ಜೀವ ಉಳಿಸಿಕೊಂಡ ವಿಡಿಯೋ ವೈರಲ್

ಕರಡಿ ದಾಳಿಯಿಂದ ಪವಾಡದಂತೆ ಪಾರಾದ ವ್ಯಕ್ತಿ; ಕಾರೊಳಗೆ ಹಾರಿ ಜೀವ ಉಳಿಸಿಕೊಂಡ ವಿಡಿಯೋ ವೈರಲ್

ಸುಷ್ಮಾ ಚಕ್ರೆ
|

Updated on:Sep 26, 2025 | 9:29 PM

Share

ರಷ್ಯಾದ ವ್ಯಕ್ತಿಯೊಬ್ಬರು ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದ ತಮ್ಮ ಕಾರಿನ ಬಳಿ ಬರುತ್ತಿದ್ದಂತೆ ಅಲ್ಲೇ ಹಿಂದಿದ್ದ ಪೊದೆಯಲ್ಲಿ ಅವಿತು ಕುಳಿತಿದ್ದ ಕರಡಿ ಅವರ ಮೇಲೆ ಎರಗಿದೆ. ಆದರೆ, ತಕ್ಷಣ ಎಚ್ಚೆತ್ತುಕೊಂಡ ಆ ವ್ಯಕ್ತಿ ತಕ್ಷಣ ಕಾರಿನ ಡೋರ್ ತೆಗೆದು ತಮ್ಮ ಕಾರಿನೊಳಗೆ ಜಂಪ್ ಮಾಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಕೂದಲೆಳೆ ಅಂತರದಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ಕಾರಿನೊಳಗೆ ಹಾರುವುದು ಒಂದು ಸೆಕೆಂಡ್ ತಡವಾಗಿದ್ದರೂ ಕರಡಿಯ ದಾಳಿಗೆ ತುತ್ತಾಗುತ್ತಿದ್ದರು.

ನವದೆಹಲಿ, ಸೆಪ್ಟೆಂಬರ್ 25: ರಷ್ಯಾದ ವ್ಯಕ್ತಿಯೊಬ್ಬರು ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದ ತಮ್ಮ ಕಾರಿನ ಬಳಿ ಬರುತ್ತಿದ್ದಂತೆ ಅಲ್ಲೇ ಹಿಂದಿದ್ದ ಪೊದೆಯಲ್ಲಿ ಅವಿತು ಕುಳಿತಿದ್ದ ಕರಡಿ (Bear Attack) ಅವರ ಮೇಲೆ ಎರಗಿದೆ. ಆದರೆ, ತಕ್ಷಣ ಎಚ್ಚೆತ್ತುಕೊಂಡ ಆ ವ್ಯಕ್ತಿ ತಕ್ಷಣ ಕಾರಿನ ಡೋರ್ ತೆಗೆದು ತಮ್ಮ ಕಾರಿನೊಳಗೆ ಜಂಪ್ ಮಾಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಕೂದಲೆಳೆ ಅಂತರದಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ಕಾರಿನೊಳಗೆ ಹಾರುವುದು ಒಂದು ಸೆಕೆಂಡ್ ತಡವಾಗಿದ್ದರೂ ಕರಡಿಯ ದಾಳಿಗೆ ತುತ್ತಾಗುತ್ತಿದ್ದರು. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೇ ಕರಡಿ ರಷ್ಯಾದ ಪೆಟ್ರೋಪಾವ್ಲೋವ್ಸ್ಕ್-ಕಮ್ಚಾಟ್ಸ್ಕಿಯ ಶಾಲೆಯ ಬಳಿ ಮಹಿಳೆಯ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. 12 ವರ್ಷದ ಓರ್ವ ಶಾಲಾ ಬಾಲಕನ ಮೇಲೂ ಕರಡಿ ದಾಳಿ ನಡೆಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published on: Sep 25, 2025 10:26 PM