AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs WI: ಫಿಟ್ ಇಲ್ಲ ಎಂದ ಅಜಿತ್ ಅಗರ್ಕರ್; ಫಿಟ್ನೆಸ್ ವಿಡಿಯೋ ಹರಿಬಿಟ್ಟ ಸರ್ಫರಾಜ್

IND vs WI: ಫಿಟ್ ಇಲ್ಲ ಎಂದ ಅಜಿತ್ ಅಗರ್ಕರ್; ಫಿಟ್ನೆಸ್ ವಿಡಿಯೋ ಹರಿಬಿಟ್ಟ ಸರ್ಫರಾಜ್

ಪೃಥ್ವಿಶಂಕರ
|

Updated on: Sep 25, 2025 | 9:54 PM

Share

Sarfaraz Khan Fitness Controversy: ಬಿಸಿಸಿಐ ಸರ್ಫರಾಜ್ ಖಾನ್ ಅವರನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಫಿಟ್‌ನೆಸ್ ಕೊರತೆಯನ್ನು ಕಾರಣವೆಂದು ನೀಡಿದೆ. ಆದರೆ ಸರ್ಫರಾಜ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಫಿಟ್‌ನೆಸ್ ಪರೀಕ್ಷೆಯ ವೀಡಿಯೊಗಳನ್ನು ಹಂಚಿಕೊಂಡು ಬಿಸಿಸಿಐಗೆ ತಿರುಗೇಟು ನೀಡಿದ್ದಾರೆ. ಇದರಿಂದ ಅಜಿತ್ ಅಗರ್ಕರ್ ಅವರ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಅಭಿಮಾನಿಗಳು ಬಿಸಿಸಿಐನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2025 ರ ಏಷ್ಯಾಕಪ್ ನಂತರ ಟೀಂ ಇಂಡಿಯಾ. ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ . ಈ ಸರಣಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಿದೆ . ಶುಭ್​ಮನ್ ಗಿಲ್ ತಂಡವನ್ನು ಮುನ್ನಡೆಸಲಿದ್ದಾರೆ. ರವೀಂದ್ರ ಜಡೇಜಾ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ . ಆದಾಗ್ಯೂ, ಯುವ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಸರ್ಫರಾಜ್ ಖಾನ್ ಅವರನ್ನು ಆಯ್ಕೆ ಮಾಡದಿರಲು ಕಾರಣವನ್ನು ನೀಡಿರುವ ಬಿಸಿಸಿಐ ಫಿಟ್ನೆಸ್ ಕೊರತೆಯನ್ನು ಉಲ್ಲೇಖಿಸಿದೆ. ಇದೀಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಸರ್ಫರಾಜ್ ಖಾನ್ ಬಿಸಿಸಿಐಗೆ ತಿರುಗೇಟು ನೀಡಿದ್ದಾರೆ.

ತಂಡದ ಘೋಷಣೆಯ ಸಮಯದಲ್ಲಿ, ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರ ಬಳಿ ಸರ್ಫರಾಜ್ ಅವರನ್ನು ಕೈಬಿಟ್ಟ ಬಗ್ಗೆ ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಅಗರ್ಕರ್, ಸರ್ಫರಾಜ್ ಗಾಯಗೊಂಡಿದ್ದರಿಂದ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿಲ್ಲ ಎಂದ ಪ್ರತಿಕ್ರಿಯಿಸಿದರು. ಆದರೆ ಸರ್ಫರಾಜ್ ಖಾನ್ ಇತ್ತೀಚೆಗೆ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಹೀಗಾಗಿ ಅವರ ಆಯ್ಕೆ ಖಚಿತವಾಯಿತು. ಆದಾಗ್ಯೂ, ಬಿಸಿಸಿಐ ಅವರನ್ನು ಕಡೆಗಣಿಸಿದೆ. ಇದೆಲ್ಲದರ ನಡುವೆ, ಸರ್ಫರಾಜ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಜಿತ್ ಅಗರ್ಕರ್​ಗೆ ಟಾಂಗ್ ಕೊಟ್ಟಿದ್ದಾರೆ.

ವಾಸ್ತವವಾಗಿ, ತಂಡವನ್ನು ಘೋಷಿಸಿದ ಸ್ವಲ್ಪ ಸಮಯದ ನಂತರ ಸರ್ಫರಾಜ್ ಖಾನ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ . ಈ ಪೋಸ್ಟ್ನಲ್ಲಿ , ಅವರು ಫಿಟ್ನೆಸ್ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿರುವ ಎರಡು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊಗಳಲ್ಲಿ ಒಂದು ಬ್ರಾಂಕೋ ಪರೀಕ್ಷೆ ಆಗಿದೆ . ಈ ವೀಡಿಯೊಗಳಲ್ಲಿ ಅವರು ಸಾಕಷ್ಟು ಫಿಟ್ ಆಗಿದ್ದಾರೆ . ಇದರ ನಂತರ, ಅಜಿತ್ ಅಗರ್ಕರ್ ಅವರ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಕೆಲವು ಅಭಿಮಾನಿಗಳು ಅಜಿತ್ ಅಗರ್ಕರ್ ಸರ್ಫರಾಜ್ ಬಗ್ಗೆ ಸುಳ್ಳು ಹೇಳಿದ್ದಾರೆ ಎಂದರೆ, ಇನ್ನು ಕೆಲವರು ಬಿಸಿಸಿಐ ಪ್ರತಿಭಾವಂತ ಆಟಗಾರರಿಗೆ ಮೋಸ ಮಾಡುತ್ತಿದೆ ಎಂದು ದೂರಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ