ಸುದೀಪ್ ಹೇಳಿದ ಮಾತಿನಿಂದ ನನಗೆ ತೊಂದರೆ ಆಯ್ತು: ತುಕಾಲಿ ಸಂತು ಹೀಗೆ ಹೇಳಿದ್ದು ಯಾಕೆ?
ಹಾಸ್ಯ ನಟ ತುಕಾಲಿ ಸಂತೋಷ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಸ್ಪರ್ಧಿಸಿದ್ದರು. ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಆರಂಭ ಆಗುತ್ತಿದೆ. ತುಕಾಲಿ ಸಂತೋಷ್ ಅವರು ತಮ್ಮ ಬಿಗ್ ಬಾಸ್ ಜರ್ನಿಯನ್ನು ಮೆಲುಕು ಹಾಕಿದ್ದಾರೆ. ವಿಡಿಯೋ ಇಲ್ಲಿದೆ..
ಹಾಸ್ಯ ನಟ ತುಕಾಲಿ ಸಂತೋಷ್ (Tukali Santhosh) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಸ್ಪರ್ಧಿಸಿದ್ದರು. ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಆರಂಭ ಆಗುತ್ತಿದೆ. ತುಕಾಲಿ ಸಂತೋಷ್ ಅವರು ತಮ್ಮ ಬಿಗ್ ಬಾಸ್ (Bigg Boss Kannada) ಜರ್ನಿಯನ್ನು ಮೆಲುಕು ಹಾಕಿದ್ದಾರೆ. ‘ಮೊದಲ ವಾರ ಚೆನ್ನಾಗಿ ಕಾಮಿಡಿ ಮಾಡಿದ್ದೆ. ನಾನೇ ಕಿಂಗ್ ಎಂದುಕೊಂಡಿದ್ದೆ. ಆದರೆ ಸುದೀಪ್ (Kichcha Sudeep) ಸರ್ ಬಂದು ಅದು ಕಾಮಿಡಿ ಅಲ್ಲ, ಹರ್ಟ್ ಮಾಡುತ್ತಿದ್ದೀರಿ ಎಂದರು. ಆಮೇಲೆ ಎಲ್ಲರೂ ನನ್ನನ್ನೇ ನಾಮಿನೇಟ್ ಮಾಡಿದರು. ಅದರಿಂದ ನನಗೆ ದೊಡ್ಡ ಹೊಡೆತ ಬಿತ್ತು. ಸುದೀಪಣ್ಣ ನೆಗೆಟಿವ್ ಆಗಿ ಹೇಳಿದ್ದು ತುಂಬಾ ಪ್ರಾಬ್ಲಂ ಆಯ್ತು. ಬೇರೆ ರೀತಿ ಆಟ ಶುರು ಮಾಡಿದೆ. ಸುದೀಪಣ್ಣ ಸಿಕ್ಕಾಪಟ್ಟೆ ಇಷ್ಟಪಟ್ಟರು’ ಎಂದು ತುಕಾಲಿ ಸಂತೋಷ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

