Maharashtra: ನಾಗ್ಪುರದಲ್ಲಿ ಟ್ರಕ್ ಹರಿದು 50 ಕುರಿಗಳು ಸ್ಥಳದಲ್ಲೇ ಸಾವು

|

Updated on: Jul 12, 2023 | 9:00 AM

ಮಹಾರಾಷ್ಟ್ರದ ಭಂಡಾರಾ-ನಾಗ್ಪುರ ಹೆದ್ದಾರಿಯಲ್ಲಿ ವೇಗವಾಗಿ ಬಂದ ಟ್ರಕ್ ಹರಿದ ಪರಿಣಾಮ 50 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ನಾಗ್ಪುರ ಜಿಲ್ಲೆಯ ಮೌಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

Maharashtra: ನಾಗ್ಪುರದಲ್ಲಿ ಟ್ರಕ್ ಹರಿದು 50 ಕುರಿಗಳು ಸ್ಥಳದಲ್ಲೇ ಸಾವು
ಕುರಿಗಳು(ಸಾಂದರ್ಭಿಕ ಚಿತ್ರ)
Follow us on

ಮಹಾರಾಷ್ಟ್ರದ ಭಂಡಾರಾ-ನಾಗ್ಪುರ ಹೆದ್ದಾರಿಯಲ್ಲಿ ವೇಗವಾಗಿ ಬಂದ ಟ್ರಕ್ ಹರಿದ ಪರಿಣಾಮ 50 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ನಾಗ್ಪುರ ಜಿಲ್ಲೆಯ ಮೌಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

ಪೊಲೀಸರ ಪ್ರಕಾರ ಗುಜರಾತ್‌ನ ಕಚ್‌ನ ನಿವಾಸಿ ಗೋವಾ ರಬ್ಬಾನಿ (53) ಎಂಬುವವರು ಮುಂಜಾನೆ 3.15 ರ ಸುಮಾರಿಗೆ ಚಾಪೆಗಡಿ ಕುಹಿ ಪ್ರದೇಶದ ಕಡೆಗೆ ಕುರಿ ಹಿಂಡನ್ನು ತೆಗೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬಂದ ಟ್ರಕ್ ಕುರಿಗಳ ಮೇಲೆ ಹರಿದಿದೆ.

50 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, 15 ಕುರಿಗಳು ಗಂಭೀರವಾಗಿ ಗಾಯಗೊಂಡಿದ್ದು, ಅಪಘಾತ ಸಂಭವಿಸಿದ ತಕ್ಷಣ ಟ್ರಕ್ ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದಾನೆ ಎಂದು ಅವರು ಹೇಳಿದರು.

ಅಪಘಾತದಿಂದ ಕುರುಬರಿಗೆ 5 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ