ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಸಿಬ್ಬಂದಿಗೆ ದೀಪಾವಳಿ ಬೋನಸ್ ಘೋಷಿಸಿದ ಮಹಾರಾಷ್ಟ್ರ ಸರ್ಕಾರ

ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಗೂ ಮಹಾರಾಷ್ಟ್ರ ಸರ್ಕಾರ ಸಿಬ್ಬಂದಿಗೆ ದೀಪಾವಳಿ ಬೋನಸ್ ಘೋಷಿಸಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಂಗಳವಾರ ಕೆಳ ಹಂತದ ಸರ್ಕಾರಿ ನೌಕರರು, ಶಿಶುವಿಹಾರದ ಶಿಕ್ಷಕರು ಮತ್ತು ಆಶಾ ಕಾರ್ಯಕರ್ತೆಯರಿಗೆ ದೀಪಾವಳಿ ಬೋನಸ್ ಘೋಷಿಸಿದ್ದಾರೆ.

ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಸಿಬ್ಬಂದಿಗೆ ದೀಪಾವಳಿ ಬೋನಸ್ ಘೋಷಿಸಿದ ಮಹಾರಾಷ್ಟ್ರ ಸರ್ಕಾರ
ಏಕನಾಥ್ ಶಿಂಧೆ
Image Credit source: Hindustan Times

Updated on: Oct 15, 2024 | 5:11 PM

ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಗೂ ಮಹಾರಾಷ್ಟ್ರ ಸರ್ಕಾರ ಸಿಬ್ಬಂದಿಗೆ ದೀಪಾವಳಿ ಬೋನಸ್ ಘೋಷಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಂಗಳವಾರ ಕೆಳ ಹಂತದ ಸರ್ಕಾರಿ ನೌಕರರು, ಶಿಶುವಿಹಾರದ ಶಿಕ್ಷಕರು ಮತ್ತು ಆಶಾ ಕಾರ್ಯಕರ್ತೆಯರಿಗೆ ದೀಪಾವಳಿ ಬೋನಸ್ ಘೋಷಿಸಿದ್ದಾರೆ.

ನವೆಂಬರ್ 20 ರಂದು ಮಹಾರಾಷ್ಟ್ರ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗವು ಘೋಷಿಸುವ ಕೆಲವೇ ನಿಮಿಷಗಳ ಮೊದಲು ಈ ಬೆಳವಣಿಗೆ ನಡೆದಿದೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಯ ಎಲ್ಲಾ ಉದ್ಯೋಗಿಗಳಿಗೆ 28,000 ರೂಪಾಯಿಗಳ ದೀಪಾವಳಿ ಬೋನಸ್ ಅನ್ನು ಸರ್ಕಾರ ಘೋಷಿಸಿತು. ಇದು ಕಳೆದ ವರ್ಷ ಘೋಷಿಸಿದ್ದ ಬೋನಸ್‌ಗಿಂತ 3,000 ರೂ. ಹೆಚ್ಚಳವಾಗಿದೆ.

ಲಡ್ಕಿ ಬಹಿನ್ ಯೋಜನಾ ದೀಪಾವಳಿ ಬೋನಸ್ 2024ರ ಕಾರ್ಯಕ್ರಮದಡಿಯಲ್ಲಿ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ 4 ಮತ್ತು 5 ನೇ ಕಂತುಗಳನ್ನು ಒಳಗೊಂಡಂತೆ ರೂ 3,000 ಜಮಾ ಮಾಡುವುದಾಗಿ ಸರ್ಕಾರ ಹೇಳಿದೆ.

ಯೋಜನೆಯಡಿ, ವಾರ್ಷಿಕ 2.5 ಲಕ್ಷ ರೂ.ಗಿಂತ ಕಡಿಮೆ ಕುಟುಂಬದ ಆದಾಯ ಹೊಂದಿರುವ ಮಹಿಳೆಯರು ಮಾಸಿಕ ಸಹಾಯದಲ್ಲಿ 1,500 ರೂ. ನೀಡಲಾಗುತ್ತದೆ.

ಮತ್ತಷ್ಟು ಓದಿ: ಮಹಾರಾಷ್ಟ್ರ, ಜಾರ್ಖಂಡ್​ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟ

ಆಡಳಿತಾರೂಢ ಮಹಾಯುತಿ ಮತ್ತು ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ (ಎಂವಿಎ) ನಡುವೆ ತೀವ್ರ ಪೈಪೋಟಿ ಏರ್ಪಟ್ಟಿರುವ ಚುನಾವಣೆಗೆ ಮುನ್ನ ಏಕನಾಥ್ ಶಿಂಧೆ ಕಲ್ಯಾಣ ಯೋಜನೆ ಘೋಷಣೆಯ ಮೊರೆ ಹೋಗಿದ್ದಾರೆ. ಮಹಿಳೆಯರು, ವೃದ್ಧರು ಮತ್ತು ಯುವಕರನ್ನು ಗುರಿಯಾಗಿಸಿಕೊಂಡು ಸರ್ಕಾರ ಈ ವರ್ಷ ಎಂಟು ಪ್ರಮುಖ ಕಲ್ಯಾಣ ಯೋಜನೆಗಳನ್ನು ಅನಾವರಣಗೊಳಿಸಿದೆ.

ಮುಂಬೈಗೆ ಪ್ರವೇಶಿಸುವ ಲಘು ಮೋಟಾರು ವಾಹನಗಳು ಇನ್ನು ಮುಂದೆ ಯಾವುದೇ ಟೋಲ್ ಪಾವತಿಸುವ ಅಗತ್ಯವಿಲ್ಲ ಎಂದು ಸೋಮವಾರ ಮುಖ್ಯಮಂತ್ರಿ ಘೋಷಿಸಿದರು. ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (MSRTC) ಕೂಡ ಪ್ರಸ್ತಾವಿತ ಶೇ.10 ದರ ಏರಿಕೆಯನ್ನು ರದ್ದುಗೊಳಿಸಿದೆ.

ರಾಜ್ಯದ 48 ಸಂಸದೀಯ ಸ್ಥಾನಗಳಲ್ಲಿ 31 ಸ್ಥಾನಗಳನ್ನು ಎಂವಿಎ ಗೆದ್ದಿರುವ ಈ ವರ್ಷದ ಲೋಕಸಭೆ ಚುನಾವಣೆಯಲ್ಲಿ ಸೋಲಿನ ನಂತರ ಮಹಾಯುತಿ ಮೈತ್ರಿಕೂಟಕ್ಕೆ ಚುನಾವಣೆಗಳು ನಿರ್ಣಾಯಕವಾಗಿವೆ.

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ