ಮುಂಬೈ: ಮಹಾರಾಷ್ಟ್ರದ ಬುಲ್ದಾನಾದಲ್ಲಿ (Buldhana) ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Accident) ಆರು ಮಂದಿ ಮೃತಪಟ್ಟು, 20 ಮಂದಿ ಗಾಯಗೊಂಡಿದ್ದಾರೆ. ಪೊಲೀಸರ ಪ್ರಕಾರ, ಮಲ್ಕಾಪುರ ಪ್ರದೇಶದ ಎನ್‌ಎಚ್ 53 ರಲ್ಲಿ ನಂದೂರ್ ನಾಕಾ ಮೇಲ್ಸೇತುವೆಯಲ್ಲಿ ತಡರಾತ್ರಿ 2.30 ರ ಸುಮಾರಿಗೆ ಎರಡು ಬಸ್‌ಗಳು ಡಿಕ್ಕಿಯಾಗಿವೆ. ಬಾಲಾಜಿ ಟ್ರಾವೆಲ್ಸ್ ಹೆಸರಿನ ಕಂಪನಿಯ ಒಡೆತನದ ಬಸ್‌ಗಳಲ್ಲಿ ಒಂದು ಅಮರನಾಥ ಯಾತ್ರೆಯಿಂದ ಹಿಂಗೋಲಿ ಜಿಲ್ಲೆಗೆ ಮರಳುತ್ತಿದ್ದರೆ, ಇನ್ನೊಂದು ರಾಯಲ್ ಟ್ರಾವೆಲ್ಸ್ ಕಂಪನಿಯ ಮಾಲೀಕತ್ವದ ನಾಸಿಕ್ಮ್‌ಗೆ ತೆರಳುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಂದೂರ್ ನಾಕಾದಲ್ಲಿ ಒಂದು ಬಸ್ ಇನ್ನೊಂದನ್ನು ಹಿಂದಿಕ್ಕಿತು, ನಂತರ ಎರಡೂ ಡಿಕ್ಕಿ ಹೊಡೆದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡಿರುವ ಸುಮಾರು 20 ಮಂದಿಯನ್ನು ಬುಲ್ದಾನಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣಪುಟ್ಟ ಗಾಯಗಳೊಂಡಿರುವ 32 ಪ್ರಯಾಣಿಕರಿಗೆ ಸಮೀಪದ ಗುರುದ್ವಾರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಅಮರನಾಥದಿಂದ ಹಿಂತಿರುಗುತ್ತಿದ್ದ ಬಸ್ಸಿನ ಚಾಲಕ ಕೂಡ ಮೃತಪಟ್ಟವರಲ್ಲಿ ಸೇರಿದ್ದಾರೆ. ಬಸ್ ಅನ್ನು ರಸ್ತೆಯಿಂದ ತೆರವು ಮಾಡಲಾಗಿದ್ದು, ಸಂಚಾರವನ್ನು ಪುನಃಸ್ಥಾಪಿಸಲಾಗಿದೆ ಎಂದು ಹೆದ್ದಾರಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Andhra Pradesh: ಮಾನವೀಯತೆ ಸಾಕಾರಗೊಳಿಸಿದ ಆಂಧ್ರ ರೈಲ್ವೆ ಪೊಲೀಸರು ಕಚ್ಚಾ ಡೋಲಿ ಕಟ್ಟಿ ಮೃತ ದೇಹವನ್ನು ಹೊತ್ತೊಯ್ದರು!
ಇತ್ತೀಚಿಗೆ ಬುಲ್ದಾನಾ ಜಿಲ್ಲೆಯಲ್ಲಿ ನಡೆದ ಎರಡನೇ ದೊಡ್ಡ ಬಸ್ ಅಪಘಾತ ಇದಾಗಿದೆ. ಜುಲೈ 1 ರಂದು, ಜಿಲ್ಲೆಯ ಸಮೃದ್ಧಿ-ಮಹಾಮಾರ್ಗ್ ಎಕ್ಸ್‌ಪ್ರೆಸ್‌ವೇಯಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡು ಮೂವರು ಮಕ್ಕಳು ಸೇರಿದಂತೆ ಕನಿಷ್ಠ 25 ಜನರು ಸಜೀವ ದಹನವಾಗಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:20 pm, Sat, 29 July 23