Tamil Nadu: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪಟಾಕಿ ಗೋದಾಮಿನಲ್ಲಿ ಸ್ಫೋಟ: 9 ಸಾವು
ಇಂದು(ಶನಿವಾರ) ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಮೃತದೇಹಗಳ ಗುರುತುಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಕೃಷ್ಣಗಿರಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಕೃಷ್ಣಗಿರಿ ಜುಲೈ 29: ತಮಿಳುನಾಡಿನ (Tamil Nadu) ಕೃಷ್ಣಗಿರಿ (Krishnagiri)ಜಿಲ್ಲೆಯಲ್ಲಿ ಪಟಾಕಿ (firecracker) ಸಂಗ್ರಹಿಸಿಡುವ ಗೋದಾಮಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸುಮಾರು 9 ಜನರು ಸಾವಿಗೀಡಾಗಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ. ಇಂದು(ಶನಿವಾರ) ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ಮೃತರನ್ನು ಗೋಡೌನ್ ಮಾಲೀಕ ರವಿ, ಅವರ ಪತ್ನಿ ಜಯಶ್ರೀ, ಅವರ ಪುತ್ರಿ ರುತಿಕ್ಕ ಮತ್ತು ಮಗ ರುತೀಶ್ ಎಂದು ಗುರುತಿಸಲಾಗಿದೆ. ಗೋಡೌನ್ ಬಳಿ ರೆಸ್ಟೋರೆಂಟ್ ನಡೆಸುತ್ತಿದ್ದ ರಾಜೇಶ್ವರಿ, ವೆಲ್ಡಿಂಗ್ ಶಾಪ್ ಹೊಂದಿದ್ದ ಇಬ್ರಾಹಿಂ ಮತ್ತು ಇಬ್ರಾಹಿಂ, ವಾಟರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸರಸು ಮತ್ತು ಜೇಮ್ಸ್ ಕೂಡ ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
#WATCH | Few people feared dead in explosion in firecrackers factory in Krishnagiri district of Tamil Nadu; further details awaited pic.twitter.com/cOImAJy35y
— ANI (@ANI) July 29, 2023
ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಇದೀಗ ಕುಸಿದ ಕಟ್ಟಡದೊಳಗೆ ಸಿಲುಕಿರುವ ಜನರನ್ನು ರಕ್ಷಿಸುವ ಮತ್ತು ಸ್ಥಳದಿಂದ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಕೃಷ್ಣಗಿರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ.
ಇದನ್ನೂ ಓದಿ: Akhil Bharatiya Shiksha Samagam: ದೇಶದ ಭವಿಷ್ಯವನ್ನು ಬದಲಾಯಿಸುವ ಶಕ್ತಿ ಶಿಕ್ಷಣಕ್ಕಿದೆ: ಮೋದಿ
ಕಾರ್ಯಾಚರಣೆ ನಡೆಯುತ್ತಿದೆ.ಈ ಅಪಘಾತದಲ್ಲಿ ಗಾಯಗೊಂಡ 15 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು 5 ಮಂದಿ ಅವಶೇಷಗಳೊಳಗೆ ಸಿಲುಕಿದ್ದು, ಓರ್ವ ವ್ಯಕ್ತಿಯನ್ನು ರಕ್ಷಿಸಲಾಗಿದೆ ಎಂದು ರಕ್ಷಣಾ ಕ್ರಮವನ್ನು ಪರಿಶೀಲಿಸುತ್ತಿರುವ ಕೃಷ್ಣಗಿರಿ ಜಿಲ್ಲಾಧಿಕಾರಿ ಕೆ.ಎಂ.ಸರಯೂ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:26 pm, Sat, 29 July 23