Maharashtra Crisis: ಮಹಾರಾಷ್ಟ್ರದ ಬಂಡಾಯ ಸಚಿವರ ಖಾತೆಗಳನ್ನು ಬೇರೆ ಸಚಿವರಿಗೆ ಹಸ್ತಾಂತರಿಸಿದ ಸಿಎಂ ಉದ್ಧವ್ ಠಾಕ್ರೆ

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಸ್ತುತ ಗುವಾಹಟಿಯಲ್ಲಿ ಬೀಡುಬಿಟ್ಟಿರುವ 9 ಬಂಡಾಯ ಸಚಿವರ ಖಾತೆಗಳನ್ನು ಇತರ ಸಚಿವರಿಗೆ ಹಸ್ತಾಂತರಿಸಿದ್ದಾರೆ.

Maharashtra Crisis: ಮಹಾರಾಷ್ಟ್ರದ ಬಂಡಾಯ ಸಚಿವರ ಖಾತೆಗಳನ್ನು ಬೇರೆ ಸಚಿವರಿಗೆ ಹಸ್ತಾಂತರಿಸಿದ ಸಿಎಂ ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ
Image Credit source: India Today
Updated By: ಸುಷ್ಮಾ ಚಕ್ರೆ

Updated on: Jun 27, 2022 | 1:51 PM

ಮುಂಬೈ: ಒಂದೆಡೆ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು (Maharashtra Political Crisis) ತೀವ್ರಗೊಂಡು, ಬಂಡಾಯ ಶಾಸಕರು ಸುಪ್ರೀಂ ಕೋರ್ಟ್​ (Supreme Court) ಮೆಟ್ಟಿಲೇರಿದ್ದಾರೆ. ಇನ್ನೊಂದೆಡೆ ರೆಬೆಲ್ ನಾಯಕರಿಗೆ ಬಿಸಿ ಮುಟ್ಟಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ಇಂದು 9 ಬಂಡಾಯ ಸಚಿವರ ಉಸ್ತುವಾರಿಯನ್ನು ತೆಗೆದು ತಮ್ಮ ಸಂಪುಟದ ಇತರ ಸಚಿವರಿಗೆ ಹಸ್ತಾಂತರಿಸಿದ್ದಾರೆ. ಮುಂಬೈ ತೊರೆದು ಗುವಾಹಟಿಯ ರೆಸಾರ್ಟ್​ನಲ್ಲಿರುವ ಸಚಿವರ ಗೈರುಹಾಜರಿಯಿಂದ ಆಡಳಿತ ಕಾರ್ಯಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಧಿಕಾರ ಹಸ್ತಾಂತರಿಸುವ ನಿರ್ಧಾರ ಕೈಗೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಸ್ತುತ ಗುವಾಹಟಿಯಲ್ಲಿ ಬೀಡುಬಿಟ್ಟಿರುವ 9 ಬಂಡಾಯ ಸಚಿವರ ಖಾತೆಗಳನ್ನು ಇತರ ಸಚಿವರಿಗೆ ಹಸ್ತಾಂತರಿಸಿದ್ದಾರೆ. ಆಡಳಿತದ ಅನುಕೂಲಕ್ಕಾಗಿ ಬಂಡಾಯ ಸಚಿವರ ಖಾತೆಗಳನ್ನು ಇತರ ಸಚಿವರಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಪಾಳಯಕ್ಕೆ ಇದುವರೆಗೆ ಮಹಾರಾಷ್ಟ್ರದ 9 ಸಚಿವರು ಸೇರಿದ್ದಾರೆ. ಏಕನಾಥ ಶಿಂಧೆ ಅವರ ನಗರಾಭಿವೃದ್ಧಿ, ಲೋಕೋಪಯೋಗಿ (ಸಾರ್ವಜನಿಕ ಉದ್ದಿಮೆಗಳು) ಇಲಾಖೆಗಳನ್ನು ಸುಭಾಷ್ ದೇಸಾಯಿಗೆ ನೀಡಲಾಗಿದೆ. ಗುಲಾಬರಾವ್ ರಘುನಾಥ ಪಾಟೀಲ್ ಅವರ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಜವಾಬ್ದಾರಿಯನ್ನು ಅನಿಲ್ ಪರಬ್ ಅವರಿಗೆ ನೀಡಲಾಗಿದೆ.

ಇದನ್ನೂ ಓದಿ
Maharashtra Crisis: ಮಹಾರಾಷ್ಟ್ರದಲ್ಲಿ ಬಿಜೆಪಿ, ಶಾಸಕ, ಸಂಸದರ ಸಭೆ; ಜುಲೈ 3ರಂದು ಮುಂಬೈ ಏರ್​ಪೋರ್ಟ್​ ಬಳಿ ಜಮಾಯಿಸಲು ಸೂಚನೆ
Maharashtra Crisis: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು. ಸುಪ್ರೀಂ ಕೋರ್ಟ್​ನಲ್ಲಿ ಇಂದು ಘಟಾನುಘಟಿ ವಕೀಲರ ಮುಖಾಮುಖಿ
Maharashtra Crisis: ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾ; ಹೋಟೆಲ್​ನಿಂದ ನ್ಯಾಯಾಲಯದ ಮೆಟ್ಟಿಲೇರಿದ ಅತೃಪ್ತ ಶಾಸಕರು
MVA Crisis: ವಿಶ್ವಾಸಮತ ಯಾಚನೆಗೆ ಮೈತ್ರಿ ಸರ್ಕಾರದ ಸಿದ್ಧತೆ, ಶರದ್ ಪವಾರ್ ಉರುಳಿಸುವ ದಾಳದ ಬಗ್ಗೆ ಕುತೂಹಲ

ಇದನ್ನೂ ಓದಿ: Maharashtra Crisis: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು. ಸುಪ್ರೀಂ ಕೋರ್ಟ್​ನಲ್ಲಿ ಇಂದು ಘಟಾನುಘಟಿ ವಕೀಲರ ಮುಖಾಮುಖಿ

ಅದೇ ರೀತಿ, ದಾದಾಜಿ ದಗ್ದು ಭೂಸೆ ಅವರ ಕೃಷಿ ಮತ್ತು ಮಾಜಿ ಸೈನಿಕರ ಕಲ್ಯಾಣ ಇಲಾಖೆ ಹಾಗೂ ಸಂದೀಪನ್ ಅಸಾರಾಂ ಭೂಮಾರೆ (ಉದ್ಯೋಗ) ಖಾತ್ರಿಯನ್ನು ಶಂಕರ್ ಯಶವಂತರಾವ್ ಗಡಾಖ್ ಅವರಿಗೆ ನೀಡಲಾಗಿದೆ. ಉದಯ್ ಸಮಂತ್, ಸಂದೀಪನ್ ಭೂಮಾರೆ ಮತ್ತು ದಾದಾ ಭೂಸೆ ಅವರ ಸಚಿವಾಲಯದ ಉಸ್ತುವಾರಿಯನ್ನು ಆದಿತ್ಯ ಠಾಕ್ರೆಗೆ ನೀಡಲಾಗಿದೆ.

ಶಿವಸೇನೆಯ ಬಹುಪಾಲು ಶಾಸಕರು ಏಕನಾಥ್ ಶಿಂಧೆಯ ಪರವಾಗಿ ನಿಂತಿದ್ದಾರೆ. ಅವರು ಪ್ರಸ್ತುತ ಅಸ್ಸಾಂನ ಗುವಾಹಟಿ ನಗರದಲ್ಲಿ ಬೀಡುಬಿಟ್ಟಿದ್ದಾರೆ. ಶಿವಸೇನೆಯ ನೇತೃತ್ವದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ಬಿಕ್ಕಟ್ಟಿನಲ್ಲಿ ಮುಳುಗಿಸಿದ್ದಾರೆ.