ಅದೊಂದು ಸಣ್ಣ ಕಲಹ, ಆಳಂದಿಯಲ್ಲಿ ಭಕ್ತರ ಮೇಲೆ ಲಾಠಿ ಚಾರ್ಜ್​ ಮಾಡಿಲ್ಲ: ದೇವೇಂದ್ರ ಫಡ್ನವಿಸ್

|

Updated on: Jun 12, 2023 | 10:22 AM

ಪುಣೆಯ ಆಳಂದಿಯಲ್ಲಿ ಭಕ್ತರು ಹಾಗೂ ಪೊಲೀಸರ ನಡುವೆ ಸಣ್ಣ ಪ್ರಮಾಣದ ಜಗಳ ನಡೆದಿದೆ, ಆದರೆ ಭಕ್ತರ ಮೇಲೆ ಲಾಠಿಚಾರ್ಜ್​ ಮಾಡಿಲ್ಲ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್(Devendra Fadnavis) ಹೇಳಿದ್ದಾರೆ.

ಅದೊಂದು ಸಣ್ಣ ಕಲಹ, ಆಳಂದಿಯಲ್ಲಿ ಭಕ್ತರ ಮೇಲೆ ಲಾಠಿ ಚಾರ್ಜ್​ ಮಾಡಿಲ್ಲ: ದೇವೇಂದ್ರ ಫಡ್ನವಿಸ್
ದೇವೇಂದ್ರ ಫಡ್ನವಿಸ್
Image Credit source: Deccan Herald
Follow us on

ಪುಣೆಯ ಆಳಂದಿಯಲ್ಲಿ ಭಕ್ತರು ಹಾಗೂ ಪೊಲೀಸರ ನಡುವೆ ಸಣ್ಣ ಪ್ರಮಾಣದ ಜಗಳ ನಡೆದಿದೆ, ಆದರೆ ಭಕ್ತರ ಮೇಲೆ ಲಾಠಿಚಾರ್ಜ್​ ಮಾಡಿಲ್ಲ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್(Devendra Fadnavis) ಹೇಳಿದ್ದಾರೆ. ನಾಗ್ಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ವಾರಕರಿ ಸಮುದಾಯದ ಮೇಲೆ ಯಾವುದೇ ಲಾಠಿಚಾರ್ಜ್​ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪೊಲೀಸರು ವಾಕರಿಗಳ ಮೇಲೆ ಲಾಠಿ ಚಾರ್ಜ್​ ಮಾಡಿದ್ದು, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿದ್ದಾರೆ. ಆಳಂದಿ ಪಟ್ಟಣದ ಸಂತ ಜ್ಞಾನೇಶ್ವರ ಸಮಾಧಿ ದೇವಸ್ಥಾನಕ್ಕೆ ಭಕ್ತರು ಪ್ರವೇಶಿಸಲು ಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ.

ಮತ್ತಷ್ಟು ಓದಿ: Maharashtra: ಮಹಾರಾಷ್ಟ್ರದ ಅಮಲ್ನೇರ್​ನಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ, ಕರ್ಫ್ಯೂ ಜಾರಿ, 31 ಜನರ ಬಂಧನ

ಮಹಾರಾಷ್ಟ್ರದ ಗೃಹ ಸಚಿವರ ಜವಾಬ್ದಾರಿ ನಿಭಾಯಿಸುತ್ತಿರುವ ಫಡ್ನವಿಸ್ ಮಾತನಾಡಿ, ಕಳೆದ ವರ್ಷ ಇದೇ ಸ್ಥಳದಲ್ಲಿ ಕಾಳ್ತುಳಿತದಂತಹ ಪರಿಸ್ಥಿತಿಯಿಂದ ನಾವು ಪಾಠ ಕಲಿತಿದ್ದೇವೆ, ಪ್ರವೇಶ ಪಾಸ್​ಗಳನ್ನು ನೀಡಲು ಪ್ರಯತ್ನಿಸಿದ್ದೇವೆ. ಯಾತ್ರೆಯಲ್ಲಿ ಭಾಗವಹಿಸುವ ಪ್ರತಿ ಗುಂಪಿಗೆ 75 ಪಾಸ್​ಗಳನ್ನು ವಿತರಿಸಲು ನಿರ್ಧರಿಸಲಾಯಿತು, ಸುಮಾರು 400-500 ಯುವಕರು ಯಾತ್ರೆಗೆ ಸೇರುವುದಾಗಿ ಪಟ್ಟು ಹಿಡಿದಿದ್ದು ಪ್ರವೇಶಕ್ಕೆ ಹಾಕಿರುವ ನಿಯಮಗಳನ್ನು ಪಾಲಿಸಿಲ್ಲ ಎಂದಿದ್ದಾರೆ.

ಬ್ಯಾರಿಕೇಡ್​ಗಳನ್ನು ಮುರಿದರು ಪೊಲೀಸರು ಅವರನ್ನು ತಡೆಯಲು ಪ್ರಯತ್ನಿಸಿದರು, ಈ ಸಂದರ್ಭದಲ್ಲಿ ಕೆಲವು ಪೊಲೀಸರು ಗಾಯಗೊಂಡರು, ಪರಿಸ್ಥಿತಿ ನಿಯಂತ್ರಣದಲ್ಲಿದೆ, ರಾಜಕೀಯ ಪಕ್ಷಗಳಲ್ಲಿ ಮನವಿ ಮಾಡುತ್ತೇನೆ ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ, ವಾರಕರಿ ಸಮುದಾಯ ಮತ್ತು ಜನರ ಸುರಕ್ಷತೆ ಎರಡು ಕೂಡ ಮುಖ್ಯ ಎಂದಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ