ಮಹಾರಾಷ್ಟ್ರದಲ್ಲಿ ‘ಕಾಂಗ್ರೆಸ್ ವೋಟ್ ಜಿಹಾದ್ ವಿರುದ್ಧ ಧರ್ಮ ಯುದ್ಧ’; ದೇವೇಂದ್ರ ಫಡ್ನವಿಸ್

ಕಾಂಗ್ರೆಸ್ ಯಾವಾಗಲೂ ಜಾತಿಯ ಆಧಾರದ ಮೇಲೆ ಸಮಾಜವನ್ನು ವಿಭಜಿಸುತ್ತದೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಅವರು ತಮ್ಮ ಪಕ್ಷದ 'ಬಾತೋಗೆ ತೋ ಕಟೋಗೆ' ಎಂಬ ಸ್ಲೋಗನ್ ಅನ್ನು ಪುನರುಚ್ಚರಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ವೋಟ್ ಜಿಹಾದ್ ವಿರುದ್ಧ ಧರ್ಮ ಯುದ್ಧ; ದೇವೇಂದ್ರ ಫಡ್ನವಿಸ್
ದೇವೇಂದ್ರ ಫಡ್ನವಿಸ್

Updated on: Nov 14, 2024 | 6:33 PM

ಮುಂಬೈ: ಕಾಂಗ್ರೆಸ್ ವೋಟ್ ಜಿಹಾದ್ ಮತ್ತು ಮುಸ್ಲಿಮರನ್ನು ಓಲೈಸುತ್ತಿದೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಟೀಕಿಸಿದ್ದಾರೆ. ಈ ವೋಟ್ ಜಿಹಾದ್ ವಿರುದ್ಧ ಬಿಜೆಪಿ ‘ಧರ್ಮ ಯುದ್ಧ’ ನಡೆಸುತ್ತಿದೆ ಎಂದಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್ ಮತ್ತು ಎಂವಿಎ ವೋಟ್ ಜಿಹಾದ್ ಪ್ರಯೋಗ ಮಾಡಿದೆ ಎಂದಿದ್ದಾರೆ. ಮುಸ್ಲಿಮರು ಹೆಚ್ಚಿರುವ 12 ಸ್ಥಾನಗಳಲ್ಲಿ ವೋಟ್ ಜಿಹಾದ್ ಘೋಷಣೆಗಳನ್ನು ಬಳಸಲಾಗಿದೆ ಎಂದಿರುವ ಅವರು, ಬಿಜೆಪಿ ವಿರುದ್ಧ ಮತ ಚಲಾಯಿಸಲು ಅಲ್ಲಾಹ್​ನ ಹೆಸರಿನಲ್ಲಿ ಪ್ರಮಾಣ ವಚನ ಬೋಧಿಸಲು ಧಾರ್ಮಿಕ ಸ್ಥಳಗಳು ಮತ್ತು ಮುಖಂಡರನ್ನು ಬಳಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಎಂವಿಎ ಈ ರೀತಿ ವೋಟ್ ಜಿಹಾದ್ ಮಾಡಿದರೆ, ‘ಧರ್ಮ ಯುದ್ಧ’ದ ಅನಿವಾರ್ಯತೆಯ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಎತ್ತಿದ ‘ಬಾತೋಗೆ ತೋ ಕಟೋಗೆ’ ಘೋಷಣೆಯ ಕುರಿತು, ದೇವೇಂದ್ರ ಫಡ್ನವಿಸ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. “ಒಂದು ಸಮಾಜವು ವಿಭಜನೆಯಾದರೆ ಅದು ನಾಶವಾಗುತ್ತದೆ, ಕಾಂಗ್ರೆಸ್ ಜನರನ್ನು ಜಾತಿಗಳಾಗಿ ವಿಭಜಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಯೋಗಿ ಆದಿತ್ಯನಾಥ್ 10 ದಿನಗಳಲ್ಲಿ ರಾಜೀನಾಮೆ ಕೊಡದಿದ್ರೆ ಬಾಬಾ ಸಿದ್ದಿಕಿ ರೀತಿ ಸಾಯ್ತಾರೆ, ಕೊಲೆ ಬೆದರಿಕೆ

ಬಿಜೆಪಿ ಇತರರಂತೆ ತುಷ್ಟೀಕರಣ ರಾಜಕಾರಣದೊಂದಿಗೆ ಜಾತ್ಯತೀತತೆಯನ್ನು ಆಚರಿಸುವುದಿಲ್ಲ ಎಂದು ದೇವೇಂದ್ರ ಫಡ್ನವಿಸ್ ಒತ್ತಿ ಹೇಳಿದ್ದಾರೆ. ಮದರಸಾಗಳ ಮೇಲಿನ ಕ್ರಮಕ್ಕೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಜಿಹಾದಿಗಳನ್ನು ಬೆಳೆಸುವ ಯಾವುದೇ ಸ್ಥಳವನ್ನು ಮುಚ್ಚಲಾಗುವುದು ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ