ಮಾತೋಶ್ರೀ: ಮಹಾರಾಷ್ಟ್ರದ ಕಾಲೇಜು ಹಾಸ್ಟೆಲ್​ಗಳಿಗೆ ಉದ್ಧವ್ ಠಾಕ್ರೆ ಮನೆ ಹೆಸರು!

| Updated By: ganapathi bhat

Updated on: Apr 06, 2022 | 7:03 PM

ಹಾಸ್ಟೆಲ್​ಗಳು ವಿದ್ಯಾರ್ಥಿಗಳಿಗೆ, ತಮ್ಮ ಮನೆಯಲ್ಲಿ ತಾಯಿ ನೀಡುವಂಥ ರೀತಿಯಲ್ಲಿ ವಸತಿ, ಮಮತೆ, ಸೌಲಭ್ಯವನ್ನು ಒದಗಿಸಲಿವೆ ಎಂದು ಸರ್ಕಾರದ ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ಮಾತೋಶ್ರೀ: ಮಹಾರಾಷ್ಟ್ರದ ಕಾಲೇಜು ಹಾಸ್ಟೆಲ್​ಗಳಿಗೆ ಉದ್ಧವ್ ಠಾಕ್ರೆ ಮನೆ ಹೆಸರು!
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​​ ಠಾಕ್ರೆ
Follow us on

ಮುಂಬೈ: ಮಹಾರಾಷ್ಟ್ರ ಸರ್ಕಾರದ ಅಡಿಯಲ್ಲಿ ಬರುವ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ವಿಭಾಗದ ಎಲ್ಲಾಕಾಲೇಜು ವಸತಿ ಗೃಹಗಳನ್ನು ‘ಮಾತೋಶ್ರೀ’ ಎಂದು ಹೆಸರಿಸಲು ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಇಂದು (ಮಾರ್ಚ್ 16) ತೀರ್ಮಾನಿಸಿ, ಅಧಿಸೂಚನೆ ಹೊರಡಿಸಿದೆ. ಅದರಂತೆ, ಎಲ್ಲಾ ಕಾಲೇಜು ಹಾಸ್ಟೆಲ್​ಗಳು ಕೂಡ ‘ಮಾತೋಶ್ರೀ ಸರ್ಕಾರಿ ಹಾಸ್ಟೆಲ್’ ಎಂದು ಹೆಸರು ಪಡೆದುಕೊಳ್ಳಲಿವೆ. ಜತೆಗೆ, ಮುಂದೆ ತಲೆ ಎತ್ತಲಿರುವ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ವಿಭಾಗದ ಇತರ ಹಾಸ್ಟೆಲ್​ಗಳು ಸಹ ಮಾತೋಶ್ರೀ ಎಂಬ ಹೆಸರು ಪಡೆಯಲಿವೆ. ಸದ್ಯ ಈ ವಸತಿ ಗೃಹಗಳು ಬಾಯ್ಸ್ ಹಾಸ್ಟೆಲ್ ಅಥವಾ ಗರ್ಲ್ಸ್ ಹಾಸ್ಟೆಲ್ ಎಂದು ಕರೆಸಿಕೊಳ್ಳುತ್ತಿವೆ.

ಇಲ್ಲಿ ಗಮನಿಸಬೇಕಾದ ವಿಶೇಷ ಅಂಶವೊಂದಿದೆ. ಅದೇನೆಂದರೆ, ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಶಿವಸೇನಾ ನಾಯಕ ಉದ್ಧವ್ ಠಾಕ್ರೆಯ, ಮುಂಬೈ ಬಾಂದ್ರಾ (ಈಸ್ಟ್) ಕಾಲಾ ನಗರ್​ನಲ್ಲಿರುವ ಖಾಸಗಿ ನಿವಾಸದ ಹೆಸರು ಕೂಡ ‘ಮಾತೋಶ್ರೀ’ ಎಂದಾಗಿದೆ. ಅಷ್ಟೇ ಅಲ್ಲದೆ, ಶಿವ ಸೇನಾ ಮುಖ್ಯಸ್ಥ ಉದಯ್ ಸಮಂತ್ ನಿರ್ವಹಿಸುವ ಉನ್ನತ ಹಾಗೂ ತಾಂತ್ರಿಕ ಶಿಕ್ಷಣದ ಪೋರ್ಟ್​ಫೊಲಿಯೋ ಹೆಸರು ಕೂಡ ಮಾತೋಶ್ರೀ ಎಂಬುದಾಗಿದೆ.

ಈ ಹಾಸ್ಟೆಲ್​ಗಳು ವಿದ್ಯಾರ್ಥಿಗಳಿಗೆ, ತಮ್ಮ ಮನೆಯಲ್ಲಿ ತಾಯಿ ನೀಡುವಂಥ ರೀತಿಯಲ್ಲಿ ವಸತಿ, ಮಮತೆ, ಸೌಲಭ್ಯವನ್ನು ಒದಗಿಸಲಿವೆ ಎಂದು ಸರ್ಕಾರದ ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ಮಹಾರಾಷ್ಟ್ರ ಸರ್ಕಾರಕ್ಕೆ ಸಚಿನ್ ವಾಜೆ ಪ್ರಕರಣ ತಲೆನೋವು
ಮುಕೇಶ್ ಅಂಬಾನಿ ನಿವಾಸದ ಮುಂದೆ ಸ್ಫೋಟಕ ಪತ್ತೆಯಾದ ಪ್ರಕರಣ ಹಾಗೂ ಕಾರ್ ಮಾಲೀಕ ಉದ್ಯಮಿ ಮನ್​ಸುಖ್ ಹಿರೇನ್ ಸಾವು ಪ್ರಕರಣದ ಆರೋಪಿ ಸ್ಥಾನದಲ್ಲಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಸಸ್ಪೆಂಡ್ ಆಗಿದ್ದಾರೆ. ಘಟನೆಗೆ ಸಂಬಂಧಿಸಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಚಿನ್ ವಾಜೆ ಪರ ವಹಿಸಿ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರಕ್ಕೆ ಅಸಮಾಧಾನ ಹೊರಹಾಕಿರುವ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ನಿನ್ನೆ (ಮಾರ್ಚ್ 15) ಮಧ್ಯಾಹ್ನ ಉದ್ಧವ್ ಠಾಕ್ರೆಯನ್ನು ಭೇಟಿಯಾಗಿರುವ ಬಗ್ಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿತ್ತು.

ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಕೂಡ ಪ್ರಕರಣದ ಕುರಿತು ಬಿಕ್ಕಟ್ಟು ಶಮನ ಮಾಡಲು ಠಾಕ್ರೆಯನ್ನು ಭೇಟಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆಯಾದ ಪ್ರಕರಣದಲ್ಲಿ ಉಂಟಾಗಿರುವ ವಿವಾದಕ್ಕೆ ಮಹಾವಿಕಾಸ್ ಅಘಾಡಿ (MVA) ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ: ಸಚಿನ್ ವಾಜೆ ಅಮಾನತು ಪ್ರಕರಣ: ಸರ್ಕಾರಕ್ಕೆ ಮುಜುಗರ ತಪ್ಪಿಸಲು ಶರದ್ ಪವಾರ್-ಉದ್ಧವ್ ಠಾಕ್ರೆ ಮಾತುಕತೆ

ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣ ಹೆಚ್ಚಾದರೆ ಲಾಕ್​ಡೌನ್​ ಅನಿವಾರ್ಯ; ಸಿಎಂ ಉದ್ಧವ್​ ಠಾಕ್ರೆ

Published On - 7:33 pm, Tue, 16 March 21