ಪುಣೆಯ 85ರ ಅಜ್ಜಿಯ ಲಾಠಿ ಮ್ಯಾಜಿಕ್‌ ನೋಡಿ ಮಹಾರಾಷ್ಟ್ರ ಗೃಹ ಸಚಿವ ಏನಂದ್ರು ಗೊತ್ತಾ?

| Updated By:

Updated on: Jul 27, 2020 | 3:29 PM

ಪುಣೆ: ಅದೃಷ್ಟ ಅಂದ್ರೆ ಹಾಗೇನೆ, ಯಾವಾಗ ಮತ್ತು ಹೇಗೆ ಹುಡುಕಿಕೊಂಡು ಬರುತ್ತೆ ಅಂತಾ ಹೇಳೋಕಾಗಲ್ಲ. ಇದು ಪುಣೆಯ ಲಾಠಿ ಅಜ್ಜಿ ಶಾಂತಾಬಾಯಿ ಪವಾರ್‌ ಪಾಲಿಗೆ ಅಕ್ಷರಶಃ ನಿಜವಾಗಿದೆ. ಹೌದು ಪುಣೆಯ ಗಲ್ಲಿಗಳಲ್ಲಿ ಜೀವನಪೂರ್ತಿ ಹೊಟ್ಟೆಪಾಡಿಗೆ ಲಾಠಿ ವಿದ್ಯೆ ಪ್ರದರ್ಶಿಸುತ್ತಿದ್ದ ಶಾಂತಾಬಾಯಿ ಪವಾರ್‌ ಅನ್ನೋ ಅಜ್ಜಿ ವಿಡಿಯೋ ಯಾವಾಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಯಿತೋ, ದೇಶಕ್ಕೆ ದೇಶವೇ ಅಜ್ಜಿಯ ಲಾಠಿ ಮ್ಯಾಜಿಕ್‌ಗೆ ಮೂಕ ವಿಸ್ಮತವಾಗಿತ್ತು. ಭಲೆ ಅಜ್ಜಿ ಅಂತಾ 85ರ ವಯಸ್ಸಿನಲ್ಲೂ ಈ ರೀತಿ ಲಾಠಿ ಬೀಸುತ್ತಿರೋದಕ್ಕೆ ಪರಾಕ್‌ […]

ಪುಣೆಯ 85ರ ಅಜ್ಜಿಯ ಲಾಠಿ ಮ್ಯಾಜಿಕ್‌ ನೋಡಿ ಮಹಾರಾಷ್ಟ್ರ ಗೃಹ ಸಚಿವ ಏನಂದ್ರು ಗೊತ್ತಾ?
Follow us on

ಪುಣೆ: ಅದೃಷ್ಟ ಅಂದ್ರೆ ಹಾಗೇನೆ, ಯಾವಾಗ ಮತ್ತು ಹೇಗೆ ಹುಡುಕಿಕೊಂಡು ಬರುತ್ತೆ ಅಂತಾ ಹೇಳೋಕಾಗಲ್ಲ. ಇದು ಪುಣೆಯ ಲಾಠಿ ಅಜ್ಜಿ ಶಾಂತಾಬಾಯಿ ಪವಾರ್‌ ಪಾಲಿಗೆ ಅಕ್ಷರಶಃ ನಿಜವಾಗಿದೆ.

ಹೌದು ಪುಣೆಯ ಗಲ್ಲಿಗಳಲ್ಲಿ ಜೀವನಪೂರ್ತಿ ಹೊಟ್ಟೆಪಾಡಿಗೆ ಲಾಠಿ ವಿದ್ಯೆ ಪ್ರದರ್ಶಿಸುತ್ತಿದ್ದ ಶಾಂತಾಬಾಯಿ ಪವಾರ್‌ ಅನ್ನೋ ಅಜ್ಜಿ ವಿಡಿಯೋ ಯಾವಾಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಯಿತೋ, ದೇಶಕ್ಕೆ ದೇಶವೇ ಅಜ್ಜಿಯ ಲಾಠಿ ಮ್ಯಾಜಿಕ್‌ಗೆ ಮೂಕ ವಿಸ್ಮತವಾಗಿತ್ತು. ಭಲೆ ಅಜ್ಜಿ ಅಂತಾ 85ರ ವಯಸ್ಸಿನಲ್ಲೂ ಈ ರೀತಿ ಲಾಠಿ ಬೀಸುತ್ತಿರೋದಕ್ಕೆ ಪರಾಕ್‌ ಹೇಳಿದ್ದರು.

ಬಾಲಿವುಡ್‌ನಟರಿಂದ ಹಿಡಿದು ವಿವಿದ ವ್ಯಕ್ತಿಗಳು ಅಜ್ಜಿಗೆ ಸಹಾಯ ಹಸ್ತ ಕೂಡಾ ಚಾಚಿದ್ದರು. ಈಗ ಮಹಾರಾಷ್ಟ್ರದ ಗೃಹಸಚಿವ ಅನಿಲ್‌ ದೇಶಮುಖ್‌ ಕೂಡಾ ಪುಣೆಯಲ್ಲಿ ಅಜ್ಜಿಯನ್ನ ಭೇಟಿಯಾಗಿದ್ದಾರೆ. ಅಷ್ಟೇ ಅಲ್ಲ ಎನ್‌ಸಿಪಿ ಪಕ್ಷದಿಂದ ಒಂದು ಲಕ್ಷ ರೂಗಳ ನೆರವನ್ನು ನೀಡಿದ್ದಾರೆ. ಜೊತೆಗೆ ಒಂದು ಸೀರೆಯನ್ನು ಮಹಾರಾಷ್ಟ್ರ ಸಂಪ್ರದಾಯದಂತೆ ಉಡುಗೆಯಾಗಿ ನೀಡಿದ್ದಾರೆ. ಅಷ್ಟೇ ಅಲ್ಲ ಅಜ್ಜಿಯನ್ನು ಬೇಟಿಯಾದ ನಂತರ ನಾನು ಜೀವನದಲ್ಲಿ ಮತ್ತಷ್ಟು ಪ್ರೇರಿತನಾಗಿದ್ದೇನೆ ಎಂದಿದ್ದಾರೆ.

ಈ ಮೊದಲು ಬಾಲಿವುಡ್‌ ನಟ ಸೋನು ಸೂದ್‌ ಮತ್ತು ರಿತೇಶ್‌ ದೇಶಮುಖ್‌ ಸೇರಿದಂತೆ ಹಲವಾರು ಜನರು ಅಜ್ಜಿಗೆ ಸಹಾಯ ನೀಡಲು ಮುಂದೆ ಬಂದಿದ್ದರು.

Published On - 5:18 pm, Sun, 26 July 20