100 ಕೆ.ಜಿ. ಬೆಳ್ಳಿಯ 90 ಲಕ್ಷ ರೂ ಮೌಲ್ಯದ ಗಣಪತಿ ಮೂರ್ತಿ! ಎಲ್ಲಿ ಪ್ರತಿಷ್ಠಾಪಿಸಿದ್ದಾರೆ ಗೊತ್ತಾ!?

|

Updated on: Sep 22, 2023 | 2:10 PM

ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮಿತಿಯು ಮುಂಬೈ ನಗರದ ಅತ್ಯಂತ ಶ್ರೀಮಂತ ಗಣಪತಿ ಮಂಟಪಗಳಲ್ಲಿ ಒಂದಾಗಿದೆ. 69 ನೇ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಭವ್ಯವಾದ, 69 ಕೆಜಿ ಚಿನ್ನ ಮತ್ತು 336 ಕೆಜಿ ಬೆಳ್ಳಿ ಆಭರಣಗಳಿಂದ ಅಲಂಕರಿಸಲ್ಪಟ್ಟ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ.

100 ಕೆ.ಜಿ. ಬೆಳ್ಳಿಯ 90 ಲಕ್ಷ ರೂ ಮೌಲ್ಯದ ಗಣಪತಿ ಮೂರ್ತಿ! ಎಲ್ಲಿ ಪ್ರತಿಷ್ಠಾಪಿಸಿದ್ದಾರೆ ಗೊತ್ತಾ!?
100 ಕೆ.ಜಿ. ಬೆಳ್ಳಿಯ 90 ಲಕ್ಷ ರೂ ಮೌಲ್ಯದ ಗಣಪತಿ ಮೂರ್ತಿ!
Follow us on

ನಾಡಿನೆಲ್ಲೆಡೆ ವಿನಾಯಕ ಹಬ್ಬದ ಸಂಭ್ರಮ ಕಾಣಬರುತ್ತಿದೆ. ಬೀದಿ ಬೀದಿಯಲ್ಲಿ ನಿಂತಿರುವ ಗಣಪಗಳು ಭಕ್ತರಿಂದ ಪೂಜಿಸಲ್ಪಡುತ್ತಿದ್ದಾರೆ. ವಿವಿಧ ರೂಪದಲ್ಲಿರುವ ಗಣಪತಿಯನ್ನು ನೋಡಲು ಜನ ಮುಗಿಬೀಳುತ್ತಾರೆ. ಈ ವರ್ಷ ದೇಶದ ಅಪ್ರತಿಮ ಸಾಧನಮೆಯ ಸಂಕೇತವಾಗಿ ಚಂದ್ರಯಾನ 3 ಮತ್ತು ವಂದೇಭಾರತ್‌ನಂತಹ ವಿನೂತನ ರೂಪಗಳಲ್ಲಿ ಕಾಣಿಸಿಕೊಂಡಿರುವ ಗಣೇಶನನ್ನು ಕಂಡು ಭಕ್ತರು ಬೆರಗುಗೊಂಡಿದ್ದಾರೆ. ಗಣೇಶ ಚೌತಿಯ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಪ್ರತಿಷ್ಠಾಪಿಸುವ ಗಣೇಶ ನಂಬಿಕೆ, ಸಂಪತ್ತು ಮತ್ತು ಅದ್ಭುತವಾದ ಕಲೆಗಾರಿಕೆಯ ಪ್ರದರ್ಶನಕ್ಕೆ ಧ್ಯೋತಕವಾಗಿದೆ.

ಬುಲ್ತಾನಾ ಜಿಲ್ಲೆಯ ಅಕ್ಕಸಾಲಿಗರೊಬ್ಬರು 105 ಕೆಜಿ ಶುದ್ಧ ಬೆಳ್ಳಿಯನ್ನು ಬಳಸಿ ಭವ್ಯವಾದ ಗಣೇಶನ ವಿಗ್ರಹವನ್ನು ರಚಿಸಿದ್ದಾರೆ. ಹೆಸರಾಂತ ಆಭರಣ ವ್ಯಾಪಾರಿ ಕಮಲ್ ಜಹಾಂಗೀರ್ ಸ್ಥಳೀಯ ಗಣೇಶ ಸಮಿತಿಗಾಗಿ ಈ ಅಸಾಮಾನ್ಯ ಗಣೇಶನ ವಿಗ್ರಹವನ್ನು ವಿನ್ಯಾಸಗೊಳಿಸಿದ್ದಾರೆ. ಮೇಲಾಗಿ.. ಈ ವಿಗ್ರಹವನ್ನು ಹೊಳೆಯುವ ವಜ್ರಗಳಿಂದಲೂ ಅಲಂಕರಿಸಲಾಗಿದೆ. ಗಣೇಶನು ಕೈಯಲ್ಲಿ ತ್ರಿಶೂಲ, ಕೊಡಲಿ ಮತ್ತು ಗದೆಯನ್ನು ಹಿಡಿದಿದ್ದಾನೆ. ಗಣಪ, ಒಂದು ಕಡೆ ಸುಂದರವಾಗಿ ಕೆತ್ತಿದ ಪವಿತ್ರ “ಓಂ” ಚಿಹ್ನೆಯ ಮೂಲಕ ದೈವಿಕ ಸೆಳವು ಹೊರಸೂಸುತ್ತಾನೆ.

ಕಳೆದ ಮೂರು ತಿಂಗಳಿಂದ ಈ ಮೂರ್ತಿ ನಿರ್ಮಾಣ ಕಾರ್ಯ ನಿರಂತರವಾಗಿ ನಡೆದಿದೆ. ಅಂತಿಮವಾಗಿ, ಜಹಾಂಗೀರ್ ಪ್ರತಿಮೆಯ ತಯಾರಿಯನ್ನು ಚೌತಿಯಂದು ಪೂರ್ಣಗೊಳಿಸಿದರು ಎಂದು ತಿಳಿಸಿದ್ದಾರೆ. 105 ಕೆಜಿ ಬೆಳ್ಳಿಯಿಂದ ತಯಾರಿಸಿದ ವಿಸ್ಮಯಕಾರಿ ಗಣೇಶನ ವಿಗ್ರಹದ ಬೆಲೆ 9 ಮಿಲಿಯನ್ (90 ಲಕ್ಷ ರೂ.) ಎಂದು ಅಂದಾಜಿಸಲಾಗಿದೆ.

ಸೆಪ್ಟೆಂಬರ್ 18 ರಂದು, ಗಣೇಶ ಹಬ್ಬದ ಸಂದರ್ಭದಲ್ಲಿ ಗಣೇಶ ಮಂಡಳಿಯ ಸದಸ್ಯರು ಈ ಭವ್ಯವಾದ ಗಣೇಶನನ್ನು ಭವ್ಯವಾದ ಮೆರವಣಿಗೆ ಮಾಡಿದ್ದಾರೆ. ಉತ್ಸವದ ನಂತರ ಈ ವಿಶೇಷ ಮೂರ್ತಿಯನ್ನು ದೇವಸ್ಥಾನದಲ್ಲಿಯೇ ಪ್ರತಿಷ್ಠಾಪಿಸಲಾಗುವುದು ಎಂದು ಉತ್ಸವ ಸಮಿತಿ ಪ್ರಕಟಿಸಿದೆ.

ಮತ್ತೊಂದೆಡೆ, ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮಿತಿಯು ಮುಂಬೈ ನಗರದ ಅತ್ಯಂತ ಶ್ರೀಮಂತ ಗಣಪತಿ ಮಂಟಪಗಳಲ್ಲಿ ಒಂದಾಗಿದೆ. 69 ನೇ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಭವ್ಯವಾದ ಚಿನ್ನ ಮತ್ತು ಬೆಳ್ಳಿಯ ಆಭರಣಗಳಿಂದ ಅಲಂಕರಿಸಲ್ಪಟ್ಟ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ.

Also Read: ಗಣಪತಿ ವಿಸರ್ಜನೆ ವೇಳೆ ಕಡಲತೀರದಲ್ಲಿ ಭಕ್ತರ ಮೇಲೆ ದಾಳಿ ಮಾಡಿದ ಭಯಂಕರ ಮೀನು!

ಈ ಪ್ರತಿಮೆಯಲ್ಲಿ 69 ಕೆಜಿ ಚಿನ್ನ ಮತ್ತು 336 ಕೆಜಿ ಬೆಳ್ಳಿ ಆಭರಣಗಳಿವೆ. ಉತ್ಕೃಷ್ಟವಾದ ಗಣಪನನ್ನು ನೋಡಲು ಇಲ್ಲಿಗೆ ಭಕ್ತರ ದಂಡೇ ಹರಿದುಬರುತ್ತಿದೆ. ಈ ಗಣೇಶ ಮೂರ್ತಿಯು ಬೆರಗುಗೊಳಿಸುವ ದೀಪಗಳಿಂದ ಕೂಡಿರುವ ದೃಶ್ಯವು ನೋಡುಗರನ್ನು ಬೆರಗುಗೊಳಿಸಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ