ಮಹಾರಾಷ್ಟ್ರ ಮುಖ್ಯಮಂತ್ರಿ ಪುತ್ರ, ಸಚಿವ ಆದಿತ್ಯ ಠಾಕ್ರೆಗೆ ಕೊರೊನಾ ಸೋಂಕು..

|

Updated on: Mar 20, 2021 | 7:28 PM

Coronavirus: ನಾಗ್ಪುರದಲ್ಲಿ ಈಗಾಗಲೇ ಲಾಕ್​ಡೌನ್ ಹೇರಲಾಗಿದ್ದು, ನಾಳೆ ಅವಧಿ ಮುಕ್ತಾಯವಾಗುವುದಿತ್ತು. ಆದರೆ ಅದನ್ನೀಗ ವಿಸ್ತರಿಸಲಾಗಿದೆ. ಅಗತ್ಯ ವಸ್ತುಗಳು ಮಾತ್ರ ದೊರೆಯಲಿವೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಪುತ್ರ, ಸಚಿವ ಆದಿತ್ಯ ಠಾಕ್ರೆಗೆ ಕೊರೊನಾ ಸೋಂಕು..
ಆದಿತ್ಯ ಠಾಕ್ರೆ
Follow us on

ಮಹಾರಾಷ್ಟ್ರದ ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ಸಚಿವ ಆದಿತ್ಯ ಠಾಕ್ರೆ ಅವರಿಗೆ ಕೊರೊನಾ ಸೋಂಕು ತಗುಲಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಆದಿತ್ಯ ಠಾಕ್ರೆ, ನನಗೆ ಕೊವಿಡ್​ 19 ಲಕ್ಷಣ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿತ್ತು. ಹಾಗಾಗಿ ತಪಾಸಣೆ ಮಾಡಿಸಿದ್ದೆ. ವರದಿ ಪಾಸಿಟಿವ್​ ಬಂದಿದೆ. ಕಳೆದ ಕೆಲ ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ ಕೊವಿಡ್​-19 ತಪಾಸಣೆ ಮಾಡಿಸಿಕೊಳ್ಳಿ. ಕೊವಿಡ್​ ಸೋಂಕು ಮತ್ತೆ ಹೆಚ್ಚಿನ ಪ್ರಮಾಣದಲ್ಲಿ ಪ್ರಸರಣ ಆಗುತ್ತಿದೆ. ಪ್ರತಿಯೊಬ್ಬರೂ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಿ, ಎಚ್ಚರದಿಂದ ಇರಿ ಎಂದು ಹೇಳಿದ್ದಾರೆ.

ಆದಿತ್ಯ ಠಾಕ್ರೆಯವರು ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಪುತ್ರ. ಇಂದು ಸಂಜೆ 6.26ರ ಹೊತ್ತಿಗೆ ಟ್ವೀಟ್​ ಮಾಡಿ ತಮಗೆ ಕೊವಿಡ್​ ಸೋಂಕು ತಗುಲಿದ್ದನ್ನು ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಕೊವಿಡ್​-19 ಎರಡನೇ ಅಲೆ ಸಿಕ್ಕಾಪಟೆ ಹೆಚ್ಚಾಗಿದೆ. ಶುಕ್ರವಾರ ಒಂದೇ ದಿನ 13,601 ಕೊರೊನಾ ಕೇಸ್​ಗಳು ದಾಖಲಾಗಿವೆ. ಹಾಗೇ 58 ಮಂದಿ ಮೃತಪಟ್ಟಿದ್ದಾರೆ. ಈ ರಾಜ್ಯದಲ್ಲಿ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 1,676,37ಕ್ಕೆ ಏರಿಕೆಯಾಗಿದೆ. ಅದರಲ್ಲೂ ಐದು ಜಿಲ್ಲೆಗಳಾದ ಪುಣೆ (37,384), ನಾಗ್ಪುರ (25,861), ಮುಂಬೈ (18,850), ಥಾಣೆ(16,735) ಮತ್ತು ನಾಸಿಕ್​ಗಳು (11,867) ಮುಂಚೂಣಿಯಲ್ಲಿವೆ.

ನಾಗ್ಪುರದಲ್ಲಿ ಈಗಾಗಲೇ ಲಾಕ್​ಡೌನ್ ಹೇರಲಾಗಿದ್ದು, ನಾಳೆ ಅವಧಿ ಮುಕ್ತಾಯವಾಗುವುದಿತ್ತು. ಆದರೆ ಅದನ್ನೀಗ ವಿಸ್ತರಿಸಲಾಗಿದೆ. ಅಗತ್ಯ ವಸ್ತುಗಳು ಮಾತ್ರ ದೊರೆಯಲಿವೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಇನ್ನು ಅಮರಾವತಿ, ಯವತ್ಮಾಲ್, ಲಾತೂರ್​ಗಳಲ್ಲೂ ನಿರ್ಬಂಧ ಹೇರಲಾಗಿದ್ದು, ಔರಂಗಾಬಾದ್​ ಕಂಪ್ಲೀಟ್ ಲಾಕ್​ ಆಗಿದೆ.