Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು
Kannada News Today: ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.
ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ / ಬೆಳವಣಿಗೆಗಳ ಮಾಹಿತಿ ಇಲ್ಲಿದೆ. ದೇಶ-ವಿದೇಶಗಳಿಂದ ನಾಲ್ಕು ದಿಕ್ಕಿನಿಂದ ಸಾವಿರಾರು ಸುದ್ದಿ ಹರಿದಾಡುತ್ತಿರುತ್ತವೆ. ಕ್ಷಣಾರ್ಧದಲ್ಲಿ ಬಹುತೇಕ ಸುದ್ದಿಗಳನ್ನು ನಿಮಗೆ ತಲುಪಿಸುವ ಕಾರ್ಯ ಟಿವಿ9 ವೆಬ್ಸೈಟ್ ಮಾಡುತ್ತಿದೆ. ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.
1) ದಾಖಲೆ ಮುರಿದ ಮಿಜಾರು ಶ್ರೀನಿವಾಸ ಗೌಡ ಕಂಬಳದಲ್ಲಿ ಅತಿ ವೇಗವಾಗಿ ಓಡುವ ಮೂಲಕ ಕಳೆದ ಬಾರಿ ದಾಖಲೆ ಬರೆದಿದ್ದ ಮಿಜಾರು ಶ್ರೀನಿವಾಸ ಗೌಡ, ಈ ವರ್ಷ ತನ್ನ ಹಳೆಯ ದಾಖಲೆಯನ್ನೇ ಮುರಿದುಹಾಕಿದ್ದಾರೆ. ವೇಣೂರುನಲ್ಲಿ ನಡೆದ ಸೂರ್ಯ-ಚಂದ್ರ ಜೋಡುಕರೆ ಕಂಬಳದಲ್ಲಿ ಶ್ರೀನಿವಾಸ ಗೌಡ ಹೊಸ ದಾಖಲೆ ನಿರ್ಮಿಸಿದ್ದು, 100 ಮೀಟರ್ ದೂರವನ್ನು ಕೇವಲ 8.96 ಸೆಕೆಂಡ್ಗಳಲ್ಲಿ ತಲುಪಿದ್ದಾರೆ. Link: ಕಂಬಳದಲ್ಲಿ ತನ್ನದೇ ದಾಖಲೆ ಮುರಿದು ಓಡಿದ ಮಿಜಾರು ಶ್ರೀನಿವಾಸ ಗೌಡ
2) ಕಾಂಗ್ರೆಸ್ ಅಸ್ಸಾಂ, ಚಹಾದ ಗೌರವ ಕುಂದಿಸುವ ಶಕ್ತಿಗಳಿಗೆ ಬೆಂಬಲ ನೀಡಿತ್ತು: ಮೋದಿ ಕಾಂಗ್ರೆಸ್ ಆಡಳಿತ ನಡೆಸಿದ 50-55 ವರ್ಷಗಳ ಕಾಲವೂ ಅಸ್ಸಾಂ, ಚಹಾದ ಗೌರವ ಕುಂದಿಸುವ ಶಕ್ತಿಗಳಿಗೆ ಬೆಂಬಲ ನೀಡಿತ್ತು. ಅಂತಹ ಪಕ್ಷಕ್ಕೆ ನೀವು ಮತ್ತೆ ಮತ ಹಾಕುವಿರೇ? ಅಸ್ಸಾಂ ಮತ್ತು ಭಾರತದ ಗೌರವ ಕುಗ್ಗಿಸಿದವರಿಗೆ ಶಿಕ್ಷೆಯಾಗುವುದು ಬೇಡವೇ ಎಂದು ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನ ಚಬುವಾದಲ್ಲಿ ಇಂದು (ಮಾರ್ಚ್ 20) ಚುನಾವಣಾ ಪ್ರಚಾರ ಭಾಷಣದಲ್ಲಿ ಪ್ರಶ್ನಿಸಿದರು. Link: Assam Assembly Elections 2021: ಅಸ್ಸಾಂನ ಗೌರವ ಕುಗ್ಗಿಸುವವರಿಗೆ ಮತ ಹಾಕುವಿರೇ?; ಪ್ರಧಾನಿ ಮೋದಿ ಪ್ರಶ್ನೆ
3) ವಿಮಾನ ಪ್ರಯಾಣದ ಕನಿಷ್ಠ ದರದಲ್ಲಿ ಶೇಕಡಾ 5ರಷ್ಟು ಹೆಚ್ಚಳಗೊಳಿಸಿದ ನಾಗರಿಕ ವಿಮಾನ ಯಾನ ಸಚಿವಾಲಯ ದೇಶೀಯ ವಿಮಾನ ಯಾನದ ಪ್ರಯಾಣ ದರಕ್ಕೆ ಇದ್ದ ಕನಿಷ್ಠ ಮಿತಿಯನ್ನು ನಾಗರಿಕ ವಿಮಾನ ಯಾನ ಸಚಿವಾಲಯವು ಶೇಕಡಾ 5ರಷ್ಟು ತಕ್ಷಣದಿಂದಲೇ ಜಾರಿಗೆ ಬರುವಂತೆ ಹೆಚ್ಚಳ ಮಾಡಿದೆ. ಇದರ ಪರಿಣಾಮವಾಗಿ ಅತ್ಯಂತ ಅಗ್ಗದ ದರಕ್ಕೆ ಸಿಗುತ್ತಿದ್ದ ವಿಮಾನದ ಟಿಕೆಟ್ಗಳು ದುಬಾರಿ ಆಗಲಿವೆ. Link: Air fare: ದೇಶೀ ವಿಮಾನ ಪ್ರಯಾಣದ ಕನಿಷ್ಠ ದರದಲ್ಲಿ ಶೇಕಡಾ 5ರಷ್ಟು ಹೆಚ್ಚಳ
4) ರಕ್ಷಣೆಗಾಗಿ ಅತ್ಯಾಚಾರ ಯತ್ನಿಸಿದವನ ಗುಪ್ತಾಂಗ ಕತ್ತರಿಸಿದ ಮಹಿಳೆ ಮಹಿಳೆಯೊಬ್ಬರು, ತನ್ನ ಮೇಲೆ ಅತ್ಯಾಚಾರ ಮಾಡಲು ಬಂದವನ ಗುಪ್ತಾಂಗವನ್ನೇ ಕತ್ತರಿಸಿಹಾಕಿದ್ದಾರೆ. ಈ ಮಹಿಳೆಗೆ 45 ವರ್ಷ. ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಉಮಾರಿಹಾ ಗ್ರಾಮದಲ್ಲಿ ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಘಟನೆ ನಡೆದಿದ್ದಾಗಿ ಪೊಲೀಸರು ತಿಳಿಸಿದ್ದಾರೆ. Link: ಅತ್ಯಾಚಾರಕ್ಕೆ ಯತ್ನಿಸಿದವನೊಂದಿಗೆ 20 ನಿಮಿಷ ಕಾದಾಡಿ, ನಂತರ ಆತನ ಗುಪ್ತಾಂಗವನ್ನೇ ಕತ್ತರಿಸಿದ ಮಹಿಳೆ
5) ಬೈ ಎಲೆಕ್ಷನ್ ಪ್ರಚಾರಕ್ಕೆ ರಮೇಶ್ ಜಾರಕಿಹೊಳಿ ಬರಲಿದ್ದಾರೆ: ಬಿಎಸ್ವೈ ರಾಜ್ಯದಲ್ಲಿ ಉಪಚುನಾವಣಾ ಕಾವು ದಿನೇದಿನೇ ಏರುತ್ತಿದ್ದು, ಎಲ್ಲಾ ಪಕ್ಷಗಳೂ ಬಿರುಸಿನ ಪ್ರಚಾರಕ್ಕೆ ಸಿದ್ಧವಾಗುತ್ತಿವೆ. ಇದೇ ವೇಳೆಯಲ್ಲಿ ಉಪಚುನಾವಣೆ ಪ್ರಚಾರದ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬೈ ಎಲೆಕ್ಷನ್ ಪ್ರಚಾರಕ್ಕೆ ರಮೇಶ್ ಜಾರಕಿಹೊಳಿ ಬರಲಿದ್ದಾರೆ ಎಂದು ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ಹೇಳಿದ್ದಾರೆ. Link: ಉಪಚುನಾವಣೆ ಪ್ರಚಾರಕ್ಕೆ ರಮೇಶ್ ಜಾರಕಿಹೊಳಿ ಬರ್ತಾರೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
6) ಯುವರತ್ನ ಟ್ರೇಲರ್ ರಿಲೀಸ್ ಬಹುನಿರೀಕ್ಷಿತ ಯುವರತ್ನ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಒಂದು ಕಡೆ ಕಾಲೇಜು ಹುಡುಗ ಮತ್ತೊಂದು ಕಡೆ ಪೊಲೀಸ್ ಆಗಿ ಪುನೀತ್ ರಾಜ್ಕುಮಾರ್ ಮಿಂಚಿದ್ದಾರೆ. ಡಾಲಿ ಧನಂಜಯ್ ವಿಲನ್ ಆಗಿ ಪುನೀತ್ಗೆ ಟಫ್ ಫೈಟ್ ಕೊಡೋ ಎಲ್ಲ ಲಕ್ಷಣ ಟ್ರೇಲರ್ನಲ್ಲಿ ಎದ್ದು ಕಾಣುತ್ತಿದೆ. ಇಂದು ಮಧ್ಯಾಹ್ನ ಯುವರತ್ನ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. Link: Yuvarathnaa Trailer: ಕೌಂಟರ್ ಕೊಟ್ರೆ ಎನ್ಕೌಂಟರ್; ಯುವರತ್ನ ಟ್ರೇಲರ್ನಲ್ಲಿ ಮಿಂಚಿದ ಪುನೀತ್ ರಾಜ್ಕುಮಾರ್
7) ಇಂಗ್ಲೆಂಡ್ ಚಾಂಪಿಯನ್ಶಿಪ್ ಸೆಮಿಫೈನಲ್ಗೆ ಸಿಂಧು ಪ್ರವೇಶ.. ಭಾರತದ ಏಸ್ ಮಹಿಳಾ ಶಟ್ಲರ್ ಪಿವಿ ಸಿಂಧು ಗೆಲುವಿನ ಸ್ಪರ್ಶವನ್ನು ಪುನಃ ಕಂಡುಕೊಂಡಿದ್ದಾರೆ. ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ನ ರೋಚಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 5ನೇ ಶ್ರೇಯಾಂಕದ ಸಿಂಧು ಇಂದು ಜಪಾನಿನ ಅಗ್ರಮಾನ್ಯ ಆಟಗಾರ್ತಿ ಅಕನೆ ಯಮಗುಚಿ ಅವರನ್ನು ಸೋಲಿಸಿ ಸೆಮಿಫೈನಲ್ ಹಂತವನ್ನು ಪ್ರವೇಶಿದರು. Link: ಗೆಲುವಿನ ಸ್ಪರ್ಶ ಕಂಡುಕೊಂಡ ಸಿಂಧು ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ ಸೆಮಿಫೈನಲ್ ಪ್ರವೇಶ!
8) ಟರ್ಮ್ ಇನ್ಷೂರೆನ್ಸ್ ಯಾವಾಗ ಕೊಳ್ಳಬೇಕು ಗೊತ್ತಾ? ಲೈಫ್ ಇನ್ಷೂರೆನ್ಸ್ ಪಾಲಿಸಿ ಅಥವಾ ಜೀವ ವಿಮೆ ಪಾಲಿಸಿಗಳು ಪ್ರತಿಯೊಬ್ಬರ ಪಾಲಿಗೂ ವರದಾಯಕ. ಈ ವಿಷಯದ ಅರಿವಿರದೇ ಒಂದು ಕಾಲಕ್ಕೆ ಜನ ಜೀವ ವಿಮಾ ಪಾಲಿಸಿಗಳನ್ನು ಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ವಿಮೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ. Link: Term insurance: ಯಾವಾಗ ಟರ್ಮ್ ಇನ್ಷೂರೆನ್ಸ್ ಕೊಳ್ಳಬೇಕು?
9) ಜಪಾನ್ನಲ್ಲಿ ಭೂಕಂಪ ಸಾಧ್ಯತೆ; ಹವಾಮಾನ ಇಲಾಖೆ ಜಪಾನ್ನ ಈಶಾನ್ಯ ಕರಾವಳಿಯಲ್ಲಿ ಶನಿವಾರ ಪ್ರಬಲ ಭೂಕಂಪವಾಗಿದ್ದು ರಿಕ್ಟರ್ ಮಾಪಕದಲ್ಲಿ 7 ರಷ್ಟು ತೀವ್ರತೆ ದಾಖಲಾಗಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ವರದಿ ಮಾಡಿದೆ. ಜಪಾನ್ನ ಈಶಾನ್ಯ ಕಡಲತೀರದಲ್ಲಿ ಸಂಭವಿಸಿರುವ ಈ ಭೂಕಂಪದಿಂದ ಜಪಾನ್ಗೆ ಸುನಾಮಿ ಭೀತಿ ಎದುರಾಗುವ ಸಾಧ್ಯತೆ ಇದೆ ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ. Link: ಈಶಾನ್ಯ ಜಪಾನ್ನಲ್ಲಿ ಭೂಕಂಪ; ಸುನಾಮಿ ಏಳುವ ಸಾಧ್ಯತೆ
ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.tv9kannada.com ನೋಡುತ್ತಿರಿ.