ಕಂಠಪೂರ್ತಿ ಕುಡಿದು ಹಣ ಕೊಡಲ್ಲ ಅಂದಿದ್ದಕ್ಕೆ ಬಿತ್ತು ಸಿಕ್ಕಾಪಟ್ಟೆ ಗೂಸಾ.. ಬಾರ್ ಕ್ಯಾಶಿಯರ್​ನಿಂದ ಹಲ್ಲೆ ಖಂಡಿಸಿ ಧರಣಿ

ಬಾರ್​ನಲ್ಲಿ ಕಂಠಪೂರ್ತಿ ಕುಡಿದು ಹಣ ಕೊಡಲ್ಲ ಅಂದಿದ್ದಕ್ಕೆ ಶುರುವಾದ ಗಲಾಟೆ ಕೊನೆಗೆ ಮದ್ಯಪ್ರಿಯನ ಮೇಲೆ ಹಲ್ಲೆಯಲ್ಲಿ ಅಂತ್ಯವಾಗಿರುವ ಪ್ರಸಂಗ ಜಿಲ್ಲೆಯ ಚಿಂತಾಮಣಿಯಲ್ಲಿರುವ ಗಣೇಶ್​ ಬಾರ್​ನಲ್ಲಿ ಬೆಳಕಿಗೆ ಬಂದಿದೆ. ಬಾರ್ ಕ್ಯಾಶಿಯರ್​ನಿಂದ ಅಮ್ಜದ್ ಎಂಬುವವರ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿ ಆತನ ಕುಟುಂಬದವರು ಬಾರ್​ ಎದುರು ಗಲಾಟೆ ಮಾಡಿದ್ದಾರೆ.

ಕಂಠಪೂರ್ತಿ ಕುಡಿದು ಹಣ ಕೊಡಲ್ಲ ಅಂದಿದ್ದಕ್ಕೆ ಬಿತ್ತು ಸಿಕ್ಕಾಪಟ್ಟೆ ಗೂಸಾ.. ಬಾರ್ ಕ್ಯಾಶಿಯರ್​ನಿಂದ ಹಲ್ಲೆ ಖಂಡಿಸಿ ಧರಣಿ
ಬಾರ್ ಕ್ಯಾಶಿಯರ್​ನಿಂದ ಹಲ್ಲೆ ಖಂಡಿಸಿ ಸಂಬಂಧಿಕರ ಧರಣಿ (ಎಡ); ಅಮ್ಜದ್​ (ಬಲ)
Follow us
KUSHAL V
|

Updated on:Mar 20, 2021 | 6:08 PM

ಚಿಕ್ಕಬಳ್ಳಾಪುರ: ಬಾರ್​ನಲ್ಲಿ ಕಂಠಪೂರ್ತಿ ಕುಡಿದು ಹಣ ಕೊಡಲ್ಲ ಅಂದಿದ್ದಕ್ಕೆ ಶುರುವಾದ ಗಲಾಟೆ ಕೊನೆಗೆ ಮದ್ಯಪ್ರಿಯನ ಮೇಲೆ ಹಲ್ಲೆಯಲ್ಲಿ ಅಂತ್ಯವಾಗಿರುವ ಪ್ರಸಂಗ ಜಿಲ್ಲೆಯ ಚಿಂತಾಮಣಿಯಲ್ಲಿರುವ ಗಣೇಶ್​ ಬಾರ್​ನಲ್ಲಿ ಬೆಳಕಿಗೆ ಬಂದಿದೆ. ಬಾರ್ ಕ್ಯಾಶಿಯರ್​ನಿಂದ ಅಮ್ಜದ್ ಎಂಬುವವರ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿ ಆತನ ಕುಟುಂಬದವರು ಬಾರ್​ ಎದುರು ಗಲಾಟೆ ಮಾಡಿದ್ದಾರೆ.

CBL BAR GALATE 1

ಬಾರ್ ಕ್ಯಾಶಿಯರ್​ನಿಂದ ಹಲ್ಲೆ ಖಂಡಿಸಿ ಸಂಬಂಧಿಕರ ಧರಣಿ

ಬಾರ್​ ಎದುರು ಅಮ್ಜದ್ ಸಂಬಂಧಿಕರಿಂದ ಗಲಾಟೆ ನಡೆದಿದೆ. ಸದ್ಯ, ಹಲ್ಲೆಯಲ್ಲಿ ಗಾಯಗೊಂಡಿರುವ ಅಮ್ಜದ್​ ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಂತಾಮಣಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

CBL BAR GALATE 2

ಬಾರ್​ ಎದುರು ಕುಟುಂಬದವರ ಪ್ರತಿಭಟನೆ

ನೆಲಮಂಗಲದ ಹಿಪ್ಪೇಆಂಜನೇಯ ಲೇಔಟ್​​ನ ಮನೆಯಲ್ಲಿ ಕಳವು ಇತ್ತ, ನೆಲಮಂಗಲದ ಹಿಪ್ಪೇಆಂಜನೇಯ ಲೇಔಟ್​​ನ ಮನೆಯಲ್ಲಿ ಕಳವು ನಡೆದಿರುವುದು ವರದಿಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣದಲ್ಲಿ ಘಟನೆ ನಡೆದಿದೆ. ವೆಂಕಟೇಶ್ ಎಂಬುವವರ ಮನೆಯಲ್ಲಿ 25 ಸಾವಿರ ನಗದು ಕಳ್ಳತನವಾಗಿದೆ. ಕಾರಿನಲ್ಲಿ ಬಂದ ಖದೀಮರು 25ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ. ಕಿರಾತಕರು ಮನೆ ಬಳಿ ಕಾರು ನಿಲ್ಲಿಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನೆಲಮಂಗಲ ಟೌನ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

NLM HOME THEFT 3

ನೆಲಮಂಗಲದ ಹಿಪ್ಪೇಆಂಜನೇಯ ಲೇಔಟ್​​ನ ಮನೆಯಲ್ಲಿ ಕಳವು

ನಿವೃತ್ತ DySP ಕೃಷ್ಣ ಮೂರ್ತಿ ಜೈಲಿಗೆ ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಗಳಿಕೆಯ ಹಿನ್ನೆಲೆಯಲ್ಲಿ ನಿವೃತ್ತ ಡಿವೈಎಸ್​ಪಿ ಕೃಷ್ಣ ಮೂರ್ತಿ ಜೈಲುಪಾಲಾಗಿದ್ದಾರೆ. ಕೃಷ್ಣಮೂರ್ತಿಗೆ ನಾಲ್ಕು ವರ್ಷಗಳ ಕಾಲ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ನೀಡಿದೆ. ತುಮಕೂರಿನ 7ನೇ ಅಧಿಕ ಸತ್ರ ಜಿಲ್ಲಾ ವಿಶೇಷ ನ್ಯಾಯಾಲಯದಿಂದ ಆದೇಶ ಹೊರಬಿದ್ದಿದೆ. ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಡಿವೈಎಸ್​ಪಿ ನಿವಾಸದ ಮೇಲೆ ಲೋಕಾಯುಕ್ತ ದಾಳಿಯಾಗಿತ್ತು. ಇದೀಗ, ಕೃಷ್ಣಮೂರ್ತಿಗೆ 17 ಲಕ್ಷ ದಂಡ ವಿಧಿಸಿ ಕೋರ್ಟ್ ಜೈಲಿಗೆ ಕಳುಹಿಸಿದೆ.

ಇದನ್ನೂ ಓದಿ: ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ: ತಲೆಮರೆಸಿಕೊಂಡಿರುವ ಜೆ.ಪಿ.ನಗರದ ಉದ್ಯಮಿ ‌ಮನೆ ಮೇಲೆ ಎಸ್​ಐಟಿ ದಾಳಿ

Published On - 6:05 pm, Sat, 20 March 21