AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Air fare: ದೇಶೀ ವಿಮಾನ ಪ್ರಯಾಣದ ಕನಿಷ್ಠ ದರದಲ್ಲಿ ಶೇಕಡಾ 5ರಷ್ಟು ಹೆಚ್ಚಳ

ದೇಶೀಯ ವಿಮಾನ ಯಾನದ ಪ್ರಯಾಣ ದರ ಕನಿಷ್ಠ ಮಿತಿಯನ್ನು ಶೇಕಡಾ 5ರಷ್ಟು ತಕ್ಷಣದಿಂದಲೇ ಜಾರಿಗೆ ಬರುವಂತೆ ಹೆಚ್ಚಳ ಮಾಡಲಾಗಿದೆ ಎಂದು ನಾಗರಿಕ ವಿಮಾನ ಯಾನ ಖಾತೆ ಸಚಿವ ಹರ್​ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.

Air fare: ದೇಶೀ ವಿಮಾನ ಪ್ರಯಾಣದ ಕನಿಷ್ಠ ದರದಲ್ಲಿ ಶೇಕಡಾ 5ರಷ್ಟು ಹೆಚ್ಚಳ
ಪ್ರಾತಿನಿಧಿಕ ಚಿತ್ರ
Srinivas Mata
|

Updated on: Mar 20, 2021 | 4:31 PM

Share

ನವದೆಹಲಿ: ದೇಶೀಯ ವಿಮಾನ ಯಾನದ ಪ್ರಯಾಣ ದರಕ್ಕೆ ಇದ್ದ ಕನಿಷ್ಠ ಮಿತಿಯನ್ನು ನಾಗರಿಕ ವಿಮಾನ ಯಾನ ಸಚಿವಾಲಯವು ಶೇಕಡಾ 5ರಷ್ಟು ತಕ್ಷಣದಿಂದಲೇ ಜಾರಿಗೆ ಬರುವಂತೆ ಹೆಚ್ಚಳ ಮಾಡಿದೆ. ಇದರ ಪರಿಣಾಮವಾಗಿ ಅತ್ಯಂತ ಅಗ್ಗದ ದರಕ್ಕೆ ಸಿಗುತ್ತಿದ್ದ ವಿಮಾನದ ಟಿಕೆಟ್​ಗಳು ದುಬಾರಿ ಆಗಲಿವೆ. ಶುಕ್ರವಾರದಂದು ಈ ಬಗ್ಗೆ ಟ್ವೀಟ್ ಮಾಡಿರುವ ನಾಗರಿಕ ವಿಮಾನಯಾನ ಖಾತೆ ಸಚಿವ ಹರ್​ದೀಪ್ ಸಿಂಗ್ ಪುರಿ, ಏವಿಯೇಷನ್ ಟರ್ಬೈನ್ ಫ್ಯುಯೆಲ್ (ATF) ದರದಲ್ಲಿ ನಿರಂತರವಾಗಿ ಏರಿಕೆ ಕಂಡಿದ್ದರಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಅಂದ ಹಾಗೆ ಕೊರೊನಾ ಬಿಕ್ಕಟ್ಟಿನ ನಂತರ ಮತ್ತೆ ವಿಮಾನ ಸಂಚಾರವು ಶುರುವಾಯಿತಲ್ಲಾ, ಆಗ ಏಳು ಬ್ಯಾಂಡ್​ಗಳ ಮೇಲೆ ವಿಮಾನ ದರಗಳಿಗೆ ಮಿತಿ ಹಾಕಲಾಯಿತು. ಯಾವಾಗ ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾನಗಳು ಅಮಾನತು ಆದವೋ ಆಗಲೇ ವಿಮಾನಗಳ ಸಂಚಾರ ಕಾಲಾವಧಿಯ ಆಧಾರದ ಮೇಲೆ ಬ್ಯಾಂಡ್​ಗಳನ್ನು ನಿರ್ಧರಿಸಲಾಯಿತು.

ದರದ ಮಿತಿಯು ತಾತ್ಕಾಲಿಕ ಮಾತ್ರ. ಒಂದು ಸಲ ವಿಮಾನಗಳ ಕಾರ್ಯಾಚರಣೆ ಸಹಜ ಸ್ಥಿತಿಗೆ ಮರಳಿದ ಮೇಲೆ ಈ ಮಿತಿಗೆ ತಡೆಯನ್ನು ನಿಲ್ಲಿಸಲಾಗುತ್ತದೆ ಎಂದು ಸಚಿವಾಲಯದಿಂದ ತಿಳಿಸಲಾಗಿದೆ. ವಿಮಾನ ಯಾನ ಸಂಸ್ಥೆಗಳು ಶೇಕಡಾ 80ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಣೆ ಮಾಡಲಿದೆ.

ಇದನ್ನೂ ಓದಿ: ಮಾಸ್ಕ್ ಸರಿಯಾಗಿ ಧರಿಸದಿದ್ದಲ್ಲಿ ನಿಲ್ದಾಣ ಮಾತ್ರವಲ್ಲ, ವಿಮಾನದಿಂದಲೂ ಹೊರಗೆ ಹಾಕ್ತಾರೆ

Follow Us
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!