MNS Aurangabad rally ಧ್ವನಿವರ್ಧಕ ವಿವಾದದ ನಡುವೆಯೇ ಔರಂಗಾಬಾದ್‌ನಲ್ಲಿ ರಾಜ್ ಠಾಕ್ರೆ ನೇತೃತ್ವದಲ್ಲಿ ಎಂಎನ್‌ಎಸ್ ಮೆಗಾ ರ್ಯಾಲಿ

ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ 53ರ ಹರೆಯದ ರಾಜ್ ಠಾಕ್ರೆ ಅವರು ಔರಂಗಾಬಾದ್ ರ್ಯಾಲಿಯ ಮೂಲಕ ತಮ್ಮ ಹೊಸ ರಾಜಕೀಯ ಯಾತ್ರೆಯನ್ನು ರೂಪಿಸುವ ನಿರೀಕ್ಷೆಯಲ್ಲಿದ್ದಾರೆ.

MNS Aurangabad rally ಧ್ವನಿವರ್ಧಕ ವಿವಾದದ ನಡುವೆಯೇ ಔರಂಗಾಬಾದ್‌ನಲ್ಲಿ ರಾಜ್ ಠಾಕ್ರೆ ನೇತೃತ್ವದಲ್ಲಿ ಎಂಎನ್‌ಎಸ್ ಮೆಗಾ ರ್ಯಾಲಿ
ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ
Edited By:

Updated on: May 01, 2022 | 6:19 PM

ಔರಂಗಾಬಾದ್‌: ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಮುಖ್ಯಸ್ಥ ರಾಜ್ ಠಾಕ್ರೆ (Raj Thackeray) ಭಾನುವಾರ ಮಹಾರಾಷ್ಟ್ರ ದಿನದ (Maharashtra Day )ಅಂಗವಾಗಿ ಔರಂಗಾಬಾದ್‌ನಲ್ಲಿ(Aurangabad) ಮೆಗಾ ರ್ಯಾಲಿ ನಡೆಸಲಿದ್ದಾರೆ. 53ರ ಹರೆಯದ ರಾಜ್ ಠಾಕ್ರೆ ಅವರು ಔರಂಗಾಬಾದ್ ರ್ಯಾಲಿಯ ಮೂಲಕ ತಮ್ಮ ಹೊಸ ರಾಜಕೀಯ ಯಾತ್ರೆಯನ್ನು ರೂಪಿಸುವ ನಿರೀಕ್ಷೆಯಲ್ಲಿದ್ದಾರೆ. ಮುಂಬೈ, ಥಾಣೆ, ನವಿ ಮುಂಬೈ, ಪುಣೆ, ಪಿಂಪ್ರಿ-ಚಿಂಚ್‌ವಾಡ್, ಔರಂಗಾಬಾದ್, ಇತ್ಯಾದಿಗಳಲ್ಲಿ ಉನ್ನತ ನಾಗರಿಕ ಸಂಸ್ಥೆಗಳು ಲೋಕಸಭೆ ಮತ್ತು ಅಸೆಂಬ್ಲಿ ಚುನಾವಣೆಗಳ ಪೂರ್ವಭಾವಿಯಾಗಿ ಶೀಘ್ರದಲ್ಲೇ ಚುನಾವಣೆಗೆ ಹೋಗಲು ನಿರ್ಧರಿಸಿರುವುದರಿಂದ ಈ  ರ್ಯಾಲಿಯನ್ನು  ಕಾರ್ಯತಂತ್ರವೆಂದು ಪರಿಗಣಿಸಲಾಗಿದೆ. ವಿರೋಧ ಪಕ್ಷವಾದ ಭಾರತೀಯ ಜನತಾ ಪಕ್ಷದೊಂದಿಗೆ (BJP) ಉತ್ತಮ ಸ್ನೇಹ ಹೊಂದಿದ್ದರೂ ಎಂಎನ್‌ಎಸ್ ಇನ್ನೂ ತಮ್ಮ ಅರಾಜಕೀಯ ಧೋರಣೆಯನ್ನು ಬಹಿರಂಗವಾಗಿ ಘೋಷಿಸಲು ಹಿಂಜರಿಯುತ್ತಿದೆ. ಆದರೆ ಬಿಜೆಪಿ ಮತ್ತು ಶಿವಸೇನೆ ಎರಡರಿಂದಲೂ ಹೇಳಿಕೊಳ್ಳುವ ಹಿಂದುತ್ವವನ್ನು ಹಿಡಿಯಲು ಅದು ಪ್ರಯತ್ನಿಸುತ್ತಿದೆ. ಇಂದಿನ ರ್ಯಾಲಿಗೆ ಷರತ್ತುಬದ್ಧ ಅನುಮತಿ ದೊರೆತಿದ್ದು ಎಸ್‌ಎಂ ಮೈದಾನದಲ್ಲಿ 2,000 ಪೊಲೀಸ್ ಸಿಬ್ಬಂದಿ ಮತ್ತು ಇತರ ಪಡೆಗಳು, ಸಿಸಿಟಿವಿಗಳು, ಶ್ವಾನದಳಗಳು, ಮೆಟಲ್ ಡಿಟೆಕ್ಟರ್‌ಗಳು, ಡ್ರೋನ್ ಕಣ್ಗಾವಲು ಬಂದೋಬಸ್ತ್ ಮಾಡಲಾಗಿದೆ.

ರಾಜ್ ಠಾಕ್ರೆ ಅವರು ಮೇ 3 ರೊಳಗೆ ಮಸೀದಿಗಳಿಂದ ಧ್ವನಿವರ್ಧಕ ತೆಗೆದುಹಾಕಬೇಕು ಎಂದು  ಧ್ವನಿವರ್ಧಕ ವಿರೋಧಿ ಅಭಿಯಾನವನ್ನು ಮುನ್ನಡೆಸುತ್ತಿರುವಾಗ, ಮಹಾರಾಷ್ಟ್ರ ಸರ್ಕಾರವು ಯಾವುದೇ ಅಹಿತಕರ ಘಟನೆಗಳಿಲ್ಲದೆ ಎಂಎನ್‌ಎಸ್ ರ್ಯಾಲಿ ಹಾದುಹೋಗುವುದನ್ನು ಖಚಿತಪಡಿಸಿಕೊಳ್ಳಲು ಸ್ವತಃ ಸಜ್ಜಾಗಿದೆ.

ರಾಜ್ ಅವರು ಜೂನ್ 5 ರಂದು ಅಯೋಧ್ಯೆಗೆ ಭೇಟಿ ನೀಡಿ ಅಲ್ಲಿಯ ರಾಮ ಮಂದಿರದಲ್ಲಿ ಪ್ರಾರ್ಥಿಸಲು ಯೋಜಿಸಿದ್ದಾರೆ. ಗುರುವಾರ, ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಲ್ಲಿನ ವಿವಿಧ ಪೂಜಾ ಸ್ಥಳಗಳಿಂದ ಸುಮಾರು 11,000 ಧ್ವನಿವರ್ಧಕಗಳನ್ನು ಕಿತ್ತುಹಾಕಿದ್ದಕ್ಕಾಗಿ ಹೊಗಳಿದರು.

ಧ್ವನಿವರ್ಧಕಗಳ ಬಗ್ಗೆ ಕೇಂದ್ರ ನೀತಿ ರೂಪಿಸಬೇಕು, ಶಿವಸೇನಾ ತನ್ನ ನಿಲುವಿನಲ್ಲಿ ದೃಢವಾಗಿದೆ.ಧ್ವನಿವರ್ಧಕ ವಿವಾದ ಮುಂದುವರೆದಂತೆ, ಶಿವಸೇನೆ ಮುಖ್ಯ ವಕ್ತಾರ ಮತ್ತು ಸಂಸದ ಸಂಜಯ್ ರಾವುತ್ ಅವರು ಧ್ವನಿವರ್ಧಕಗಳ ಕುರಿತು ಕೇಂದ್ರವು ರಾಷ್ಟ್ರೀಯ ನೀತಿಯನ್ನು ರೂಪಿಸಬೇಕು ಎಂಬ ಎಂವಿಎ ನಿಲುವನ್ನು ಪುನರುಚ್ಚರಿಸಿದರು. ಕೆಲವು ಧ್ವನಿವರ್ಧಕಗಳು ರಾಜ್ಯದಲ್ಲಿ ಕಲಹವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:13 pm, Sun, 1 May 22