ಕಂಗನಾ ರನೌತ್ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ ಶಾಸಕ ಪ್ರತಾಪ್ ಸರ್​ನಾಯಕ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 14, 2020 | 8:18 PM

ಪ್ರಕರಣಕ್ಕೆ ಸಂಬಂಧಿಸಿದ ಮಹಾರಾಷ್ಟ್ರ ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ಅನಂತ್​ ಕಲ್ಸೆಗೆ ದೂರು ನೀಡಿದ್ದಾರೆ.

ಕಂಗನಾ ರನೌತ್ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ ಶಾಸಕ ಪ್ರತಾಪ್ ಸರ್​ನಾಯಕ್
ಸಾಂದರ್ಭಿಕ ಚಿತ್ರ
Follow us on

ಮುಂಬೈ: ನಟಿ ಕಂಗನಾ ರನೌತ್ ಅವರಿಂದ ಹಕ್ಕುಚ್ಯುತಿ ಉಂಟಾಗಿದೆ ಎಂದು ಶಿವಸೇನಾ ಶಾಸಕ ಪ್ರತಾಪ್ ಸರ್​ನಾಯಕ್ ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಮಹಾರಾಷ್ಟ್ರ ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ಅನಂತ್​ ಕಲ್ಸೆಗೆ ದೂರು ನೀಡಿದ್ದಾರೆ.

ಇತ್ತೀಚೆಗೆ ಪ್ರತಾಪ್ ಸರ್​ನಾಯಕ್ ಅವರ ಮನೆಯ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎರಡು ಬಾರಿ ದಾಳಿ ನಡೆಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್​ ಮಾಡಿದ್ದ ಕಂಗನಾ ರನೌತ್​, ನನಗೆ ಥಳಿಸುವ ಬೆದರಿಕೆ ಹಾಕಿದ್ದವರ ಮನೆಯಲ್ಲಿ ಪಾಕಿಸ್ತಾನದ ಕ್ರೆಡಿಟ್​ ಕಾರ್ಡ್​ ಸಿಕ್ಕಿತ್ತು ಎಂದು ಬರೆದುಕೊಂಡಿದ್ದರು. ಈ ಆರೋಪ ಸಂಪೂರ್ಣವಾಗಿ ಸುಳ್ಳು ಎಂದು ಪ್ರತಾಪ್ ಸರ್​ನಾಯಕ್ ಹೇಳಿದ್ದಾರೆ.

ನನ್ನ ಹಾಗೂ ನನ್ನ ಮಗನನ್ನು ಇಡಿ ವಿಚಾರಣೆ ಮಾಡಿತ್ತು. ನಾವು ಅದಕ್ಕೆ ಸಹಕಾರ ಕೂಡ ನೀಡಿದ್ದೆವು. ಈ ಬಗ್ಗೆ ಸಮಸ್ಯೆ ಇಲ್ಲ. ಆದರೆ, ಕಂಗನಾ ಟ್ವೀಟ್​ ನಂತರದಲ್ಲಿ ಮಾಧ್ಯಮದವರು ನನ್ನ ಬಗ್ಗೆ ಸಾಕಷ್ಟು ಸುದ್ದಿಗಳನ್ನು ಪ್ರಕಟ ಮಾಡಿದ್ದರು. ಇದರಿಂದ ನನಗೆ ಮಾನಹಾನಿ ಆಗಿದೆ. ನನ್ನ ಮನೆಯಲ್ಲಿ ಏನೂ ಸಿಕ್ಕಿಲ್ಲ ಎಂದು ಖುದ್ದು ಜಾರಿ ನಿರ್ದೇಶನಾಲಯದ ಅಧಿಕಾರಿಗಳೇ ಘೋಷಣೆ ಮಾಡಿದ್ದರು ಎಂದು ಸರ್​ನಾಯಕ್​ ದೂರಿ​ನಲ್ಲಿ ತಿಳಿಸಿದ್ದಾರೆ.

ಈ ದೂರನ್ನು ಸ್ವೀಕರಿಸಿ ಕಂಗನಾ ರನೌತ್​ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಒಂದೊಮ್ಮೆ ಮಹಾರಾಷ್ಟ್ರ ವಿಧಾನ ಸಭೆಯ ಪ್ರಧಾನ ಕಾರ್ಯದರ್ಶಿ ಈ ದೂರನ್ನು ಸ್ವೀಕರಿಸಿದರೆ, ಕಂಗನಾ ವಿರುದ್ಧ ತನಿಖೆಗೆ ಆಗ್ರಹಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಅಕ್ರಮ ಹಣ ವರ್ಗಾವಣೆ: ಶಿವಸೇನೆ ಶಾಸಕ ಪ್ರತಾಪ್ ಸರ್​ನಾಯಕ್ ಅರ್ಜಿಗೆ ಸುಪ್ರೀಂಕೋರ್ಟ್ ಮನ್ನಣೆ