ಮದುವೆಯಾಗಿ ಮೂರೇ ವಾರಕ್ಕೆ ಕೊಡಲಿಯಿಂದ ಗಂಡನ ಪ್ರಾಣ ತೆಗೆದ ಹೆಂಡತಿ

ಮಹಿಳೆಯೊಬ್ಬಳು ಮದುವೆಯಾಗಿ ಮೂರೇ ವಾರಕ್ಕೆ ಗಂಡನನ್ನು ಕೊಡಲಿಯಿಂದ ಕೊಚ್ಚಿ ಕೊಲೆ(Murder) ಮಾಡಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ. ಸಾಂಗ್ಲಿ ಜಿಲ್ಲೆಯ ಕುಪ್ವಾಡ್‌ನಲ್ಲಿ ವಟ್ ಪೂರ್ಣಿಮಾ ದಿನದಂದು ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಮೇಘಾಲಯದಲ್ಲಿ ರಾಜಾ ರಘುವಂಶಿ ಕೊಲೆ ನಡೆದು ಕೆಲವು ದಿನಗಳ ನಂತರ, ಮಹಾರಾಷ್ಟ್ರದಲ್ಲಿ ಹೃದಯ ವಿದ್ರಾವಕ ಘಟನೆಬೆಳಕಿಗೆ ಬಂದಿದೆ.ಮಂಗಳವಾರ (ಜೂನ್ 10) ರಾತ್ರಿ ಇಬ್ಬರ ನಡುವೆ ಜಗಳ ನಡೆದಿತ್ತು ಎಂದು ಹೇಳಲಾಗುತ್ತಿದೆ. ಪೊಲೀಸರ ಪ್ರಕಾರ, ರಾತ್ರಿ 12.30 ರ ಸುಮಾರಿಗೆ ಅನಿಲ್ ಮಲಗಿದ್ದಾಗ, ರಾಧಿಕಾ ಕೊಡಲಿಯಿಂದ ಆತನ ತಲೆಗೆ ಹಲ್ಲೆ ನಡೆಸಿದ್ದಾಳೆ. ಅನಿಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮದುವೆಯಾಗಿ ಮೂರೇ ವಾರಕ್ಕೆ ಕೊಡಲಿಯಿಂದ ಗಂಡನ ಪ್ರಾಣ ತೆಗೆದ ಹೆಂಡತಿ
ಸಾಂಗ್ಲಿ

Updated on: Jun 12, 2025 | 1:48 PM

ಸಾಂಗ್ಲಿ, ಜೂನ್ 12: ಮಹಿಳೆಯೊಬ್ಬಳು ಮದುವೆಯಾಗಿ ಮೂರೇ ವಾರಕ್ಕೆ ಗಂಡನನ್ನು ಕೊಡಲಿಯಿಂದ ಕೊಚ್ಚಿ ಕೊಲೆ(Murder) ಮಾಡಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ. ಸಾಂಗ್ಲಿ ಜಿಲ್ಲೆಯ ಕುಪ್ವಾಡ್‌ನಲ್ಲಿ ವಟ್ ಪೂರ್ಣಿಮಾ ದಿನದಂದು ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ಮೇಘಾಲಯದಲ್ಲಿ ರಾಜಾ ರಘುವಂಶಿ ಕೊಲೆ ನಡೆದು ಕೆಲವು ದಿನಗಳ ನಂತರ, ಮಹಾರಾಷ್ಟ್ರದಲ್ಲಿ ಹೃದಯ ವಿದ್ರಾವಕ ಘಟನೆಬೆಳಕಿಗೆ ಬಂದಿದೆ.ಮಂಗಳವಾರ (ಜೂನ್ 10) ರಾತ್ರಿ ಇಬ್ಬರ ನಡುವೆ ಜಗಳ ನಡೆದಿತ್ತು ಎಂದು ಹೇಳಲಾಗುತ್ತಿದೆ. ಪೊಲೀಸರ ಪ್ರಕಾರ, ರಾತ್ರಿ 12.30 ರ ಸುಮಾರಿಗೆ ಅನಿಲ್ ಮಲಗಿದ್ದಾಗ, ರಾಧಿಕಾ ಕೊಡಲಿಯಿಂದ ಆತನ ತಲೆಗೆ ಹಲ್ಲೆ ನಡೆಸಿದ್ದಾಳೆ. ಅನಿಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ರಾಧಿಕಾ ತನ್ನ ಸೋದರಸಂಬಂಧಿಗೆ ಈ ಕೊಲೆಯ ಬಗ್ಗೆ ತಿಳಿಸಿದ್ದಳು. ಪೊಲೀಸರು ಬುಧವಾರ (ಜೂನ್ 11) ಆರೋಪಿ ಪತ್ನಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆಕೆಯನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಇದನ್ನೂ ಓದಿ
ವಿದೇಶಕ್ಕೆ ತೆರಳಿದ್ದ ವಿವಿಧ ಪಕ್ಷಗಳ ನಾಯಕರ ಜೊತೆ ಪ್ರಧಾನಿ ಮೋದಿ ಔತಣಕೂಟ
ನಾವು ಪಾಕಿಸ್ತಾನದೊಳಗೆ ದಾಳಿ ಮಾಡಲು ಹಿಂಜರಿಯುವುದಿಲ್ಲ; ಜೈಶಂಕರ್ ಎಚ್ಚರಿಕೆ
ಆ ಒಂದೇ ಒಂದು ತಪ್ಪಿನಿಂದ ಸಿಕ್ಕಿಬಿದ್ದ ರಾಜಾ ರಘುವಂಶಿ ಪತ್ನಿ ಸೋನಂ
ಲೋಕಸಭೆಗೆ ಉಪಸಭಾಪತಿ ಆಯ್ಕೆ ಮಾಡುವಂತೆ ಪ್ರಧಾನಿ ಮೋದಿಗೆ ಖರ್ಗೆ ಪತ್ರ

ಪ್ರಾಥಮಿಕ ತನಿಖೆಯಲ್ಲಿ, ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎಂದು ನಂಬಲಾಗಿದೆ ಎಂದು ಎಂಐಡಿಸಿ ಪೊಲೀಸ್ ಠಾಣೆಯ ಸಹಾಯಕ ಇನ್ಸ್‌ಪೆಕ್ಟರ್ ದೀಪಕ್ ಭಂಡವಾಲ್ಕರ್ ಹೇಳಿದ್ದಾರೆ. ಮೃತರ ಸಂಬಂಧಿ ಮುಖೇಶ್ ಲೋಖಂಡೆ ಅವರ ದೂರಿನ ಆಧಾರದ ಮೇಲೆ , ಮೃತರ ಪತ್ನಿ ರಾಧಿಕಾ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 103 (1) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.

ಮತ್ತಷ್ಟು ಓದಿ: ಮೇಘಾಲಯದ ಹನಿಮೂನ್​ನಲ್ಲಿ ಕೊಲೆ; ನಾನೇ ಗಂಡ ರಾಜ ರಘುವಂಶಿಯನ್ನು ಕೊಂದಿದ್ದೆಂದು ಒಪ್ಪಿಕೊಂಡ ಸೋನಂ

ಆರೋಪಿ ಮಹಿಳೆಯನ್ನು ಬಂಧಿಸಲಾಗಿದೆ. ಸಾಂಗ್ಲಿ ಜಿಲ್ಲೆಯ ಕುಪ್ವಾಡ್ ತಹಸಿಲ್ ನಿವಾಸಿ ಅನಿಲ್ ಲೋಖಂಡೆ ಅವರ ಎರಡನೇ ವಿವಾಹ ಇದಾಗಿತ್ತು. ಅವರ ಮೊದಲ ಪತ್ನಿ ಕ್ಯಾನ್ಸರ್ ನಿಂದ ನಿಧನರಾಗಿದ್ದರು. ಮದುವೆಯ ನಂತರ, ಅನಿಲ್ ಲೋಖಂಡೆ ಮತ್ತು ಅವರ ಪತ್ನಿ ರಾಧಿಕಾ ನಡುವೆ ಜಗಳ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇದರಿಂದ ಕೋಪಗೊಂಡ ರಾಧಿಕಾ ತನ್ನ ಪತಿ ಮಲಗಿದ್ದಾಗ ಕೊಡಲಿಯಿಂದ ಹಲ್ಲೆ ನಡೆಸಿದ್ದಾಳೆ ಆರೋಪಿ ಮಹಿಳೆಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ.

ರಾಜಾ ರಘುವಂಶಿ ಕೊಲೆ
ರಾಜಾ ರಘುವಂಶಿ ಹಾಗೂ ಸೋನಮ್ ಮೇ 11ರಂದು ವಿವಾಹವಾಗಿದ್ದರು, ಸೋನಮ್ ರಾಜ್ ಕುಶ್ವಾಹ ಎಂಬಾತನನ್ನು ಪ್ರೀತಿಸುತ್ತಿದ್ದಳು. ಮದುವೆಯಾಗ ಕೆಲವೇ ದಿನಗಳಲ್ಲಿ ಗಂಡನನ್ನು ಹನಿಮೂನ್​ಗೆಂದು ಮೇಘಾಲಯಕ್ಕೆ ಕರೆದೊಯ್ದು ಹತ್ಯೆ ಮಾಡಿಸಿದ್ದಾಳೆ. ಈಗ ಸೋನಮ್ ಹಾಗೂ ಇತರೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ