Lakhimpur Kheri Violence: ಲಖಿಂಪುರ ಖೇರಿ ಹಿಂಸಾಚಾರ ಕೇಸ್​​ನಲ್ಲಿ ಬಂಧಿತರಾದ ಆಶೀಶ್​ ಮಿಶ್ರಾಗೆ ಅನಾರೋಗ್ಯ; ಸರ್ಕಾರಿ ಆಸ್ಪತ್ರೆಗೆ ದಾಖಲು

| Updated By: Lakshmi Hegde

Updated on: Oct 24, 2021 | 10:59 AM

ಅಕ್ಟೋಬರ್​ 3ರಂದು ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ವಾಹನ ಹರಿದು, ಹಿಂಸಾಚಾರ ಉಂಟಾಗಿತ್ತು. ಪ್ರತಿಭಟನಾ ನಿರತ ರೈತರ ಮೇಲೆ ಹರಿದಿರುವ ವಾಹನದಲ್ಲಿ ಆಶೀಶ್​ ಮಿಶ್ರಾ ಇದ್ದಾರೆ ಎಂಬ ಆರೋಪದಡಿ ಅವರನ್ನು ಬಂಧಿಸಲಾಗಿದೆ.

Lakhimpur Kheri Violence: ಲಖಿಂಪುರ ಖೇರಿ ಹಿಂಸಾಚಾರ ಕೇಸ್​​ನಲ್ಲಿ ಬಂಧಿತರಾದ ಆಶೀಶ್​ ಮಿಶ್ರಾಗೆ ಅನಾರೋಗ್ಯ; ಸರ್ಕಾರಿ ಆಸ್ಪತ್ರೆಗೆ ದಾಖಲು
ಆಶೀಶ್​ ಮಿಶ್ರಾ
Follow us on

ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ(Lakhimpur Kheri Violence)ದಲ್ಲಿ ಬಂಧಿತರಾಗಿರುವ ಆಶೀಶ್​ ಮಿಶ್ರಾರಿಗೆ ಅನಾರೋಗ್ಯ ಉಂಟಾಗಿದ್ದು ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಶೀಶ್​ ಮಿಶ್ರಾ (Ashish Mishra) ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆಂದು ಹೇಳಲಾಗಿದ್ದು, ಅವರ ರಕ್ತದ ಮಾದರಿ ತಪಾಸಣೆಗಾಗಿ ಕಳಿಸಲಾಗಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಅವರನ್ನು ಜೈಲು ಅಧಿಕಾರಿಗಳೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಲಖಿಂಪುರ ಖೇರಿ ಹಿಂಸಾಚಾರದ ಪ್ರಮುಖ ಆರೋಪಿ ಆಶೀಶ್​ ಮಿಶ್ರಾರನ್ನು ಜಿಲ್ಲಾ ಕಾರಾಗೃಹದಲ್ಲಿ ಇಡಲಾಗಿತ್ತು. ಅವರೀಗ ಶಂಕಿತ ಡೆಂಗ್ಯೂದಿಂದ ಬಳಲುತ್ತಿರುವ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜೈಲು ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.  

ಆಶೀಶ್ ಮಿಶ್ರಾ ಜ್ವರದ ಬಗ್ಗೆ ಮಾಹಿತಿ ನೀಡಿರುವ ಲಖಿಂಪುರ ಖೇರಿ ಜಿಲ್ಲಾ ಕಾರಾಗೃಹದ ಪೊಲೀಸ್​ ಅಧೀಕ್ಷಕ ಪಿಪಿ ಸಿಂಗ್, ಆಶೀಶ್​ ಮಿಶ್ರಾಗೆ ಜ್ವರ ಇರುವುದು ನಿಜ. ಆದರೆ ಡೆಂಗ್ಯೂ  ಹೌದೋ ಅಲ್ಲವೋ ಗೊತ್ತಾಗುತ್ತಿಲ್ಲ. ಲಕ್ಷಣಗಳು ಡೆಂಗ್ಯೂದಂತೆ ಇವೆ. ರಕ್ತದ ಮಾದರಿಯ ತಪಾಸಣೆ ವರದಿ ಬಂದ ಬಳಿಕವಷ್ಟೇ ನಿಖರವಾಗಿ ಗೊತ್ತಾಗಲಿದೆ ಎಂದಿದ್ದಾರೆ.

ಅಕ್ಟೋಬರ್​ 3ರಂದು ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ವಾಹನ ಹರಿದು, ಹಿಂಸಾಚಾರ ಉಂಟಾಗಿತ್ತು. ಅದರಲ್ಲಿ 8 ಮಂದಿ ಮೃತಪಟ್ಟಿದ್ದಾರೆ. ಪ್ರತಿಭಟನಾ ನಿರತ ರೈತರ ಮೇಲೆ ಹರಿದಿರುವ ವಾಹನದಲ್ಲಿ, ಕೇಂದ್ರ ಸಚಿವ ಅಜಯ್​ ಮಿಶ್ರಾ ಪುತ್ರ ಆಶೀಶ್​ ಮಿಶ್ರಾ ಇದ್ದಾರೆ ಎಂಬ ಆರೋಪದಡಿ ಅವರನ್ನು ಬಂಧಿಸಲಾಗಿದೆ. ವೈರಲ್​ ಆದ ವಿಡಿಯೋದಲ್ಲಿ ಆಶೀಶ್​ ಮಿಶ್ರಾ ವಾಹನದಿಂದ ಇಳಿದು ಓಡುವ ದೃಶ್ಯವೂ ಕಾಣಿಸುತ್ತದೆ ಎಂದು ಹೇಳಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.  ಇನ್ನು ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಉತ್ತರಪ್ರದೇಶ ಪೊಲೀಸ್​ ಕ್ರೈಂ ಬ್ರ್ಯಾಂಚ್​ ಇದುವರೆಗೆ 13 ಮಂದಿಯನ್ನು ಬಂಧಿಸಿದೆ.  ಈ ಪ್ರಕರಣವನ್ನು ಸುಪ್ರೀಂಕೋರ್ಟ್ ಸುಮೊಟೊ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಆಶೀಶ್​ ಮಿಶ್ರಾರನ್ನು ಬಂಧಿಸಲು ವಿಳಂಬ ಮಾಡುತ್ತಿರುವ ಬಗ್ಗೆ ಉತ್ತರಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.

ಇದನ್ನೂ ಓದಿ: Shilpa Shetty: ಮಕ್ಕಳು ಹಾಗೂ ತಾಯಿಯೊಂದಿಗೆ ಶಿಲ್ಪಾ ಶೆಟ್ಟಿ ಭರ್ಜರಿ ಸುತ್ತಾಟ; ರಾಜ್ ಕುಂದ್ರಾ ಎಲ್ಲಿ ಎಂದು ಪ್ರಶ್ನಿಸಿದ ಫ್ಯಾನ್ಸ್

ಉಡುಪಿ ಮಠಕ್ಕೆ ಸಿದ್ದರಾಮಯ್ಯ ಭೇಟಿ ನೀಡದಿರುವ ಕಾರಣ ಅವರನ್ನು ಮಠದ ವಿರೋಧಿ ಅನ್ನಲಾಗದು: ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ