ಆತಂಕ ಶುರು! ವಿದೇಶಗಳಲ್ಲಿ ಹೊಸ ತಳಿಯ ಕೊರೊನಾ ವೈರಸ್ ಪತ್ತೆ
ಇತರೆ ಕೊರೊನಾ ತಳಿಗಳಿಗಿಂತ ಇದು ವೇಗವಾಗಿ ಹರಡುವ ತಳಿಯಾಗಿದೆ. ಹೊಸ ತಳಿ ಬಗ್ಗೆ ತಜ್ಞರಿಂದ ಅಧ್ಯಯನ ಮುಂದುವರಿದಿದ್ದು, ಆರೋಗ್ಯ ಇಲಾಖೆ ಎ.ವೈ. 4.2 ಬಗ್ಗೆ ಎಚ್ಚರಿಕೆ ವಹಿಸುತ್ತಿದೆ.
ಬೆಂಗಳೂರು: ಕೊರೊನಾ ಸೋಂಕು (Coronavirus) ಕಡಿಮೆಯಾದ ಬೆನ್ನಲ್ಲೇ ಹೊಸ ಆತಂಕ ಶುರುವಾಗಿದೆ. ವಿದೇಶಗಳಲ್ಲಿ ಹೊಸ ತಳಿಯ ಕೊರೊನಾ ವೈರಸ್ ಪತ್ತೆಯಾಗಿದೆ. ಬ್ರಿಟನ್, ಯೂರೋಪ್ ದೇಶಗಳಲ್ಲಿ ಹೊಸ ತಳಿ ಪತ್ತೆಯಾಗಿದೆ. ನಿನ್ನೆ ಒಂದೇ ದಿನ ಬ್ರಿಟನ್ನಲ್ಲಿ 52 ಸಾವಿರ ಕೇಸ್ ಪತ್ತೆಯಾಗಿರುವ ಬಗ್ಗೆ ಮಾಹಿತಿ ಇದೆ. ಎ.ವೈ 4.2 ಹೆಸರಿನ ಹೊಸ ತಳಿಯ ಕೊರೊನಾ ಕಾಣಿಸಿಕೊಂಡಿದ್ದು, ಮತ್ತೆ ಲಾಕ್ಡೌನ್ ಮಾಡುವಂತೆ ತಜ್ಞರು ಸಲಹೆ ನೀಡುತ್ತಿದ್ದಾರೆ.
ಜುಲೈ 17ರ ಬಳಿಕ ಮೊದಲ ಬಾರಿಗೆ ಕೇಸ್ ಹೆಚ್ಚಳವಾಗಿದೆ. ಇತರೆ ಕೊರೊನಾ ತಳಿಗಳಿಗಿಂತ ಇದು ವೇಗವಾಗಿ ಹರಡುವ ತಳಿಯಾಗಿದೆ. ಹೊಸ ತಳಿ ಬಗ್ಗೆ ತಜ್ಞರಿಂದ ಅಧ್ಯಯನ ಮುಂದುವರಿದಿದ್ದು, ಆರೋಗ್ಯ ಇಲಾಖೆ ಎ.ವೈ. 4.2 ಬಗ್ಗೆ ಎಚ್ಚರಿಕೆ ವಹಿಸುತ್ತಿದೆ.
ಹೊರದೇಶಗಳ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ದೇಶಕ್ಕೆ ಮತ್ತೆ ಗಂಡಾಂತರ ಕಾಡುತ್ತದೆ. ಮೊದಲ ಮತ್ತು ಎರಡನೇ ಅಲೆ ದೇಶಕ್ಕೆ ಕಾಲಿಡಲು ಹೊರದೇಶಗಳೇ ಕಾರಣವಾಗಿತ್ತು. ಈಗ ಬ್ರಿಟನ್ನಲ್ಲಿ ಮತ್ತೆ ಹೊಸ ತಳಿಯ ಕೊರೊನಾ ಪತ್ತೆಯಾಗಿದ್ದು, ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಬೇಕಾಗುತ್ತದೆ. ರಾಜ್ಯದಲ್ಲಿಯೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈಗಾಗಲೇ ಏರ್ಪೋರ್ಟ್ಗಳಲ್ಲಿ ಆರ್ಟಿಪಿಸಿಆರ್ ಟಿಸ್ಟಿಂಗ್ಗಳಿಗೆ ಕಡಿವಾಣ ಹಾಕಲಾಗಿದೆ. ಇನ್ನು ಮುಂದದೆ ವಿದೇಶದಿಂದ ಬರುವವರಿಗೆ ಟೆಸ್ಟಿಂಗ್ ಕಡ್ಡಾಯ ಮಾಡುವ ಸಾಧ್ಯತೆಯಿದೆ.
ಇದನ್ನೂ ಓದಿ: ಜೈಲಲ್ಲಿ ರಾಮ-ಸೀತೆಯ ಪುಸ್ತಕ ಓದುತ್ತಿರುವ ಆರ್ಯನ್ ಖಾನ್; ಜಾಮೀನು ಸಿಗದೇ ಸ್ಟಾರ್ ಪುತ್ರ ಕಂಗಾಲು
ಇದನ್ನೂ ಓದಿ: ಪ್ರೇಮ ವೈಫಲ್ಯದ ಬಗ್ಗೆ ವಿಡಿಯೋ ಮಾಡಿ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಯುವಕ!
Published On - 12:31 pm, Sun, 24 October 21