ಪ್ರೇಮ ವೈಫಲ್ಯದ ಬಗ್ಗೆ ವಿಡಿಯೋ ಮಾಡಿ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಯುವಕ!

ಮೃತ ಕಾರ್ತಿಕ್ ಕಳೆದ ಮೂರು ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದರು. ಇತ್ತೀಚಿಗೆ ಕಾರ್ತಿಕ್​ನಿಂದ ಯುವತಿ ದೂರವಾಗಿದ್ದಳು. ಯುವತಿ ನೆನಪಿನಲ್ಲಿ ಕಾರ್ತಿಕ್ ಕಾಲ ಕಳೆಯುತ್ತಿದ್ದರಂತೆ.

ಪ್ರೇಮ ವೈಫಲ್ಯದ ಬಗ್ಗೆ ವಿಡಿಯೋ ಮಾಡಿ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಯುವಕ!
ಆತ್ಮಹತ್ಯೆಗೆ ಶರಣಾದ ಕಾರ್ತಿಕ್

ಬೆಂಗಳೂರು: ರಾಜರಾಜೇಶ್ವರಿ ನಗರದ ಮರಪ್ಪ ಲೇಔಟ್​ನಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾರೆ. ನೇಣು ಬಿಗಿದುಕೊಂಡು ಕಾರ್ತಿಕ್(29) ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ನೇಣಿಗೆ ಶರಣಾದ ಯುವಕ ಜಿಮ್ ಟ್ರೈನಿಯಾಗಿದ್ದರು. ಪ್ರೇಮ ವೈಫಲ್ಯದ ಬಗ್ಗೆ ವಿಡಿಯೋ ಮಾಡಿಟ್ಟು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಕಾರ್ತಿಕ್ ಕಳೆದ ಮೂರು ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದರು. ಇತ್ತೀಚಿಗೆ ಕಾರ್ತಿಕ್​ನಿಂದ ಯುವತಿ ದೂರವಾಗಿದ್ದಳು. ಯುವತಿ ನೆನಪಿನಲ್ಲಿ ಕಾರ್ತಿಕ್ ಕಾಲ ಕಳೆಯುತ್ತಿದ್ದರಂತೆ. ಪ್ರೇಮ ವೈಫಲ್ಯ ಬಗ್ಗೆ ಆಪ್ತರ ಬಳಿ ಹೇಳಿಕೊಂಡಿದ್ದರು. ಈ ವಿಚಾರ ತಿಳಿದ ಪೋಷಕರು ಮದುವೆ ಮಾಡಲು ಮುಂದಾಗಿದ್ದರು. ಇಂದು ಕಾರ್ತಿಕ್​ಗೆ ಹೆಣ್ಣು ನೋಡುವ ಶಾಸ್ತ್ರಕ್ಕೆ ಪೋಷಕರು ಹೋಗಬೇಕಿತ್ತು. ಅದರೆ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೆಯ ಶೀಟ್ ಹ್ಯಾಂಗಲ್​ಗೆ ನೇಣು ಬಿಗಿದುಕೊಂಡು ಯುವಕ ಸಾವನ್ನಪ್ಪಿದ್ದಾರೆ. ಆತ್ಮಹತ್ಯೆಗೂ ಮುನ್ನ ಪ್ರೇಮ ವೈಫಲ್ಯ ಬಗ್ಗೆ ಕಾರ್ತಿಕ್ ವಿಡಿಯೋ ಮಾಡಿದ್ದಾರೆ. ತನ್ನ ಮೊಬೈಲ್​ನಲ್ಲಿ ವಿಡಿಯೋ ಮಾಡಿ ನಂತರ ಸಾವಿಗೆ ಶರಣಾಗಿದ್ದಾರೆ. ಸದ್ಯ ಮೊಬೈಲ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಡಿಯೋ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಾರೆ.

ಇದನ್ನೂ ಓದಿ: ಹಳೇ ದ್ವೇಷ ಹಿನ್ನೆಲೆ ಗ್ಯಾಂಗ್ ವಾರ್; ಓರ್ವನ ಕೊಲೆ, ಇಬ್ಬರ ಸ್ಥಿತಿ ಗಂಭೀರ

ಇದನ್ನೂ ಓದಿ: Viral Video: ಕ್ಯಾಮೆರಾ ಕಂಡು ಮನುಷ್ಯರಂತೆಯೇ ಪೋಸ್ ಕೊಟ್ಟ ಶ್ವಾನಗಳು; ವಿಡಿಯೋ ನೋಡಿ

Click on your DTH Provider to Add TV9 Kannada