ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿ ಮತ್ತು ಮಹತ್ವಾಕಾಂಕ್ಷೆಯ ಹಲವು ಯೋಜನೆಗಳಲ್ಲಿ ಮೇಕ್ ಇನ್ ಇಂಡಿಯಾ ಕೂಡ ಒಂದು. ಅದರಲ್ಲೂ, ಭಾರತದಲ್ಲಿ ತಮ್ಮ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದ ಕಂಪನಿಗಳನ್ನು, ಭಾರತದಲ್ಲೇ ಉತ್ಪನ್ನ ತಯಾರಿಸಿ, ಅಂತಾರಾಷ್ಟ್ರೀಯ ಮಾರುಕಟ್ಟೆಗೆ ರಫ್ತು ಮಾಡುವಂತೆ ಯೋಜನೆ ರೂಪಿಸಿ, ಅದರಲ್ಲಿ ಯಶಸ್ವಿಯಾಗುವಂತೆ ಮಾಡಿದ್ದು ಮೇಕ್ ಇನ್ ಇಂಡಿಯಾ. ಪ್ರಧಾನಿ ಮೋದಿಯವರ ಆಶಯದಂತೆ, ಸ್ಯಾಮ್ಸಂಗ್, ಆ್ಯಪಲ್ನಂತಹ ಜಾಗತಿಕ ಸಂಸ್ಥೆಗಳು, ಭಾರತದಲ್ಲೇ ತಯಾರಿಸಿ, ಇಲ್ಲಿಂದಲೇ ಉತ್ಪನ್ನಗಳನ್ನು ರಫ್ತು ಮಾಡುತ್ತಿವೆ. ಅದರಲ್ಲೂ ಆ್ಯಪಲ್ನಂತಹ ಕಂಪನಿಯೊಂದೇ, ಕಳೆದ ಎರಡು ವರ್ಷದಲ್ಲಿ 1 ಲಕ್ಷಕ್ಕೂ ಅಧಿಕ ನೇರ ಉದ್ಯೋಗಾವಕಾಶ ಕಲ್ಪಿಸಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಪ್ರಧಾನಿ ಮೋದಿಯವರ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಟ್ವೀಟ್ ಮೂಲಕ ಶ್ಲಾಘಿಸಿದ್ದಾರೆ.
Published On - 1:33 pm, Thu, 20 April 23