Global Buddhist Summit: ಭಾರತವು ಜಗತ್ತಿಗೆ ‘ಯುದ್ಧ’ವನ್ನು ನೀಡಿಲ್ಲ, ‘ಬುದ್ಧ’ನ ಆದರ್ಶಗಳನ್ನು ನೀಡಿದೆ: ಮೋದಿ
ಇಂದು ಯುದ್ಧ ಮತ್ತು ಅಶಾಂತಿಯಿಂದ ಬಳಲುತ್ತಿದೆ, ಶತಮಾನಗಳ ಹಿಂದೆ ಬುದ್ಧ ಇದಕ್ಕೆ ಪರಿಹಾರವನ್ನು ನೀಡಿದ್ದರು. ಭಾರತವು ಜಗತ್ತಿಗೆ 'ಯುದ್ಧ'ವನ್ನು ನೀಡಿಲ್ಲ, ಆದರೆ 'ಬುದ್ಧ' ಆದರ್ಶಗಳನ್ನು ನೀಡಿದೆ ಎಂದು ಹೇಳಿದರು.
ದೆಹಲಿ: ಪ್ರಧಾನಿ ಮೋದಿ (Narendra Modi) ಅವರು ಇಂದು (ಏ.20)ದೆಹಲಿಯಲ್ಲಿ ನಡೆಯುತ್ತಿರುವ ಜಾಗತಿಕ ಬೌದ್ಧ ಶೃಂಗಸಭೆಯನ್ನು (Global Buddhist Summit) ಉದ್ಘಾಟಿಸಿದರು. ಈ ಸಮಯಲ್ಲಿ ಮಾತನಾಡಿದ ಅವರು, ಗೌತಮ ಬುದ್ಧನ ಬೋಧನೆಗಳು ಶತಮಾನಗಳಿಂದ ಅಸಂಖ್ಯಾತ ಜನರ ಮೇಲೆ ಪ್ರಭಾವ ಬೀರಿವೆ. ಭಾರತ ಜಾಗತಿಕ ಅಭಿವೃದ್ಧಿಗೆ ಗೌತಮ ಬುದ್ಧ ಅವರ ತತ್ವ, ಆದರ್ಶಗಳಿಂದ ಪ್ರೇರಿತವಾಗಿದೆ ಎಂದು ಹೇಳಿದರು. ಎರಡು ದಿನಗಳ ಈ ಶೃಂಗಸಭೆಯನ್ನು ಸಂಸ್ಕೃತಿ ಸಚಿವಾಲಯವು ಅಂತರರಾಷ್ಟ್ರೀಯ ಬೌದ್ಧ ಒಕ್ಕೂಟದ (ಐಬಿಸಿ) ಸಹಯೋಗದೊಂದಿಗೆ ಏಪ್ರಿಲ್ 20 ಮತ್ತು 21 ರಂದು ಆಯೋಜಿಸಿದೆ.
ಪ್ರಧಾನಿ ಮೋದಿ ಅವರು ಭಗವಾನ್ ಬುದ್ಧನ ಸಂದೇಶಗಳನ್ನು ವಿವರಿಸುತ್ತ, ಇಂದು ಜಗತ್ತು ಯುದ್ಧ ಮತ್ತು ಅಶಾಂತಿಯಿಂದ ಬಳಲುತ್ತಿದೆ, ಶತಮಾನಗಳ ಹಿಂದೆ ಬುದ್ಧ ಇದಕ್ಕೆ ಪರಿಹಾರವನ್ನು ನೀಡಿದ್ದರು. ಭಾರತವು ಜಗತ್ತಿಗೆ ‘ಯುದ್ಧ’ವನ್ನು ನೀಡಿಲ್ಲ, ಆದರೆ ‘ಬುದ್ಧ’ ಆದರ್ಶಗಳನ್ನು ನೀಡಿದೆ ಎಂದು ಹೇಳಿದರು. ಬುದ್ಧನ ನೀಡಿದ ಹಾದಿ ಭವಿಷ್ಯದ ಮತ್ತು ಸುಸ್ಥಿರತೆಯ ಮಾರ್ಗವಾಗಿದೆ. ಮೋದಿ ಅವರು ತಮ್ಮ ಯೋಜನೆಗಳಲ್ಲಿ ಅಥವಾ ಸರ್ಕಾರಿ ಕೆಲಸಗಳಲ್ಲಿ ಭಾಗವಹಿಸುವಾಗ ಬುದ್ಧನ ಪ್ರತಿಮೆಯನ್ನೇ ಉಡುಗೊರೆಯಾಗಿ ನೀಡಿ ಎಂದು ಹೇಳಿದರು.
ನಮ್ಮ ಜನರು, ರಾಷ್ಟ್ರಗಳು ತಮ್ಮ ಹಿತಾಸಕ್ತಿಗಳ ಜೊತೆಗೆ ಜಾಗತಿಕ ಹಿತಾಸಕ್ತಿಗೆ ಆದ್ಯತೆ ನೀಡುವುದು ಅಗತ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದರು. ‘ಅತಿಥಿ ದೇವೋ ಭವ’ ಎಂಬ ಮಾತು ಬುದ್ಧನ ಈ ನೆಲದ ಸಂಪ್ರದಾಯ, ಅಂದರೆ ಅತಿಥಿಗಳು ನಮಗೆ ದೇವರಿದ್ದಂತೆ’ ಎಂದು ಹೇಳಿದರು.
The noble teachings of Gautama Buddha have impacted countless people over centuries. Inspired by the teachings of Lord Buddha, India is taking new initiatives for global welfare : PM Narendra Modi at Global Buddhist Summit, Delhi pic.twitter.com/wm8QNAB6cD
— ANI (@ANI) April 20, 2023
ಇದನ್ನೂ ಓದಿ: Watch ಯುವಕಲಾವಿದ ರಚಿಸಿದ ಬುದ್ಧನ ರೇಖಾಚಿತ್ರದ ಮೇಲೆ ಪ್ರಧಾನಿ ಮೋದಿ ವಿಶೇಷ ಆಟೋಗ್ರಾಫ್
ಆಧುನಿಕ ಜಗತ್ತಿನ ಎಲ್ಲ ಸಮಸ್ಯೆಗಳನ್ನು ಬೌದ್ಧ ಬೋಧನೆಯಿಂದ ಪರಿಹರಿಸಬಹುದು, ಬಿಕ್ಕಟ್ಟಿನಿಂದ ಪರಿಹಾರದ ಕಡೆಗೆ ಚಲಿಸುವುದು ಬುದ್ಧನ ಮಾರ್ಗವಾಗಿದೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು. ಜಾಗತಿಕ ಬೌದ್ಧ ಶೃಂಗಸಭೆಯಲ್ಲಿ ನಾಲ್ಕು ವಿಷಯಗಳ ಅಡಿಯಲ್ಲಿ ಚರ್ಚೆಗಳು ನಡೆಯಲಿವೆ ಎಂದು ಹೇಳಿದೆ. ಬುದ್ಧ ಧರ್ಮ ಮತ್ತು ಶಾಂತಿ, ಬುದ್ಧ ಧರ್ಮ: ಪರಿಸರ ಬಿಕ್ಕಟ್ಟು, ಆರೋಗ್ಯ ಮತ್ತು ಸುಸ್ಥಿರತೆ, ನಳಂದ ಬೌದ್ಧ ಸಂಪ್ರದಾಯದ ಸಂರಕ್ಷಣೆ, ಬುದ್ಧ ಧರ್ಮ ತೀರ್ಥಯಾತ್ರೆ, ದೇಶ ಪರಂಪರೆ ಮತ್ತು ಬುದ್ಧನ ಅವಶೇಷಗಳು, ಭಾರತದ ಶತಮಾನಗಳ ಮತ್ತು ಹಳೆಯ ಸಂಸ್ಕೃತಿಗೆ ಚೇತರಿಸಿಕೊಳ್ಳುವ ಅಡಿಪಾಯ, ದಕ್ಷಿಣ, ಆಗ್ನೇಯ ಮತ್ತು ಪೂರ್ವ ಏಷ್ಯಾದ ದೇಶಗಳಿಗೆ ಸಂಪರ್ಕ, ಹೀಗೆ ಹಲವು ವಿಚಾಗಳ ಬಗ್ಗೆ ಈ 2ದಿನದ ಶೃಂಗಸಭೆಯಲ್ಲಿ ಚರ್ಚೆಯಾಗಲಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:09 pm, Thu, 20 April 23