13 ಡೆಸಿಮಲ್ ಭೂಮಿಯನ್ನು ತೆರವು ಮಾಡುವಂತೆ ಅಮರ್ತ್ಯ ಸೇನ್​​ಗೆ ವಿಶ್ವ ಭಾರತಿ ವಿಶ್ವವಿದ್ಯಾನಿಲಯ ನೋಟಿಸ್

ಈ ಮೂಲಕ ಸೇನ್ ಅವರು ನಿಗದಿತ ಆವರಣದಲ್ಲಿ ಕಾನೂನು ರೀತಿಯಲ್ಲಿ 1.25 ಎಕರೆ ಭೂಮಿಯನ್ನು ಮಾತ್ರ ಲೀಸ್ ಪ್ರಕಾರ ತಮ್ಮದಾಗಿಸಿಕೊಳ್ಳಬಹುದು. ಅದೇ ಆವರಣದಲ್ಲಿ ಅವರು 1.38 ಎಕರೆ ಭೂಮಿಯನ್ನು ಸ್ವಾಧೀನ ಪಡಿಸುವ ಯಾವುದೇ ಹಕ್ಕನ್ನು ಅವರು ಹೊಂದಿಲ್ಲ ಎಂದು ಜಂಟಿ ರಿಜಿಸ್ಟಾರರ್ ಆಶಿಶ್ ಮಹತೊ ಹೇಳಿದ್ದಾರೆ.

13 ಡೆಸಿಮಲ್ ಭೂಮಿಯನ್ನು ತೆರವು ಮಾಡುವಂತೆ ಅಮರ್ತ್ಯ ಸೇನ್​​ಗೆ ವಿಶ್ವ ಭಾರತಿ ವಿಶ್ವವಿದ್ಯಾನಿಲಯ ನೋಟಿಸ್
ಅಮರ್ತ್ಯ ಸೇನ್
Follow us
ರಶ್ಮಿ ಕಲ್ಲಕಟ್ಟ
|

Updated on: Apr 20, 2023 | 12:34 PM

ಕೋಲ್ಕತ್ತಾ: ನೋಬೆಲ್ ಪ್ರಶಸ್ತಿ (Nobel laureate) ಪುರಸ್ಕೃತ ಅಮರ್ತ್ಯ ಸೇನ್ (Amartya Sen )ಅನಧಿಕೃತವಾಗಿ ತನ್ನ ಬಳಿ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿರುವ ಭೂಮಿಯಲ್ಲಿ 13 ಡೆಸಿಮಲ್ ಭೂಮಿಯನ್ನು (5,662.8 ಚದರ ಅಡಿ) ಮೇ 6 ಅಥವಾ 15 ದಿನಗಳ ಒಳಗೆ ತೆರವು ಮಾಡಬೇಕು ಎಂದು ವಿಶ್ವ ಭಾರತಿ ವಿಶ್ವವಿದ್ಯಾನಿಲಯ (Visva Bharati Univeristy) ಆದೇಶಿಸಿದೆ. ಭಾರತ ಸರ್ಕಾರದ ಸಲಹೆಗಾರರು ಮತ್ತು ಸಿಎಜಿ ವರದಿಗಳ ಪ್ರಕಾರ ಶತಮಾನದಷ್ಟು ಹಳೆಯದಾದ ಕೇಂದ್ರೀಯ ಸಂಸ್ಥೆಯು ಅತಿಕ್ರಮಣಗಳ ನಿಯಂತ್ರಣವನ್ನು ಪಡೆಯುವುದು ಮತ್ತು ಸಚಿವಾಲಯಕ್ಕೆ ವರದಿಯನ್ನು ಸಲ್ಲಿಸುವುದು ತುರ್ತು ಅಗತ್ಯವಾಗಿದೆ ಎಂದು ವಾದಿಸಿದ್ದು, ಅಮರ್ತ್ಯ ಕುಮಾರ್ ಸೇನ್ ಮತ್ತು ಎಲ್ಲಾ ಸಂಬಂಧಿತ ವ್ಯಕ್ತಿಗಳನ್ನು ಹೊರಹಾಕಲು ಹೊಣೆಗಾರರಾಗಿದ್ದಾರೆ. ಅಗತ್ಯವಿದ್ದಲ್ಲಿ ಬಲ ಪ್ರಯೋಗವನ್ನೂ ಮಾಡಲಾಗುವುದು. ನಿಗದಿತ ಆವರಣದ ವಾಯುವ್ಯ ಮೂಲೆಯಲ್ಲಿ 50 ಅಡಿ x 111 ಅಡಿ ಆಯಾಮವನ್ನು ಹೊಂದಿರುವ 13 ಡೆಸಿಮಲ್ ಭೂಮಿಯನ್ನು ಅವರಿಂದ ವಶಪಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಏಪ್ರಿಲ್ 19ರಂದು ಹೊರಡಿಸಲಾದ ಆದೇಶದಲ್ಲಿ ಹೇಳಿದೆ.

ಈ ಮೂಲಕ ಸೇನ್ ಅವರು ನಿಗದಿತ ಆವರಣದಲ್ಲಿ ಕಾನೂನು ರೀತಿಯಲ್ಲಿ 1.25 ಎಕರೆ ಭೂಮಿಯನ್ನು ಮಾತ್ರ ಲೀಸ್ ಪ್ರಕಾರ ತಮ್ಮದಾಗಿಸಿಕೊಳ್ಳಬಹುದು. ಅದೇ ಆವರಣದಲ್ಲಿ ಅವರು 1.38 ಎಕರೆ ಭೂಮಿಯನ್ನು ಸ್ವಾಧೀನ ಪಡಿಸುವ ಯಾವುದೇ ಹಕ್ಕನ್ನು ಅವರು ಹೊಂದಿಲ್ಲ ಎಂದು ಜಂಟಿ ರಿಜಿಸ್ಟಾರರ್ ಆಶಿಶ್ ಮಹತೊ ಹೇಳಿದ್ದಾರೆ.

ನೊಬೆಲ್ ಪ್ರಶಸ್ತಿ ವಿಜೇತರು ವಾಸಿಸುತ್ತಿದ್ದ ಶಾಂತಿನಿಕೇತನದಲ್ಲಿರುವ ಅವರ ಪೂರ್ವಜರ ಮನೆ ‘ಪ್ರತಿಚಿ’ಗೆ ಸಂಬಂದಿಸಿದಂತೆ ಕೆಲವು ದಿನಗಳ ಹಿಂದೆ ಕೇಂದ್ರೀಯ ವಿಶ್ವ ವಿದ್ಯಾಲಯವು ಅಮರ್ತ್ಯ ಸೇನ್ಅವರಿಗೆ ಇನ್ನೊಂದು ನೋಟಿಸ್ ನೀಡಿತ್ತು. ಈ ನೋಟಿಸ್ ಗೆ ಪ್ರತಿಕ್ರಿಯಿಸಲು ಮತ್ತು ತೆರವು ಮಾಡಲು ಏಪ್ರಿಲ್ 19 ರವರೆಗೆ ಅವರಿಗೆ ಸಮಯ ನೀಡಿತು. ಅನಧಿಕೃತ ಭೂಮಿಯಿಂದ ತೆರವು ಆಗಬೇಕು ಇಲ್ಲವೇ ಕ್ರಮ ಎದುರಿಸಬೇಕು ಎಂದು ನೋಟಿಸ್​​ನಲ್ಲಿ ಹೇಳಲಾಗಿತ್ತು.

ಈ ಹಿಂದೆ ಶೋಕಾಸ್ ನೋಟಿಸ್​ಗೆ ಸೇನ್ ಅವರು ಕಳುಹಿಸಿದ ಉತ್ತರವು ತಪ್ಪಾಗಿತ್ತು ಎಂದು ಹೇಳಿದ ವಿವಿ, ಈ ಭೂಮಿಯ ಮಾಲೀಕರು ವಿಶ್ವ ಭಾರತಿಯೇ ಆಗಿದೆ. ಇದರಲ್ಲಿ 13 ಡೆಸಿಮಲ್ ಭೂಮಿಯನ್ನು ಸೇನ್ ಅತಿಕ್ರಮಿಸಿಕೊಂಡಿದ್ದಾರೆ ಎಂದಿತ್ತು.

ಇದನ್ನೂ ಓದಿ: ಮಾನನಷ್ಟ ಪ್ರಕರಣ: ಶಿಕ್ಷೆಗೆ ತಡೆ ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಾಲಯ

ಆದರೆ ಈ ಆರೋಪವನ್ನು ಪದೇ ಪದೇ ನಿರಾಕರಿಸಿದ ಸೇನ್ ವಿಶ್ವಭಾರತಿ ತನ್ನ ಅಪ್ಪನಿಗೆ 1.25 ಎಕರೆ ಭೂಮಿಯನ್ನು ಲೀಸ್​ಗೆ ನೀಡಿದ್ದು, 13 ಡೆಸಿಮಲ್ ಭೂಮಿ ತನ್ನ ಅಪ್ಪ ಖರೀದಿಸಿದ್ದಾಗಿದೆ. ಇದನ್ನು ಸಾಬೀತು ಪಡಿಸಲು ನನ್ನಲ್ಲಿ ಅಗತ್ಯ ದಾಖಲೆಗಳಿವೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ