Ma Kamakhya Corridor: ಕಾಶಿ ವಿಶ್ವನಾಥ ದೇವಾಲಯದ ಮಾದರಿಯಲ್ಲಿ ಕಾಮಾಖ್ಯ ದೇವಾಲಯದ ಕಾರಿಡಾರ್ ನಿರ್ಮಾಣ, ಪ್ರಧಾನಿ ಮೋದಿ ಶ್ಲಾಘನೆ
ಕಾಶಿ ವಿಶ್ವನಾಥ ದೇವಾಲಯದ ಕಾರಿಡಾರ್ ಮಾದರಿಯಲ್ಲಿ ಅಸ್ಸಾಂ ಸರ್ಕಾರವು ಗುವಾಹಟಿಯ ಕಾಮಾಖ್ಯ ದೇವಾಲಯದಲ್ಲಿ ಕಾರಿಡಾರ್ ನಿರ್ಮಿಸಲು ಯೋಜಿಸುತ್ತಿದೆ ಎಂದು ಹೇಳಲಾಗಿದೆ.
ದಿಸ್ಪುರ್: ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದ ಕಾರಿಡಾರ್ (Corridor of Kashi Vishwanath Temple) ಮಾದರಿಯಲ್ಲಿ ಅಸ್ಸಾಂ ಸರ್ಕಾರವು ಗುವಾಹಟಿಯ ಕಾಮಾಖ್ಯ ದೇವಾಲಯದಲ್ಲಿ ಕಾರಿಡಾರ್ (Corridor in Kamakhya Temple) ನಿರ್ಮಿಸಲು ಯೋಜಿಸುತ್ತಿದೆ ಎಂದು ಹೇಳಲಾಗಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಂಗಳವಾರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ನಾಲ್ಕು ನಿಮಿಷಗಳ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ, ಈ ವೀಡಿಯೊದಲ್ಲಿ ಮಾ ಕಾಮಾಖ್ಯ ಕಾರಿಡಾರ್ ಮುಂದಿನ ಭವಿಷ್ಯದಲ್ಲಿ ಹೇಗೆ ಕಾಣಿಸುತ್ತದೆ ಎಂಬ ಶೀರ್ಷಿಕೆಯನ್ನು ಹಾಕಿ ಟ್ವಿಟರ್ನಲ್ಲಿ ಕಾಮಾಖ್ಯ ದೇವಾಲಯದಲ್ಲಿ ಕಾರಿಡಾರ್ ಕುರಿತು ಒಂದು ನೋಟವನ್ನು ಹಂಚಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಏ.19 (ಬುಧವಾರ) ಈ ಯೋಜನೆಯ ಹಂಚಿಕೊಂಡ ಪೋಸ್ಟ್ ಕುರಿತು ರೀ ಪೋಸ್ಟ್ ಮಾಡಿದ್ದಾರೆ. ಮಾ ಕಾಮಾಖ್ಯ ಕಾರಿಡಾರ್ ಒಂದು ಹೆಗ್ಗುರುತು. ಕಾಶಿ ವಿಶ್ವನಾಥ ಧಾಮ ಮತ್ತು ಶ್ರೀ ಮಹಾಕಾಲ್ ಮಹಾಲೋಕಗಳು, ಆಧ್ಯಾತ್ಮಿಕ ಅನುಭವವನ್ನು ನೀಡಲು ಇದು ರೂಪಾಂತರಗೊಂಡಿವೆ. ಇದರ ಜತೆಗೆ ಇದು ಪ್ರವಾಸೋದ್ಯಮಕ್ಕೂ ಒತ್ತು ನೀಡುತ್ತಿದೆ ಮತ್ತು ಸ್ಥಳೀಯ ಆರ್ಥಿಕತೆಯು ಉತ್ತೇಜನವನ್ನು ಪಡೆಯುತ್ತದೆ ಎಂದು ಹೇಳಿದ್ದಾರೆ.
ದೇವಾಲಯದ ಸುತ್ತಲಿನ ತೆರೆದ ಸ್ಥಳದಲ್ಲಿ ಈ ಕಾರಿಡಾರ್ಗಳು ನಿರ್ಮಾಣ ಮಾಡಲಾಗುವುದು ಮತ್ತು ಇದರಿಂದ 3,000 ಚದರ ಅಡಿ ಇರುವ ಈ ಕಾಮಾಖ್ಯ ದೇವಾಲಯದಲ್ಲಿ ಕಾರಿಡಾರ್ 100,000 ಚದರ ಅಡಿಗಳಿಗೆ ಹೆಚ್ಚಾಗುತ್ತದೆ, ಇದರ ಜತೆಗೆ ಇದು ಮೂರು ಹಂತಗಳಲ್ಲಿ ನಿರ್ಮಾಣವಾಗಲಿದೆ.
I am sure Maa Kamakhya corridor will be a landmark initiative.
Kashi Vishwanath Dham and Shree Mahakal Mahalok have been transformative as far as the spiritual experience is concerned. Equally important is the fact that tourism is enhanced and the local economy gets a boost. https://t.co/le8gmNrSNv
— Narendra Modi (@narendramodi) April 19, 2023
ಇದನ್ನೂ ಓದಿ: Kashi Vishwanath corridor ಕಾಶಿ ವಿಶ್ವನಾಥ ಕಾರಿಡಾರ್ ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ
ಪ್ರವೇಶ ಕಾರಿಡಾರ್‌ನ ಸರಾಸರಿ ಅಗಲವು 8-10 ಅಡಿಗಳಿಂದ ಸರಿಸುಮಾರು 27-30 ಅಡಿಗಳಿಗೆ ಹೆಚ್ಚಾಗುತ್ತದೆ. ಸಂಕೀರ್ಣದಲ್ಲಿರುವ ಆರು ಪ್ರಮುಖ ದೇವಾಲಯಗಳನ್ನು ಈಗಾಗಲೇ ಸಾರ್ವಜನಿಕ ವೀಕ್ಷಣೆಗೆ ನಿಷೇಧಿಸಲಾಗಿದೆ, ಅವುಗಳ ಮೂಲ ವೈಭವಗಳನ್ನು ಮರುಸ್ಥಾಪಿಸುತ್ತಿರುವ ಕಾರಣ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಯೋಜನೆಯು ಅಂಬುಬಾಚಿ ಮೇಳ ಮತ್ತು ಇತರ ಪ್ರಮುಖ ಉತ್ಸವಗಳ ಸಮಯದಲ್ಲಿ ಸರಿಸುಮಾರು 8,000-10,000 ಯಾತ್ರಾರ್ಥಿಗಳು ಭಾಗವಹಿಸುವಷ್ಟು ಈ ಕಾರಿಡಾರ್ ಜಾಗವನ್ನು ಸೃಷ್ಟಿ ಮಾಡುತ್ತದೆ ಎಂದು ಹೇಳಿದ್ದಾರೆ.
Published On - 11:22 am, Thu, 20 April 23