AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಳ್ಮೆಗೆಟ್ಟು ತನ್ನದೇ ಪಕ್ಷದ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಮಮತಾ ಬ್ಯಾನರ್ಜಿ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಮತಾ ಬ್ಯಾನರ್ಜಿ ಇಂದು ಕೊಲ್ಕತ್ತಾದಲ್ಲಿ ತಮ್ಮದೇ ಪಕ್ಷದ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ತಾವೇ ಆಯೋಜಿಸಿದ್ದ ಪ್ರತಿಭಟನೆಗೆ ಆಗಮಿಸಿದ್ದ ಜನರು ತಮ್ಮ ಮನೆಯ ಮುಂದೆ ಸೇರಿದ್ದಾಗ ಅವರನ್ನು ನಿಭಾಯಿಸುತ್ತಿದ್ದ ಮಮತಾ ಬ್ಯಾನರ್ಜಿ ಇದ್ದಕ್ಕಿದ್ದಂತೆ ತಾಳ್ಮೆ ಕಳೆದುಕೊಂಡಿದ್ದಾರೆ. ತಮ್ಮ ಮನೆಯ ಮುಂದೆ ಅಸ್ತವ್ಯಸ್ತ ಪರಿಸ್ಥಿತಿ ಉಂಟಾದಾಗ ಕೋಪಗೊಂಡ ಮಮತಾ ಬ್ಯಾನರ್ಜಿ ಅದನ್ನು ನಿಭಾಯಿಸಲು ಮನೆಯಿಂದ ಹೊರಗೆ ಬಂದು, ಅಲ್ಲಿದ್ದ ವ್ಯಕ್ತಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ವೈರಲ್ ಆಗಿದೆ.

ತಾಳ್ಮೆಗೆಟ್ಟು ತನ್ನದೇ ಪಕ್ಷದ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಮಮತಾ ಬ್ಯಾನರ್ಜಿ
Mamata Banerjee Image Credit source: TV9
ಸುಷ್ಮಾ ಚಕ್ರೆ
|

Updated on: Jul 08, 2026 | 8:44 PM

Share

ಕೊಲ್ಕತ್ತಾ, ಜುಲೈ 8: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಇಂದು ಕೊಲ್ಕತ್ತಾದಲ್ಲಿ ಪಕ್ಷದ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿದ್ದ ಸಂದರ್ಭದಲ್ಲಿ ತೀವ್ರ ಆಕ್ರೋಶಗೊಂಡು, ತಮ್ಮದೇ ಪಕ್ಷದ ಕಾರ್ಯಕರ್ತರೊಬ್ಬರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬರುಯಿಪುರ ಘಟನೆಯನ್ನು ಪ್ರತಿಭಟಿಸಲು ಮಮತಾ ಬ್ಯಾನರ್ಜಿ ಇಂದು ಬೀದಿಗಿಳಿದರು. ಆ ಮೆರವಣಿಗೆಯ ಸಮಯದಲ್ಲಿ ಅವರ ಮನೆಯೆದುರು ಅಸ್ತವ್ಯಸ್ತ ಪರಿಸ್ಥಿತಿ ಉಂಟಾಯಿತು. ಅಲ್ಲಿ, ಜನಸಂದಣಿಯನ್ನು ನಿಯಂತ್ರಿಸಲು ಮಮತಾ ಮೈಕ್ರೊಫೋನ್‌ನೊಂದಿಗೆ ಕೆಳಗೆ ಇಳಿದರು. ಆಗ ಅವರು ತಮ್ಮ ಮನೆಯ ಮುಂದೆ ಕಾರ್ಯಕರ್ತರನ್ನು ಚದುರಿಸುವಾಗ ಕೋಪಗೊಂಡು ಅವರಲ್ಲೊಬ್ಬನ ಕೆನ್ನೆಗೆ ಬಾರಿಸಿದ್ದಾರೆ. ಆದರೆ, ಅವರು ಅಷ್ಟು ಕೋಪಗೊಂಡಿದ್ದ ಯಾಕೆ ಎಂಬುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: ಟಿಎಂಸಿಯಲ್ಲಿ ಬಂಡಾಯ; ಫಿರ್ಹಾದ್ ಹಕೀಮ್ ಸೇರಿದಂತೆ 8 ಶಾಸಕರನ್ನು ಉಚ್ಛಾಟಿಸಿದ ಮಮತಾ ಬ್ಯಾನರ್ಜಿ

ಘಟನೆಯ ಹಿನ್ನೆಲೆಯೇನು?:

ಕೊಲ್ಕತ್ತಾದಲ್ಲಿ ಟಿಎಂಸಿ ಪಕ್ಷ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಮಮತಾ ಬ್ಯಾನರ್ಜಿ ಕೂಡ ಸಾಗುತ್ತಿದ್ದರು. ಈ ಸಂದರ್ಭದಲ್ಲಿ ಅವರ ಮನೆಯ ಸುತ್ತಲೂ ಭಾರಿ ಸಂಖ್ಯೆಯ ನಾಯಕರು, ಭದ್ರತಾ ಸಿಬ್ಬಂದಿ ಮತ್ತು ಪಕ್ಷದ ಕಾರ್ಯಕರ್ತರು ಜಮಾಯಿಸಿದ್ದರು. ಮೆರವಣಿಗೆ ಮುಂದುವರಿಯುತ್ತಿದ್ದಂತೆ, ಮಮತಾ ಬ್ಯಾನರ್ಜಿ ಅವರಿಗೆ ಹತ್ತಿರವಾಗಲು ಕಾರ್ಯಕರ್ತರು ಮುಗಿಬಿದ್ದರು. ಇದರಿಂದಾಗಿ ಅಲ್ಲಿ ತೀವ್ರ ನೂಕುನುಗ್ಗಲು ಉಂಟಾಯಿತು. ಆಗ ಕೋಪಗೊಂಡ ಮಮತಾ ಬ್ಯಾನರ್ಜಿ ತಮ್ಮದೇ ಪಕ್ಷದ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ಅನಿರೀಕ್ಷಿತ ಘಟನೆಯಿಂದಾಗಿ ಸ್ಥಳದಲ್ಲಿದ್ದ ನಾಯಕರು ಮತ್ತು ಭದ್ರತಾ ಸಿಬ್ಬಂದಿ ಕೆಲಕಾಲ ಆತಂಕಕ್ಕೊಳಗಾದರು.

ಇದನ್ನೂ ಓದಿ: ನಾನಿನ್ನೂ ಬದುಕಿದ್ದೇನೆ ಎಂಬುದು ನೆನಪಿರಲಿ; ಟಿಎಂಸಿ ಬಂಡಾಯ ನಾಯಕರಿಗೆ ಮಮತಾ ಬ್ಯಾನರ್ಜಿ ಎಚ್ಚರಿಕೆ

ವಿಡಿಯೋ ವೈರಲ್:

ಮಮತಾ ಬ್ಯಾನರ್ಜಿ ಟಿಎಂಸಿ ಕಾರ್ಯಕರ್ತನ ಕೆನ್ನೆಗೆ ಹೊಡೆಯುತ್ತಿರುವ ದೃಶ್ಯಗಳು ಅಲ್ಲಿನ ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ಘಟನೆಯನ್ನು ಬಳಸಿಕೊಂಡು ಬಿಜೆಪಿ ಸೇರಿದಂತೆ ವಿರೋಧ ಪಕ್ಷಗಳು ಮಮತಾ ಬ್ಯಾನರ್ಜಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು