ಸಿಬಿಐನಿಂದ ಸೋದರಳಿಯನ ಪತ್ನಿಯ ವಿಚಾರಣೆ; ದಿಢೀರ್ ಭೇಟಿ ನೀಡಿದ ಮಮತಾ ಬ್ಯಾನರ್ಜಿ

ಸಂಸದ, ಸಿಎಂ ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಪತ್ನಿ ರುಜಿರಾ ಬ್ಯಾನರ್ಜಿ ವಿಚಾರಣೆಗೆ ಸಿಬಿಐ ತಂಡ ಕೊಲ್ಕತ್ತಾಗೆ ಆಗಮಿಸಿದೆ. ಈ ಹಿನ್ನೆಲೆಯಲ್ಲಿ ಅವರ ಮನೆಗೆ ಮಮತಾ ಬ್ಯಾನರ್ಜಿ ಭೇಟಿ ನೀಡಿದ್ದರು ಎಂದು ತಿಳಿದುಬಂದಿದೆ.

ಸಿಬಿಐನಿಂದ ಸೋದರಳಿಯನ ಪತ್ನಿಯ ವಿಚಾರಣೆ; ದಿಢೀರ್ ಭೇಟಿ ನೀಡಿದ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Edited By:

Updated on: Feb 23, 2021 | 2:19 PM

ಕೋಲ್ಕತ್ತಾ: ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿಯ ವಿಚಾರಣೆಯನ್ನು ಸಿಬಿಐ ಕೈಗೊಳ್ಳುತ್ತಿರುವ ಬೆನ್ನಲ್ಲೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಮ್ಮ ಸೋದರಳಿಯನ ಮನೆಗೆ ಮಂಗಳವಾರ (ಫೆ.23) ದಿಢೀರ್ ಭೇಟಿ ನೀಡಿದ್ದಾರೆ. ಅಭಿಷೇಕ್ ಬ್ಯಾನರ್ಜಿ ಪತ್ನಿ ರುಜಿರಾ ಬ್ಯಾನರ್ಜಿ ವಿಚಾರಣೆಗೆ ಸಿಬಿಐ ತಂಡ ಆಗಮಿಸಿದೆ. ಈ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ತಮ್ಮ ಸೋದರಳಿಯ ಮನೆಗೆ ಭೇಟಿ ನೀಡಿದ್ದರು ಎಂದು ತಿಳಿದುಬಂದಿದೆ.

ಸಿಬಿಐ ವಿಚಾರಣೆಯ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಸಂಸದ ಅಭಿಷೇಕ್ ಬ್ಯಾನರ್ಜಿ ದೂರಿದ್ದಾರೆ. ವಿಧಾನಸಭಾ ಚುನಾವಣೆ ಸದ್ಯದಲ್ಲೇ ನಡೆಯಲಿರುವ ಕಾರಣ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಸಿಬಿಐ ತನಿಖಾ ದಳವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಟಿಎಂಸಿ ಸಂಸದ ಅರೋಪಿಸಿದ್ದಾರೆ.

ಸಿಎಂ ಮಮತಾ ಬ್ಯಾನರ್ಜಿ ಧಿಡೀರ್ ಭೇಟಿ ನೀಡಿ ತಮ್ಮ ಸೋದರಳಿಯ ಮತ್ತು ಅವರ ಕುಟುಂಬದ ಸದಸ್ಯರನ್ನು ಭೇಟಿಯಾದ ಕೆಲ ಕ್ಷಣಗಳ ನಂತರ ಸಿಬಿಐನ 7-8 ಸದಸ್ಯರ ತನಿಖಾ ತಂಡ ವಿಚಾರಣೆ ನಡೆಸಲು ಅಭಿಷೇಕ್ ಬ್ಯಾನರ್ಜಿ ಅವರ ಮನೆ ಪ್ರವೇಶಿಸಿದೆ ಎಂದು ಎನ್​​ಡಿಟಿವಿ ಜಾಲತಾಣ ವರದಿ ಮಾಡಿದೆ.

ಕಲ್ಲಿದ್ದಲು ಕಳವು ಪ್ರಕರಣದಲ್ಲಿ ಆರೋಪಿಯಾಗಿದ್ದ ಅನೂಪ್ ಮಾಂಜಿ, ರುಜಿರಾ ಬ್ಯಾನರ್ಜಿ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿರುವ ಆರೋಪ ಕೇಳಿಬಂದಿತ್ತು. ಈ ಪ್ರಕರಣದ ಬೆನ್ನುಬಿದ್ದಿರುವ ಸಿಬಿಐ ರುಜಿರಾ ಬ್ಯಾನರ್ಜಿ ವಿಚಾರಣೆ ನಡೆಸಲಿದೆ. ಸಿಬಿಐ ವಿಚಾರಣೆ ಹಿಂದೆ ರಾಜಕೀಯ ದುರುದ್ದೇಶವಿದ್ದು, ಹೆದರುವುದಿಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಸಂಸದ ಅಭಿಷೇಕ್ ಬ್ಯಾನರ್ಜಿ ಹೇಳಿಕೆ ನೀಡಿದ್ದಾರೆ.

ಮತ್ತೆ ಪತ್ತೆಯಾಯ್ತು ಕಚ್ಚಾಬಾಂಬ್
ಪಶ್ಚಿಮ ಬಂಗಾಳ ಚುನಾವಣೆ ಸಮೀಪಿಸುತ್ತಿದ್ದಂತೆ ಪದೇ ಪದೇ ಕಚ್ಚಾ ಬಾಂಬ್​ಗಳು ಪತ್ತೆಯಾಗುತ್ತಿವೆ. ಇಂದು ಭಿರ್ಭಮ್ ಜಿಲ್ಲೆಯಲ್ಲಿ 4 ಕಚ್ಚಾಬಾಂಬ್​ಗಳನ್ನು ಪೊಲೀಸರು ಪತ್ತೆಹಚ್ಚಿದ್ದು, ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ: ಸಂಸದ ಅಭಿಷೇಕ್ ಬ್ಯಾನರ್ಜಿ ಮಾನನಷ್ಟ ಮೊಕದ್ದಮೆ ಕೇಸ್​: ಅಮಿತ್ ಶಾಗೆ ಬಂಗಾಳ ವಿಶೇಷ ಕೋರ್ಟ್​ನಿಂದ ಸಮನ್ಸ್

ಚುನಾವಣೆ ಹೊಸಿಲಲ್ಲಿ ಫೀಲ್ಡ್​ಗೆ ಇಳಿದ ಸಿಬಿಐ; ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಂಬಂಧಿ ಅಭಿಷೇಕ್​ ಬ್ಯಾನರ್ಜಿಗೆ ನೋಟಿಸ್​

Published On - 2:15 pm, Tue, 23 February 21