AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣೆ ಹೊಸಿಲಲ್ಲಿ ಫೀಲ್ಡ್​ಗೆ ಇಳಿದ ಸಿಬಿಐ; ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಂಬಂಧಿ ಅಭಿಷೇಕ್​ ಬ್ಯಾನರ್ಜಿಗೆ ನೋಟಿಸ್​

ವೆಸ್ಟರ್ನ್​ ಕೋಲ್​ಫೀಲ್ಡ್​ ಲಿಮಿಟೆಡ್​ ಕಂಪನಿಯ ನಿರ್ವಹಣೆಯಡಿ ಬರುವ ಹಲವಾರು ಗಣಿಗಳಿಂದ ಹಲವು ಸಾವಿರ ಕೋಟಿ ರೂಪಾಯಿ ಮೌಲ್ಯದ ಕಲ್ಲಿದ್ದಲನ್ನು ಕಳವು ಮಾಡಿ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಚುನಾವಣೆ ಹೊಸಿಲಲ್ಲಿ ಫೀಲ್ಡ್​ಗೆ ಇಳಿದ ಸಿಬಿಐ; ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಂಬಂಧಿ ಅಭಿಷೇಕ್​ ಬ್ಯಾನರ್ಜಿಗೆ ನೋಟಿಸ್​
ಅಭಿಷೇಕ್​ ಬ್ಯಾನರ್ಜಿ
Lakshmi Hegde
|

Updated on: Feb 21, 2021 | 4:36 PM

Share

ಕೋಲ್ಕತ್ತ: ಪಶ್ಚಿಮ ಬಂಗಾಳದ ಚುನಾವಣೆ (west bengal assembly election 2021) ಗೆ ಒಂದೆರಡು ತಿಂಗಳಷ್ಟೇ ಬಾಕಿ ಇರುವಾಗ ಸಿಎಂ ಮಮತಾ ಬ್ಯಾನರ್ಜಿ ಅಳಿಯ ಅಭಿಷೇಕ್​ ಬ್ಯಾನರ್ಜಿಯವರಿಗೆ ಕಲ್ಲಿದ್ದಲು ಸ್ಮಗ್ಲಿಂಗ್​ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ (CBI) ನೋಟಿಸ್​ ನೀಡಿದ್ದು, ಕೂಡಲೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಅವರ ಪತ್ನಿಗೂ ಸಹ ಸಮನ್ಸ್ ನೀಡಲಾಗಿದೆ. ಅಲ್ಲದೆ, ಸಿಬಿಐ ಅಧಿಕಾರಿಗಳು ದಕ್ಷಿಣ ಕೋಲ್ಕತ್ತದಲ್ಲಿರುವ ಅಭಿಷೇಕ್​ ಬ್ಯಾನರ್ಜಿಯವರ ಮನೆಗೇ ಹೋಗಿ ನೋಟಿಸ್​ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಕಲ್ಲಿದ್ದಲು ಸ್ಮಗ್ಲಿಂಗ್ ಪ್ರಕರಣದ ತನಿಖೆ ಕಳೆದ ವರ್ಷ ಸೆಪ್ಟೆಂಬರ್​ನಿಂದ ಶುರುವಾಗಿದೆ.

ವೆಸ್ಟರ್ನ್​ ಕೋಲ್​ಫೀಲ್ಡ್​ ಲಿಮಿಟೆಡ್​ ಕಂಪನಿಯ ನಿರ್ವಹಣೆಯಡಿ ಬರುವ ಹಲವಾರು ಗಣಿಗಳಿಂದ ಹಲವು ಸಾವಿರ ಕೋಟಿ ರೂಪಾಯಿ ಮೌಲ್ಯದ ಕಲ್ಲಿದ್ದಲನ್ನು ಕಳವು ಮಾಡಿ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣದಡಿ ಸಿಬಿಐ ಡಿಸೆಂಬರ್ 31ರಂದು ತೃಣಮೂಲ ಕಾಂಗ್ರೆಸ್ ಯುವ ನಾಯಕ ವಿನಯ್ ಮಿಶ್ರಾ ಮತ್ತು ಉದ್ಯಮಿಗಳಾದ ಅಮಿತ್ ಸಿಂಗ್​, ನೀರಜ್​ ಸಿಂಗ್​ ನಿವಾಸದ ಮೇಲೆ ದಾಳಿ ನಡೆಸಿತ್ತು. ನೋಟಿಸ್​ ಕೂಡ ನೀಡಿತ್ತು. ಅಲ್ಲದೆ, ಡಿಸೆಂಬರ್ ಪ್ರಾರಂಭದಲ್ಲಿ ಕೋಲ್ಕತ್ತ ಮೂಲದ ಚಾರ್ಟರ್ಡ್​ ಅಕೌಂಟೆಂಟ್​ ಗಣೇಶ್​ ಬಗೇರಿಯಾ ಮನೆ ಹಾಗೂ ಕಚೇರಿಯ ಮೇಲೆ ಕೂಡ ಸಿಬಿಐ ದಾಳಿಯಾಗಿತ್ತು. ಈ ದಂಧೆಯಲ್ಲಿ ಟಿಎಂಸಿ ಯುವ ಮುಖಂಡ, ಸಿಎಂ ಮಮತಾ ಬ್ಯಾನರ್ಜಿಯವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಪಾತ್ರವೂ ಇದೆ. ಅವರೂ ಸಹ ತುಂಬ ಲಾಭ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿತ್ತು.

ಅಮಿತ್​ ಶಾಗೆ ಸಮನ್ಸ್​​ ಹೋದ ಒಂದೇ ದಿನದಲ್ಲಿ ನೋಟಿಸ್​! ಈ ಅಕ್ರಮ ಕಲ್ಲಿದ್ದಲು ಮಾರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ಕಳೆದ ಎರಡು ದಿನಗಳ ಹಿಂದೆ 5 ಜಿಲ್ಲೆಗಳ 13 ಪ್ರದೇಶಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿತ್ತು. ಇದೀಗ ಅಭಿಷೇಕ್​ ಬ್ಯಾನರ್ಜಿಯವರಿಗೆ ನೋಟಿಸ್ ನೀಡಿದೆ. 2018ರ ಆಗಸ್ಟ್​ನಲ್ಲಿ ಕೋಲ್ಕತ್ತದಲ್ಲಿರ‍್ಯಾಲಿಯಲ್ಲಿ ಅಮಿತ್ ಶಾ ಭಾಷಣ ಮಾಡಿದ ವೇಳೆ ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಿದ್ದಾರೆ ಎಂದು ಅಭಿಷೇಕ್​ ಬ್ಯಾನರ್ಜಿಯವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಗೆ ಸಂಬಂಧಪಟ್ಟಂತೆ ಫೆ.22ರ ಬೆಳಗ್ಗೆ 10ಗಂಟೆಗೆ ವೈಯಕ್ತಿಕವಾಗಿಯಾದರೂ ಅಥವಾ ವಕೀಲರ ಮೂಲಕವಾದರೂ ಹಾಜರಾಗಬೇಕು ಎಂದು ನಿನ್ನೆ (ಫೆ.20)ರಂದು ಪಶ್ಚಿಮಬಂಗಾಳದ ನಿಯೋಜಿತ ಸಂಸದ/ಶಾಸಕರ ನ್ಯಾಯಾಲಯ ಅಮಿತ್​ ಶಾ ಅವರಿಗೆ ಸಮನ್ಸ್​ ನೀಡಿದೆ. ಅದಾದ ಒಂದೇ ದಿನದಲ್ಲಿ ಅಭಿಷೇಕ್​ ಬ್ಯಾನರ್ಜಿಯವರಿಗೆ ಸಿಬಿಐ ನೋಟಿಸ್​ ನೀಡಿದೆ.

ಮಮತಾ ಬ್ಯಾನರ್ಜಿಯವರು ಕೇಂದ್ರ ಸರ್ಕಾರದ ವಿರುದ್ಧ ಸದಾ ಇದೇ ವಿಚಾರಕ್ಕೆ ವಾಗ್ದಾಳಿ ನಡೆಸುತ್ತಿರುತ್ತಾರೆ. ಯಾವುದೇ ಚುನಾವಣೆ ಬರಲಿ, ಬಿಜೆಪಿ ಕೇಂದ್ರ ಸರ್ಕಾರ ತನಿಖಾ ದಳಗಳಿಂದ ದಾಳಿ ಮಾಡಿಸುತ್ತದೆ. ಈ ಮೂಲಕ ಚುನಾವಣೆ ಗೆಲ್ಲಲು ನೋಡುತ್ತದೆ ಎಂದು ಹಿಂದೆಯೂ ಅನೇಕ ಬಾರಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಸಚಿವ ಜಕೀರ್ ಹುಸೇನ್ ಮೇಲೆ ಕಚ್ಚಾ ಬಾಂಬ್ ದಾಳಿಗೆ ರಾಜಕೀಯ ವೈಷಮ್ಯವೇ ಕಾರಣ: ರೈಲ್ವೆ ಅಧಿಕಾರಿ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!