Mamata Banerjee: ದೀದಿ ಸವಾಲ್; ಬಿಜೆಪಿಯ ಆಸರೆ ಸುವೇಂದು ಅಧಿಕಾರಿ ಕ್ಷೇತ್ರದಲ್ಲಿಯೇ ಮಮತಾ ಬ್ಯಾನರ್ಜಿ ಸ್ಪರ್ಧೆ

‘ನಂದಿಗ್ರಾಮ ನನ್ನ ಅದೃಷ್ಟದ ಕ್ಷೇತ್ರ ಎಂದು ಅಂತರಾತ್ಮ ಹೇಳುತ್ತಿದೆ. 2016 ಚುನಾವಣೆಯಲ್ಲಿ ಇಲ್ಲಿಂದಲೇ ಯುದ್ಧ ಶಂಖ ಊದಿದ್ದೆ. ಈ ಬಾರಿಯೂ ಹಾಗೆಯೇ ಮಾಡಿದ್ದೇನೆ’ ಎಂದು ಮಮತಾ ಹೇಳಿದ್ದಾರೆ.

Mamata Banerjee: ದೀದಿ ಸವಾಲ್; ಬಿಜೆಪಿಯ ಆಸರೆ ಸುವೇಂದು ಅಧಿಕಾರಿ ಕ್ಷೇತ್ರದಲ್ಲಿಯೇ ಮಮತಾ ಬ್ಯಾನರ್ಜಿ ಸ್ಪರ್ಧೆ
ಯಾರಿಗೆ ಟಿಕೆಟ್ ನೀಡಿದೆ ಟಿಎಂಸಿ?
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Feb 18, 2021 | 5:16 PM

ಕೊಲ್ಕತ್ತಾ: ಬಿಜೆಪಿ-ಟಿಎಂಸಿ ನಡುವೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿತ್ತು. ನಂದಿಗ್ರಾಮ ಒಂದೇ ಕ್ಷೇತ್ರದಿಂದ ಸ್ಪರ್ಧಿಸಿ, ನಿಮ್ಮ ಶಕ್ತಿ ತೋರಿಸಿ ಎಂದು ಬಿಜೆಪಿ ಸವಾಲು ಹಾಕಿತ್ತು. ಇದೀಗ ಈ ಸವಾಲು ಒಪ್ಪಿಕೊಂಡಿರುವ ಮಮತಾ ನಂದಿಗ್ರಾಮ ಒಂದರಿಂದಲೇ ಸ್ಪರ್ಧಿಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ನಂದಿಗ್ರಾಮದಲ್ಲಿ ಜನವರಿ 18ರಂದು ನಡೆದಿದ್ದ ರ‍್ಯಾಲಿಯಲ್ಲಿ ಮಾತನಾಡಿದ್ದ ಮಮತಾ ಬ್ಯಾನರ್ಜಿ ಪೂರ್ವ ಮಿಡ್ನಾಪುರ ಜಿಲ್ಲೆಯಿಂದ 2021ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು. ಅವರ ಹೇಳಿಕೆ ಆಧರಿಸಿ ಹಲವು ಲೆಕ್ಕಾಚಾರಗಳೂ ಚಾಲ್ತಿಗೆ ಬಂದಿದ್ದವು. ಈ ಹಿಂದಿನ ಚುನಾವಣೆಗಳಲ್ಲಿ ಮಮತಾ, ಕೊಲ್ಕತ್ತಾದ ಭಬನಿಪುರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದರು.

‘ನಾನು ನಂದಿಗ್ರಾಮದಲ್ಲಿ ಸ್ಪರ್ಧಿಸಿದರೆ ಹೇಗಿರುತ್ತೆ? ಅದು ನನ್ನ ಆಸೆಯಾಗಿದೆ. ಚುನಾವಣೆ ವೇಳೆ ನನಗೆ ನಂದಿಗ್ರಾಮಕ್ಕೆ ಹೆಚ್ಚು ಸಮಯ ನೀಡಲು ಆಗುವುದಿಲ್ಲ. ಯಾಕಂದ್ರೆ ರಾಜ್ಯದ ಉಳಿದ 294 ಕ್ಷೇತ್ರಗಳಲ್ಲಿಯೂ ನಾನೇ ಸ್ಪರ್ಧಿಸಿರುತ್ತೇನೆ. ಹೀಗಾಗಿ ನೀವು ಎಲ್ಲಾ ಕೆಲಸ ಮಾಡಿಕೊಡಬೇಕು. ಚುನಾವಣೆ ಮುಗಿದ ನಂತರ ನಾನು ನಿಮ್ಮ ಕೆಲಸಗಳನ್ನು ಮಾಡಿಕೊಡುತ್ತೇನೆ. ಸುಬ್ರತಾ ಬಕ್ಷಿ (ಬಂಗಾಳದ ಟಿಎಂಸಿ ಮುಖ್ಯಸ್ಥ) ನನಗೆ ನಂದಿಗ್ರಾಮದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು’ ಎಂದು ಹೇಳಿಕೆ ನೀಡಿದ್ದ ಮಮತಾ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.

ನಂದಿಗ್ರಾಮ ಸಮಾವೇಶದಲ್ಲಿ ಜನರು ಖುಷಿಯಲ್ಲಿ ಘೋಷಣೆಗಳನ್ನು ಕೂಗಿದ್ದರು. ಮಮತಾ ನಂದಿಗ್ರಾಮದಿಂದ ಮಾತ್ರವೇ ಸ್ಪರ್ಧಿಸುತ್ತಾರೋ ಅಥವಾ ಭಬನಿಪುರದಿಂದಲೂ ನಾಮಪತ್ರ ಸಲ್ಲಿಸುತ್ತಾರೋ ಎಂಬ ಬಗ್ಗೆ ಗೊಂದಲಗಳು ಆರಂಭವಾಗಿದ್ದವು. ‘ಬಭನಿಪುರವು ನನ್ನ ದೊಡ್ಡಕ್ಕನಿದ್ದಂತೆ, ನಂದಿಗ್ರಾಮವು ಚಿಕ್ಕ ಅಕ್ಕನಂತೆ. ನನಗೆ ಇಬ್ಬರೂ ಬೇಕು. ಆದರೂ ನಂದಿಗ್ರಾಮದಲ್ಲಿ ಸ್ಪರ್ಧಿಸಬೇಕು ಎನ್ನಿಸುತ್ತಿದೆ. ಬಭನಿಪುರಕ್ಕೆ ಉತ್ತಮ ಅಭ್ಯರ್ಥಿಯನ್ನು ಕೊಡುತ್ತೇನೆ’ ಎಂದು ಮಮತಾ ಘೋಷಿಸಿದ್ದರು.

ತಿಂಗಳ ಹಿಂದೆ ಮಮತಾ ಬ್ಯಾನರ್ಜಿ ಮಾಡಿದ್ದ ಘೋಷಣೆಗೆ ಸಂಬಂಧಿಸಿದಂತೆ ಇದೀಗ ಕೆಲ ಬೆಳವಣಿಗೆಗಳು ನಡೆದಿವೆ. ಇಂಡಿಯಾ ಟುಡೇ ಪ್ರತಿನಿಧಿಯೊಂದಿಗೆ ಮಾತನಾಡಿರುವ ಮುಖ್ಯಮಂತ್ರಿಯ ಆಪ್ತವಲಯದಲ್ಲಿರುವ ಪ್ರಮುಖರೊಬ್ಬರು, ‘ಮಮತಾ ಬ್ಯಾನರ್ಜಿ ನಂದಿಗ್ರಾಮ ಕ್ಷೇತ್ರವೊಂದರಿಂದಲೇ ಸ್ಪರ್ಧಿಸುತ್ತಾರೆ’ ಎಂದು ಖಚಿತಪಡಿಸಿದ್ದಾರೆ.

2011ರ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಮೊದಲ ಬಾರಿಗೆ ಬಭನಿಪುರ ಕ್ಷೇತ್ರದಿಂದ ಸ್ಪರ್ಧಿಸಿ, 54,213 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಬಭನಿಪುರದ ಶಾಸಕರಾಗಿದ್ದ ಟಿಎಂಸಿ ರಾಜ್ಯ ಘಟಕದ ಅಧ್ಯಕ್ಷ ಸುಬ್ರತಾ ಬಕ್ಷಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಮಮತಾ ಸ್ಪರ್ಧಿಸಲು ಅನುವು ಮಾಡಿಕೊಟ್ಟಿದ್ದರು. 2016ರಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಮತಾ, ಚಲಾವಣೆಯಾಗಿದ್ದ ಒಟ್ಟು ಮತಗಳ ಪೈಕಿ ಶೇ 47.67ರಷ್ಟು ಮತಗಳನ್ನು ತಮ್ಮದಾಗಿಸಿಕೊಂಡಿದ್ದರು.

ಮಮತಾರ ನಂಬಿಕಸ್ಥ ಅನುಯಾಯಿ ಸುವೇಂದು ಅಧಿಕಾರಿ ಕಳೆದ ಡಿಸೆಂಬರ್​ನಲ್ಲಿ ಟಿಎಂಸಿ ಬಿಟ್ಟು ಬಿಜೆಪಿ ಸೇರಿಕೊಂಡರು. ಇದನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಮಮತಾ, ಇದೀಗ ನೇರವಾಗಿ ಬಿಜೆಪಿಯ ಮನೆಯಲ್ಲಿಯೇ ಚುನಾವಣಾ ಕಣವನ್ನು ಗೆಲ್ಲುವ ತವಕದಲ್ಲಿದ್ದಾರೆ. ಒಂದು ವೇಳೆ ಮಮತಾ ನಂದಿಗ್ರಾಮದಿಂದ ಸ್ಪರ್ಧಿಸಿದರೆ, ಅವರಿಗೆ ಎದುರಾಗಿ ಸುವೇಂದು ಅಧಿಕಾರಿಯನ್ನು ಕಣಕ್ಕಿಳಿಸಲು ಬಿಜೆಪಿಯೂ ಗಂಭೀರ ಚಿಂತನೆ ನಡೆಸಿದೆ.

‘ನಂದಿಗ್ರಾಮ ನನ್ನ ಅದೃಷ್ಟದ ಕ್ಷೇತ್ರ ಎಂದು ಅಂತರಾತ್ಮ ಹೇಳುತ್ತಿದೆ. 2016 ಚುನಾವಣೆಯಲ್ಲಿ ಇಲ್ಲಿಂದಲೇ ಯುದ್ಧ ಶಂಖ ಊದಿದ್ದೆ. ಈ ಬಾರಿಯೂ ಹಾಗೆಯೇ ಮಾಡಿದ್ದೇನೆ’ ಎಂದು ಮಮತಾ ಹೇಳಿದ್ದಾರೆ.

ಇದನ್ನೂ ಓದಿ: ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಶೇ 33 ಮೀಸಲಾತಿ: ಪಶ್ಚಿಮ ಬಂಗಾಳ ರ‍್ಯಾಲಿಯಲ್ಲಿ ಅಮಿತ್ ಶಾ

ಇದನ್ನೂ ಓದಿ: ಮಿಥುನ್​ ಚಕ್ರವರ್ತಿಯವರನ್ನು ಭೇಟಿಯಾದ ಮೋಹನ್ ಭಾಗವತ್​; ರಾಜಕೀಯ ವಲಯದಲ್ಲಿ ಕುತೂಹಲ

Published On - 5:11 pm, Thu, 18 February 21

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ