AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಸದ ಅಭಿಷೇಕ್ ಬ್ಯಾನರ್ಜಿ ಮಾನನಷ್ಟ ಮೊಕದ್ದಮೆ ಕೇಸ್​: ಅಮಿತ್ ಶಾಗೆ ಬಂಗಾಳ ವಿಶೇಷ ಕೋರ್ಟ್​ನಿಂದ ಸಮನ್ಸ್

ಟಿಎಂಸಿ ಸಂಸದ ಅಭೀಷೇಕ್ ಬ್ಯಾನರ್ಜಿ ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ಕೇಂದ್ರ ಸಚಿವ ಅಮಿತ್ ಶಾಗೆ ಸಮನ್ಸ್ ಜಾರಿಗೊಳಿಸಿದೆ.

ಸಂಸದ ಅಭಿಷೇಕ್ ಬ್ಯಾನರ್ಜಿ ಮಾನನಷ್ಟ ಮೊಕದ್ದಮೆ ಕೇಸ್​: ಅಮಿತ್ ಶಾಗೆ ಬಂಗಾಳ ವಿಶೇಷ ಕೋರ್ಟ್​ನಿಂದ ಸಮನ್ಸ್
ಕೇಂದ್ರ ಗೃಹ ಸಚಿವ ಅಮಿತ್ ಶಾ
Follow us
TV9 Web
| Updated By: ganapathi bhat

Updated on:Apr 06, 2022 | 7:52 PM

ಕೋಲ್ಕತ್ತಾ: ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್ ಶಾ (Amit Sha), ಖುದ್ದು ಅಥವಾ ಪ್ರತಿನಿಧಿಯ ಮೂಲಕ ಕೋರ್ಟ್​ಗೆ ಹಾಜರಾಗಬೇಕು ಎಂದು ಪಶ್ಚಿಮ ಬಂಗಾಳದ ಲೋಕಸಭಾ ಸದಸ್ಯರ ಹಾಗೂ ಶಾಸಕರ ವಿಶೇಷ ನ್ಯಾಯಾಲಯ (West Bengal Court Summons) ಸಮನ್ಸ್ ನೀಡಿದೆ. ಫೆಬ್ರವರಿ 22ರಂದು ಅಮಿತ್ ಶಾ ಕೋರ್ಟ್ ಮುಂದೆ ಬರಬೇಕು ಎಂದು ನ್ಯಾಯಾಲಯ ತಿಳಿಸಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ (TMC) ನಾಯಕ, ಲೋಕಸಭಾ ಸದಸ್ಯ ಅಭಿಷೇಕ್ ಬ್ಯಾನರ್ಜಿ ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ಈ ಕ್ರಮ ಕೈಗೊಂಡಿದೆ.

ಆಗಸ್ಟ್ 28, 2018ರಂದು ಅಮಿತ್ ಶಾ ವಿರುದ್ಧ ಅಭಿಷೇಕ್ ಬ್ಯಾನರ್ಜಿ, ಸೆಕ್ಷನ್ 500ರ ಅಡಿಯಲ್ಲಿ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ಅದರಂತೆ ಅಮಿತ್ ಶಾ ಖುದ್ದಾಗಿ ಅಥವಾ ಅವರ ಪರವಾಗಿ ಪ್ರತಿನಿಧಿಯೊಬ್ಬರು ಫೆಬ್ರವರಿ 22, ಬೆಳಗ್ಗೆ 10 ಗಂಟೆಗೆ ನ್ಯಾಯಾಲಯದ ಮುಂದೆ ಹಾಜರಿರಬೇಕು ಎಂದು ತಿಳಿಸಲಾಗಿದೆ.

ಅಮಿತ್ ಶಾ ಮೇಲಿರುವ ಆರೋಪವೇನು? ಆಗಸ್ಟ್ 11, 2018ರಂದು ಬಿಜೆಪಿ ಆಯೋಜಿಸಿದ್ದ ‘ಯುವ ಸ್ವಾಭಿಮಾನ್ ಸಮಾವೇಶ’ ಉದ್ದೇಶಿಸಿ ಅಮಿತ್ ಶಾ ಮಾತನಾಡಿದ್ದರು. ಕೋಲ್ಕತ್ತಾದ ಮಾಯೋ ರಸ್ತೆಯಲ್ಲಿ ಮಾತನಾಡಿದ್ದ ಶಾ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದಿಂದಾಗಿ ಕೇಂದ್ರದ ನಿಧಿಯಿಂದ ವಿತರಿಸಲಾದ ಹಣವು ಪಶ್ಚಿಮ ಬಂಗಾಳದ ಜನರನ್ನು ತಲುಪಿಲ್ಲ ಎಂದು ಟಿಎಂಸಿ ವಿರುದ್ಧ ಆರೋಪ ಹೊರಿಸಿದ್ದರು.

‘ಬಂಗಾಳದ ಜನರೇ, ಪ್ರಧಾನಿ ನರೇಂದ್ರ ಮೋದಿ ಕಳಿಸಿರುವ ಹಣ ನಿಮ್ಮನ್ನು ತಲುಪಿದೆಯೇ? 3,59,000 ಕೋಟಿ ಎಲ್ಲಿಗೆ ಹೋಯಿತು? ಈ ಹಣದಿಂದ ತೃಣಮೂಲ ಕಾಂಗ್ರೆಸ್ ಭ್ರಷ್ಟಾಚಾರ ಮಾಡಿದೆ’ ಎಂದು ಶಾ ಹೇಳಿದ್ದರು.

ಇದಕ್ಕೆ ಪ್ರತಿಯಾಗಿ ಟಿಎಂಸಿ ಲೋಕಸಭಾ ಸದಸ್ಯ ಅಭಿಷೇಕ್ ಬ್ಯಾನರ್ಜಿ ಆಗಸ್ಟ್ 13ರಂದು ಅಮಿತ್ ಶಾಗೆ ಕಾನೂನು ನೋಟೀಸ್ ಕಳಿಸಿದ್ದರು. ಮಾನಹಾನಿ ಹೇಳಿಕೆ ನೀಡಿದ್ದಕ್ಕೆ ಕ್ಷಮೆ ಕೇಳಬೇಕು ಎಂದು ಹೇಳಿದ್ದರು. ಬಳಿಕ, ಅಭಿಷೇಕ್ ಬ್ಯಾನರ್ಜಿ ಅಮಿತ್ ಶಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಮುಂಬರುವ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ನಡೆಯಲಿದೆ. ಬಿಜೆಪಿ ಹಾಗೂ ಟಿಎಂಸಿ ನಡುವೆ ನೇರ ಜಿದ್ದಾಜಿದ್ದಿ ಏರ್ಪಟ್ಟಿರುವುದು ಈಗಾಗಲೇ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಮಿತ್ ಶಾ ಸಹಿತ ಇತರ ಬಿಜೆಪಿ ನಾಯಕರು ಬಂಗಾಳಕ್ಕೆ ಭೇಟಿ ನೀಡುತ್ತಿದ್ದಾರೆ. ನಿನ್ನೆ ಹಾಗೂ ಮೊನ್ನೆ (ಫೆ. 18, 19) ಎರಡು ದಿನಗಳ ಕಾಲ ಶಾ ಬಂಗಾಳ ಪ್ರವಾಸದಲ್ಲಿದ್ದರು. ಬಿರುಸಿನ ಪ್ರಚಾರದಲ್ಲಿ ತೊಡಗಿದ್ದರು. ಈ ಎಲ್ಲಾ ಘಟನೆಗಳ ಬೆನ್ನಲ್ಲಿ ಅಮಿತ್ ಶಾಗೆ ಕೋರ್ಟ್ ಸಮನ್ಸ್ ಜಾರಿಗೊಳಿಸಿರುವುದು ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕಾದುನೋಡಬೇಕಿದೆ.

ಇದನ್ನೂ ಓದಿ: ದಿಶಾ ರವಿ ಬಂಧಿಸಿದ್ದು ಸರಿ: ದೆಹಲಿ ಪೊಲೀಸರನ್ನು ಸಮರ್ಥಿಸಿಕೊಂಡ ಅಮಿತ್ ಶಾ

ರಾಜಕೀಯ ವಿಶ್ಲೇಷಣೆ | ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ; ಯಾರಿಗೆ ಹೂವು? ಯಾರಿಗೆ ಮುಳ್ಳು?

Published On - 11:32 am, Sat, 20 February 21

ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ
ಲೋಕಕ್ಕೆ ಜಲ ವಾಯು ಗಂಡಾಂತರ, ಯುದ್ಧ ಭೀತಿ: ಕೋಡಿ ಶ್ರೀ ಸ್ಫೋಟಕ ಭವಿಷ್ಯ
ಲೋಕಕ್ಕೆ ಜಲ ವಾಯು ಗಂಡಾಂತರ, ಯುದ್ಧ ಭೀತಿ: ಕೋಡಿ ಶ್ರೀ ಸ್ಫೋಟಕ ಭವಿಷ್ಯ
ದಕ್ಷಿಣದ ನಳಂದ ವಿಶ್ವವಿದ್ಯಾಲಯ ಸ್ಥಾಪಿಸಲು ಒಂದೆಕರೆ ಜಮೀನು ನೀಡುವೆ: ಸುರೇಶ್
ದಕ್ಷಿಣದ ನಳಂದ ವಿಶ್ವವಿದ್ಯಾಲಯ ಸ್ಥಾಪಿಸಲು ಒಂದೆಕರೆ ಜಮೀನು ನೀಡುವೆ: ಸುರೇಶ್
ತಾಳಿ ಕಟ್ಟುವಾಗ ಮದುವೆ ಬೇಡವೆಂದ್ಲು, ಅದೇ ದಿನ ಪ್ರಿಯಕರನ ವಿವಾಹವಾದ್ಲು!
ತಾಳಿ ಕಟ್ಟುವಾಗ ಮದುವೆ ಬೇಡವೆಂದ್ಲು, ಅದೇ ದಿನ ಪ್ರಿಯಕರನ ವಿವಾಹವಾದ್ಲು!
IPL 2025: ಇದೇ ಕಾರಣಕ್ಕೆ ಟಿಮ್​ ಡೇವಿಡ್​ಗೆ ರನ್ನರ್ ನೀಡಲಾಗಿಲ್ಲ..!
IPL 2025: ಇದೇ ಕಾರಣಕ್ಕೆ ಟಿಮ್​ ಡೇವಿಡ್​ಗೆ ರನ್ನರ್ ನೀಡಲಾಗಿಲ್ಲ..!
Daily Devotional: ಕುಟುಂಬ ಕಲಹಕ್ಕೆ ಈ ಮಂತ್ರವೇ ಪರಿಹಾರ
Daily Devotional: ಕುಟುಂಬ ಕಲಹಕ್ಕೆ ಈ ಮಂತ್ರವೇ ಪರಿಹಾರ