Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು

Kannada News Today: ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.

Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು
ಮಂಗಳಯಾನವನ್ನು ಯಶಸ್ವಿಯಾಗಿಸಿದ ನಾಸಾ ವಿಜ್ಞಾನಿಗಳ ತಂಡದಲ್ಲಿದ್ದ ಭಾರತೀಯ ಮೂಲದ ಸದಸ್ಯೆ ಡಾ. ಸ್ವಾತಿ ಮೋಹನ್.
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: ಸಾಧು ಶ್ರೀನಾಥ್​

Updated on:Feb 24, 2021 | 3:51 PM

ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ / ಬೆಳವಣಿಗೆಗಳ ಮಾಹಿತಿ ಇಲ್ಲಿದೆ. ದೇಶ-ವಿದೇಶಗಳಿಂದ ನಾಲ್ಕು ದಿಕ್ಕಿನಿಂದ ಸಾವಿರಾರು ಸುದ್ದಿ ಹರಿದಾಡುತ್ತಿರುತ್ತವೆ. ಕ್ಷಣಾರ್ಧದಲ್ಲಿ ಬಹುತೇಕ ಸುದ್ದಿಗಳನ್ನು ನಿಮಗೆ ತಲುಪಿಸುವ ಕಾರ್ಯ ಟಿವಿ9 ವೆಬ್​ಸೈಟ್​​ ಮಾಡುತ್ತಿದೆ. ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.

1) ಐಪಿಎಲ್​ 2021: ಯಾವ ತಂಡಕ್ಕೆ ಯಾವ ಆಟಗಾರ? ಆರ್​ಸಿಬಿ, ಸಿಎಸ್​ಕೆ, ಕೆಕೆಆರ್, ಡಿಸಿ ಸೇರಿದಂತೆ ದೇಶದ ಎಲ್ಲ ಐಪಿಎಲ್ ತಂಡಗಳು ಯಾವೆಲ್ಲಾ ತಂಡಗಳನ್ನು ಆರಿಸಿಕೊಂಡಿವೆ ಎಂಬ ಮಾಹಿತಿಯ ಜೊತೆಗೆ ಪ್ರಮುಖ ಆಟಗಾರರ ಪರಿಚಯ ಇಲ್ಲಿದೆ. Link: IPL 2021 Auction: ಯಾವ್ಯಾವ ತಂಡಕ್ಕೆ ಯಾವ್ಯಾವ ಆಟಗಾರರು?

2) ಮೈಕ್ ಆನ್ ಇದೆಯೇ? ಆನ್​ಲೈನ್​ ಮೀಟಿಂಗ್ ನಡೆಯುವಾಗ ಅಥವಾ ಮುಗಿದ ನಂತರವೂ ನಿಮ್ಮ ಮೈಕ್​ ಆನ್​ ಇದೆಯೇ? ಸರಿಯಾಗಿ ಚೆಕ್ ಮಾಡಿಕೊಳ್ಳಿ. ಇಲ್ಲದಿದ್ದರೆ ನೀವೂ #ShwetaYourMicisOn ಥರ ಟ್ರೋಲ್ ಆಗ್ತೀರಿ. Link: ಯಾರೀ ಶ್ವೇತಾ? ಆಕೆ ಟ್ರೋಲ್ ಆಗಿದ್ದು ಯಾಕೆ?

3) ಮೌನ ಈಗ ಆಭರಣ ಅಲ್ಲ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಮತ್ತು ಅಕ್ಷಯ್ ಕುಮಾರ್ ಇಂಧನ ಏರಿಕೆ ಬಗ್ಗೆ ಮೌನ ವಹಿಸಿದ್ದೇಕೆ ಎಂದು ಪ್ರಶ್ನಿಸಿರುವ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು, ಈ ನಟರ ಸಿನಿಮಾಗಳು ತೆರೆ ಕಾಣಲು ಬಿಡುವುದಿಲ್ಲ ಎಂದಿದ್ದಾರೆ. Link: ಸ್ಟಾರ್​ಗಳು ಮಾತನಾಡಿದರೆ ಮಾತ್ರವಲ್ಲ, ಮೌನವಾಗಿದ್ದರೂ ಸುದ್ದಿಯಾಗುತ್ತೆ

4) ರಾಕೇಶ್​ ಟಿಕಾಯತ್​ರ ಈ ಹೇಳಿಕೆ ದೇಶದ ಆಹಾರ ಭದ್ರತೆಗೇ ಕಂಟಕ ಬೇಸಾಯದ ಕಾರಣಕ್ಕೆ ರೈತ ಹೋರಾಟ ಹಿಂದೆ ಬೀಳಬಾರದು, ರೈತರು ಒಂದು ಬೆಳೆ ತ್ಯಾಗ ಮಾಡಬೇಕು ಎಂದು ರೈತ ಚಳವಳಿಯಲ್ಲಿ ಮುಖ್ಯ ಪಾತ್ರ ವಹಿಸಿರುವ ರಾಕೇಶ್ ಟಿಕಾಯತ್ ಕರೆ ನೀಡಿದ್ದಾರೆ. Link: ಅಲ್ಲಾ ಸ್ವಾಮಿ ಉಳುಮೆ ಮಾಡಲ್ಲ ಅಂತ ರೈತರು ಸ್ಟ್ರೈಕ್ ಮಾಡಿದ್ರೆ ಏನು ಗತಿ?

5) ನೀವು ನಮ್ಮ ಹೆಮ್ಮೆ ಸ್ವಾತಿ ಮಂಗಳನ ಅಂಗಳದಿಂದ ಕೇಳಿಸಿದ ದನಿ ಭಾರತ ಸಂಜಾತೆ ಡಾ.ಸ್ವಾತಿ ಮೋಹನ್ ಅವರದ್ದು. ನಾಸಾದಲ್ಲಿ ಕಲ್ಪನಾ ಚಾವ್ಲಾ ನಂತರ ಹೆಚ್ಚು ಸುದ್ದಿ ಮಾಡಿದ್ದು ಸ್ವಾತಿ ಮೋಹನ್. Link: ಬನ್ನಿ ಸ್ವಾತಿ ಮೋಹನ್ ಬಗ್ಗೆ ಒಂದಿಷ್ಟು ತಿಳಿಯೋಣ

6) ಮಾಧ್ಯಮಗಳಿಗೆ ತನಿಖಾ ಮಾಹಿತಿ ಸಲ್ಲದು ದಿಶಾ ರವಿ ಪ್ರಕರಣದ ತನಿಖೆ ಮಾಹಿತಿ ಮಾಧ್ಯಮಗಳಿಗೆ ನೀಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಕೇಂದ್ರ ಸರ್ಕಾರ ಮತ್ತು ದಿಶಾ ರವಿ ಪರ ವಕೀಲರ ನಡುವೆ ಜಿದ್ದಾಜಿದ್ದಿ ವಾದ-ಪ್ರತಿವಾದಗಳೂ ನಡೆಯಿತು. Link: ತುಷಾರ್ ಮೆಹ್ತಾ-ಅಮಿತ್ ಸಿಬಲ್ ನಡುವಣ ವಾದ-ಪ್ರತಿವಾದದ ಝಲಕ್ ಇಲ್ಲಿದೆ.

7) ಭಾರತದ ಲಸಿಕೆ ಸಶಕ್ತ ಭಾರತದಲ್ಲಿ ತಯಾರಾದ ಕೊರೊನಾ ಲಸಿಕೆಗಳ ಕುರಿತು ಮತ್ತೊಂದು ಅಧ್ಯಯನವಾಗಿದ್ದು, ಇವು ಹೊಸ ಬಗೆಯ ಕೊರೊನಾ ವೈರಾಣುವನ್ನು ಮಣಿಸುವಲ್ಲಿಯೂ ಶಕ್ತವಾಗಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ತಿಳಿಸಿದೆ. Link: ಭಾರತೀಯರಿಗೆ ಭರವಸೆ ನೀಡುವ ಸುದ್ದಿಯಿದು

8) ನಮ್ಮವರೂ ಸತ್ತಿದ್ದಾರೆ: ತಡವಾದರೂ ಒಪ್ಪಿಕೊಳ್ತು ಚೀನಾ ಲಡಾಖ್​ನ ಗಾಲ್ವಾನ್ ಸಂಘರ್ಷದಲ್ಲಿ ತನ್ನ ಕಡೆಯ ಸೈನಿಕರ ಸಾವನ್ನು ಚೀನಾ ಕೊನೆಗೂ ಒಪ್ಪಿಕೊಂಡಿದೆ. ಗಡಿಯಿಂದ ಎರಡೂ ದೇಶಗಳ ಸೇನೆ ಹಿಂದೆ ಸರಿಯುತ್ತಿರುವ ಈ ಸೂಕ್ಷ್ಮ ಸಂದರ್ಭದಲ್ಲಿ ಇದು ಮಹತ್ವದ ಬೆಳವಣಿಗೆ ಎನಿಸಿಕೊಂಡಿದೆ. Link: ಚೀನಾ ಕಡೆ ಸತ್ತವರು 4 ಮಂದಿಯಂತೆ

9) ಪ್ರೇಮ್ ಕಹಾನಿಯೋ? ಕ್ರೈಂ ಸ್ಟೋರಿಯೋ? ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಮರಣದಂಡನೆ ಶಿಕ್ಷೆಗೆ ಗುರಿಯಾದ ಮೊದಲ ಹೆಣ್ಣು ಶಬನಂ ಅಲಿ. ಪ್ರೇಮ ದಕ್ಕಿಸಿಕೊಳ್ಳುವ ನೆಪದಲ್ಲಿ ನಡೆದದ್ದು ಹತ್ಯಾಕಾಂಡ. ಮರಣದಂಡನೆಗೆ ಗುರಿಯಾದ ಈಕೆಗೆ 12 ವರ್ಷದ ಮಗುವೂ ಇದೆ. Link: ಯಾರೀಕೆ? ಏನು ಅಪರಾಧ?

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.tv9kannada.com ನೋಡುತ್ತಿರಿ.

Published On - 6:55 pm, Fri, 19 February 21

ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!