ಕೊಲೆ ಪ್ರಕರಣದಲ್ಲಿ ಬಂಧಿತ ವ್ಯಕ್ತಿ ಛತ್ತೀಸ್‌ಗಢ ಜೈಲಿನಲ್ಲಿ ಸಾವು; ಟ್ರೈನಿ ಐಪಿಎಸ್ ಅಧಿಕಾರಿ ಅಮಾನತು

ಜೈಲಿನಲ್ಲಿನ ಸಾವು ತನಿಖೆಯ ವಿಷಯವಾಗಿದೆ. ಮಂಗಳವಾರ, ಅವರನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಈ ಸಮಯದಲ್ಲಿ ಅವರ ಕೈಯ ಎಕ್ಸ್-ರೇ ಮಾಡಲಾಯಿತು. ವೈದ್ಯರ ಪ್ರಕಾರ, ವರದಿ ಸರಿಯಾಗಿಯೇ ಇದೆ. ಬುಧವಾರ ಪಂಚನಾಮೆಯ ವೇಳೆ ಮೃತರ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದವು.

ಕೊಲೆ ಪ್ರಕರಣದಲ್ಲಿ ಬಂಧಿತ ವ್ಯಕ್ತಿ ಛತ್ತೀಸ್‌ಗಢ ಜೈಲಿನಲ್ಲಿ ಸಾವು; ಟ್ರೈನಿ ಐಪಿಎಸ್ ಅಧಿಕಾರಿ ಅಮಾನತು
ಪ್ರಾತಿನಿಧಿಕ ಚಿತ್ರ

Updated on: Sep 19, 2024 | 4:04 PM

ರಾಯ್‌ಪುರ ಸೆಪ್ಟೆಂಬರ್ 19: ಸೆಪ್ಟೆಂಬರ್ 15 ರಂದು ನಡೆದ ಉಪ ಸರಪಂಚ್‌ನ ಹತ್ಯೆಗೆ ಸಂಬಂಧಿಸಿದಂತೆ ಬಂಧಿತನಾದ 27 ವರ್ಷದ ವ್ಯಕ್ತಿ ಛತ್ತೀಸ್‌ಗಢದ (Chhattisgarh )ಕಬೀರ್‌ಧಾಮ್ ಜಿಲ್ಲೆಯಲ್ಲಿ ಬುಧವಾರ ಮೃತಪಟ್ಟಿದ್ದು, ರಾಜ್ಯ ಸರ್ಕಾರವು ಜಿಲ್ಲೆಯ ಟ್ರೈನಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯನ್ನು (ಎಎಸ್‌ಪಿ) ಅಮಾನತುಗೊಳಿಸಿದೆ.  ಉಪ ಸರಪಂಚ್ ರಘುನಾಥ್ ಸಾಹು ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಹಲವಾರು ಜನರು ದಾಳಿ ಮಾಡಿದ ಸ್ವಲ್ಪ ಸಮಯದ ನಂತರ ಕಬೀರಧಾಮ್‌ನ ರೆಂಗಾಖರ್ ಪೊಲೀಸ್ ಠಾಣೆಯ ಅಧಿಕಾರಿಗಳು ಭಾನುವಾರ ಪ್ರಶಾಂತ್ ಸಾಹು ಎಂಬಾತನನ್ನು ಇತರ 68 ಮಂದಿಯೊಂದಿಗೆ ವಶಕ್ಕೆ ತೆಗೆದುಕೊಂಡಿದ್ದರು. ಗ್ರಾಮದ ಮತ್ತೊಬ್ಬ ವ್ಯಕ್ತಿಯ ಹತ್ಯೆಯಲ್ಲಿ ಭಾಗಿಯಾಗಿದ್ದಾನೆಂದು ಶಂಕಿಸಲಾಗಿದ್ದ ಸಾಹು ಮೃತಪಟ್ಟಿದ್ದು, ಆತನ ಕುಟುಂಬದ ಮೂವರು ದಾಳಿಯಲ್ಲಿ ಗಾಯಗೊಂಡಿದ್ದಾರೆ.

ಬಂಧಿತ ಪ್ರಶಾಂತ್ ಸಾಹು ಅವರು ಮಂಗಳವಾರ ಅಸ್ವಸ್ಥತೆಯ ಬಗ್ಗೆ ದೂರು ನೀಡಿದ್ದು, ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬುಧವಾರ, ಆತ ಕುಸಿದು ಬಿದ್ದು ಸ್ವಲ್ಪದರಲ್ಲೇ ಸಾವನ್ನಪ್ಪಿದ್ದಾರೆ.

ಕಸ್ಟಡಿ ಸಾವಿನ ಪ್ರಕರಣದ ನಂತರ ಪೊಲೀಸ್ ಅಧಿಕಾರಿ ವಿಕಾಸ್ ಕುಮಾರ್ ಅವರನ್ನು ಸರ್ಕಾರ ಅಮಾನತುಗೊಳಿಸಿದೆ ಎಂದು ರಾಜ್ಯದ ಗೃಹ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ವಿಜಯ್ ಶರ್ಮಾ ಹೇಳಿದ್ದಾರೆ.

“ಜೈಲಿನಲ್ಲಿನ ಸಾವು ತನಿಖೆಯ ವಿಷಯವಾಗಿದೆ. ಮಂಗಳವಾರ, ಅವರನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಈ ಸಮಯದಲ್ಲಿ ಅವರ ಕೈಯ ಎಕ್ಸ್-ರೇ ಮಾಡಲಾಯಿತು. ವೈದ್ಯರ ಪ್ರಕಾರ, ವರದಿ ಸರಿಯಾಗಿಯೇ ಇದೆ. ಬುಧವಾರ ಪಂಚನಾಮೆಯ ವೇಳೆ ಮೃತರ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದವು. ಅವರ ಒಳಾಂಗಗಳ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಅದರ ವರದಿಗಾಗಿ ಕಾಯಲಾಗುತ್ತಿದೆ ಎಂದು ಶರ್ಮಾ ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ: ಮೂರು ಕುಟುಂಬಗಳು ರಾಜಕೀಯ ಲಾಭಕ್ಕಾಗಿ ಯುವಕರ ಕೈಗೆ ಕಲ್ಲು ಕೊಟ್ಟು ಭವಿಷ್ಯ ಹಾಳು ಮಾಡುತ್ತಿವೆ: ಮೋದಿ

ಇತರ ಕೆಲವು ಬಂಧಿತ ವ್ಯಕ್ತಿಗಳಿಗೂ ಗಾಯದ ಗುರುತುಗಳಿವೆ. ಉನ್ನತ ಅಧಿಕಾರಿಗಳ ಆದೇಶದ ಮೇರೆಗೆ ಪೊಲೀಸರು ಅವರನ್ನು ಥಳಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸಿಎಂ ನಿರ್ದೇಶನದ ಮೇರೆಗೆ ಎಎಸ್ಪಿ ವಿಕಾಸ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ,” ಎಂದಿದ್ದಾರೆ ಶರ್ಮಾ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ