ರೊಟ್ವೀಲರ್ ಜಾತಿಗೆ ಸೇರಿದ ಸಾಕುನಾಯಿಯೊಂದು ತನ್ನ ಮಾಲೀಕನನ್ನೇ ಕಚ್ಚಿರುವ ಘಟನೆ ಗ್ವಾಲಿಯರ್‌ನಲ್ಲಿ ನಡೆದಿದೆ. ಮಾಲೀಕನಿಗೆ 60 ಕಡೆ ನಾಯಿ ಕಚ್ಚಿದ್ದು ಮಾಂಸವನ್ನು ಕಿತ್ತು ತಿಂದಿದೆ. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಸೋಮವಾರ ತಡರಾತ್ರಿ ದಾಳಿ ನಡೆದಿದೆ. ಮನೆ ಮಾಲೀಕ ಸಂಜೆ ನಾಯಿಗೆ ಆಹಾರ ನೀಡುವುದು ಮರೆತಿದ್ದ, ಮಧ್ಯರಾತ್ರಿ ನೆನಪಾಗಿ ಆಹಾರ ನೀಡಲು ಹೋದಾಗ ಹಸಿದಿದ್ದ ನಾಯಿ ಮಾಲೀಕನ ಮೇಲೆ ದಾಳಿ ನಡೆಸಿದೆ.
ಹಸಿದ ರೊಟ್ವೀಲರ್ ಹಿಂಸಾತ್ಮಕವಾಗಿ ತಿರುಗಿ ತನ್ನ ಮಾಲೀಕರನ್ನು ಕಚ್ಚಲು ಪ್ರಾರಂಭಿಸಿತ್ತು. ತೇಜೇಂದ್ರ ಘೋರ್ಪಡೆ ಎಂಬ ವ್ಯಕ್ತಿಯನ್ನು ಅವರ ಮಗ ಹೇಗೋ ರಕ್ಷಣೆ ಮಾಡಿದ್ದಾರೆ. ಸಮಯಕ್ಕೆ ಸರಿಯಾಗಿ ಮಧ್ಯಪ್ರವೇಶಿಸಿ ಆಕ್ರಮಣಕಾರಿ ನಾಯಿಯ ಬೆಲ್ಟ್ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಸಮಯೋಚಿತ ಹಸ್ತಕ್ಷೇಪದ ಹೊರತಾಗಿಯೂ, ಘೋರ್ಪಡೆಗೆ 60 ಕ್ಕೂ ಹೆಚ್ಚು ಆಳವಾದ ಗಾಯಗಳಾಗಿವೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಅವರನ್ನು ಚಿಕಿತ್ಸೆಗಾಗಿ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಯಿತು.
ಮತ್ತಷ್ಟು ಓದಿ: Viral Video: ರಸ್ತೆಯಲ್ಲಿ ನೃತ್ಯ ಮಾಡುತ್ತಾ ಹೋಗುತ್ತಿದ್ದ ವ್ಯಕ್ತಿಯ ಕಾಲು ಕಚ್ಚಿದ ನಾಯಿ
ನಾಯಿ ಕಚ್ಚಿದ 12 ವರ್ಷಗಳ ನಂತರ ಮಾಲೀಕನಿಗೆ 3 ತಿಂಗಳ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ
ಮುಂಬೈ ನ್ಯಾಯಾಲಯವು ಉದ್ಯಮಿಯೊಬ್ಬರಿಗೆ ಸೇರಿದ ಸಾಕುಪ್ರಾಣಿಯೊಂದು ವ್ಯಕ್ತಿಯನ್ನು ಕಚ್ಚಿದ 12 ವರ್ಷಗಳ ನಂತರ ಅವರಿಗೆ ನಾಯಿ ಮಾಲೀಕರಿಗೆ ಮೂರು ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿತ್ತು. ಅಂತಹ ಆಕ್ರಮಣಕಾರಿ ನಾಯಿಯೊಂದಿಗೆ ಹೊರಗೆ ಹೋಗುವಾಗ ಸಮಂಜಸವಾದ ಕಾಳಜಿಯನ್ನು ತೆಗೆದುಕೊಳ್ಳದಿದ್ದರೆ, ಅದು ಸಾರ್ವಜನಿಕರಿಗೆ ಖಂಡಿತವಾಗಿಯೂ ಹಾನಿಕಾರಕವಾಗಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಸಾರ್ವಜನಿಕ ಸುರಕ್ಷತೆಯ ಪ್ರಶ್ನೆಯಿರುವ ಇಂತಹ ಪ್ರಕರಣಗಳಲ್ಲಿ, ದಯೆಯು ಅನಪೇಕ್ಷಿತವಾಗಿರುತ್ತದೆ ಎಂದು ಗಿರ್ಗಾಂವ್ ನ್ಯಾಯಾಲಯದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎನ್ಎ ಪಟೇಲ್ ಅವರು ಜನವರಿ 3ರಂದು ನೀಡಿದ ಆದೇಶದಲ್ಲಿ ತಿಳಿಸಲಾಗಿದೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 289 (ಪ್ರಾಣಿಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವರ್ತನೆ) ಮತ್ತು 337 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕ್ರಿಯೆ) ಅಡಿಯ ಅಪರಾಧಗಳಲ್ಲಿ ನಾಯಿಯ ಮಾಲೀಕ ಸೈರಸ್ ಪರ್ಸಿ ಹಾರ್ಮುಸ್ಜಿ (44) ತಪ್ಪಿತಸ್ಥರೆಂದು ನ್ಯಾಯಾಲಯವು ಘೋಷಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ