ಚೆನ್ನೈ: ತನ್ನ ಪ್ರೀತಿಯ ಮಗಳು ಶಾಸಕನೊಬ್ಬನನ್ನು ವರಿಸಿದಳು ಅನ್ನೋ ಬೇಸರಕ್ಕೆ ಆಕೆಯ ತಂದೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿರುವ ಘಟನೆ ತಮಿಳುನಾಡಿನ ಕಳ್ಳಕುರಿಚಿಯಲ್ಲಿ ನಿನ್ನೆ ನಡೆದಿದೆ. ಅರೇ, ಇದೇನಿದು.. ಸಾಮಾನ್ಯವಾಗಿ ನಮ್ಮ ಜನ ತಮ್ಮ ಮಕ್ಕಳನ್ನು ಪ್ರಭಾವಿಗಳು, ರಾಜಕಾರಣಿಗಳ ಅಥವಾ ಅವರ ಕುಟುಂಬಸ್ಥರಿಗೆ ಮದುವೆ ಮಾಡಿಸಲು ಹಾತೊರೆಯುತ್ತಾರೆ. ಆದರೆ, ಈ ಪಿತಾಶ್ರೀ ಹೀಗೇಕೆ ಮಾಡಿದರು ಅನ್ನೊ ಕುತೂಹಲ ಮೂಡಬಹುದು. ಆದರೆ, ಆ ವ್ಯಕ್ತಿ ಆತ್ಮಹತ್ಯೆಗೆ ಮುಂದಾಗಲು ಕಾರಣ ಜಾತಿ.
ಹೌದು, ಬ್ರಾಹ್ಮಣ ಜಾತಿಗೆ ಸೇರಿರುವ ತನ್ನ 19 ವರ್ಷದ ಮಗಳನ್ನು ಅನ್ಯ ಜಾತಿಯವನಾದ, 36 ವರ್ಷದ ಕಳ್ಳಕುರಿಚಿಯ AIADMK ಶಾಸಕ A ಪ್ರಭು ಪ್ರೀತಿಸಿ ಮದುವೆಯಾಗಿದ್ದಾನೆ. ಅಂದ ಹಾಗೆ, ಈ ಜೋಡಿ ನಾಲ್ಕು ವರ್ಷಗಳ ಡೀಪ್ ಲವ್ ಬಳಿಕ ಒಬ್ಬರನೊಬ್ಬರು ವರಿಸಿದ್ದಾರೆ. ಇದೇ ಸಿಟ್ಟಿನಲ್ಲಿದ್ದ ಹುಡುಗಿಯ ತಂದೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾರೆ. ಸದ್ಯ ಸ್ಥಳದಲ್ಲಿದ್ದ ಜನರು ಹುಡುಗಿಯ ತಂದೆಯನ್ನ ತಡೆದಿದ್ದು ಪೊಲೀಸರು ಆತನನ್ನು ಬಂಧಿಸಿದ್ದಾರೆ.
Published On - 5:32 pm, Tue, 6 October 20