ಗುರುದ್ವಾರದಲ್ಲಿ ಗುರು ಗ್ರಂಥ ಸಾಹೀಬ್​ ಪುಟಗಳನ್ನು ಹರಿದ ಯುವಕನನ್ನು ಹೊಡೆದು ಕೊಂದ ಜನರು

ಪಂಜಾಬ್​ನ ಗುರುದ್ವಾರವೊಂದರಲ್ಲಿ ಗುರುಗ್ರಂಥ ಸಾಹೀಬ್​ನ ಪುಟಗಳನ್ನು ಹರಿದ ಆರೋಪದ ಮೇಲೆ ಯುವಕನೊಬ್ಬನನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಆತ ಮೃತಪಟ್ಟ ಬಳಿಕ ಮಾನಸಿಕ ಅಸ್ವಸ್ಥನೆಂದು ತಿಳಿದುಬಂದಿದ್ದು, ತನ್ನ ಮಗನ ಹತ್ಯೆಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಯುವಕನ ತಂದೆ ಒತ್ತಾಯಿಸಿದ್ದಾರೆ.

ಗುರುದ್ವಾರದಲ್ಲಿ ಗುರು ಗ್ರಂಥ ಸಾಹೀಬ್​ ಪುಟಗಳನ್ನು ಹರಿದ ಯುವಕನನ್ನು ಹೊಡೆದು ಕೊಂದ ಜನರು
ಸಾವು
Image Credit source: National herald

Updated on: May 05, 2024 | 8:19 AM

ಪಂಜಾಬ್‌ನ ಗುರುದ್ವಾರವೊಂದರಲ್ಲಿ ಪೂಜ್ಯ ಗುರು ಗ್ರಂಥ ಸಾಹಿಬ್‌ನ ಪುಟಗಳನ್ನು ಹರಿದ ಆರೋಪದ ಮೇಲೆ 19 ವರ್ಷದ ಯುವಕನನ್ನು ಹೊಡೆದು ಹತ್ಯೆ ಮಾಡಲಾಗಿದೆ. ಬಂಡಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಕ್ಷೀಶ್ ಸಿಂಗ್ ಎಂದು ಗುರುತಿಸಲಾದ ಯುವಕ ಗುರುದ್ವಾರದ ಆವರಣಕ್ಕೆ ಪ್ರವೇಶಿಸಿದ ಪವಿತ್ರ ಪುಸ್ತಕದ ಕೆಲವು ಪುಟಗಳನ್ನು ಹರಿದು ಹಾಕಿದ್ದ ತಕ್ಷಣ ಆತನನ್ನು ಜನ ಹಿಡಿದು ಹೊಡೆದು ಸಾಯಿಸಿದ್ದಾರೆ.

ಬಕ್ಷೀಶ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಪೊಲೀಸರ ಪ್ರಕಾರ, ಬಕ್ಷೀಶ್ ಪುಟಗಳನ್ನು ಹರಿದು ಪರಾರಿಯಾಗಲು ಪ್ರಯತ್ನಿಸಿದಾಗ ಪರಿಸ್ಥಿತಿ ಉಲ್ಬಣಗೊಂಡಿತು. ಘಟನೆಯ ಮಾಹಿತಿ ತಿಳಿದ ಸ್ಥಳೀಯರು ಆತನನ್ನು ಬಂಧಿಸಿದ್ದು, ಗುರುದ್ವಾರದಲ್ಲಿ ಜಮಾಯಿಸಿ ಬಕ್ಷೀಶ್‌ನನ್ನು ತೀವ್ರವಾಗಿ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವರದಿಯಾದ ಕೂಡಲೇ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸೌಮ್ಯ ಮಿಶ್ರಾ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಶ್ರೀ ಗುರು ಗ್ರಂಥ ಸಾಹಿಬ್ ಸತ್ಕರ್ ಸಮಿತಿಯ ಅಧ್ಯಕ್ಷ ಲಖ್ವೀರ್ ಸಿಂಗ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295-ಎ ಅಡಿಯಲ್ಲಿ ಬಕ್ಷೀಶ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಮತ್ತಷ್ಟು ಓದಿ: ಬಾಗಲಕೋಟೆ: ಮಗಳಿಂದ ದೂರ ಇರು ಎಂದಿದ್ದಕ್ಕೆ ಪ್ರಿಯತಮೆಯ ​ತಂದೆ ಹತ್ಯೆ ಮಾಡಿದ ಪ್ರಿಯಕರ

ಏತನ್ಮಧ್ಯೆ, ಬಕ್ಷೀಶ್ ಅವರ ತಂದೆ ಲಖ್ವಿಂದರ್ ಸಿಂಗ್ ಮಾತನಾಡಿ ತನ್ನ ಮಗ ಮಾನಸಿಕ ಅಸ್ವಸ್ಥನಾಗಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ಹೇಳಿದ್ದಾರೆ. ತನ್ನ ಮಗನ ವಿರುದ್ಧದ ಪೊಲೀಸ್ ಕ್ರಮದ ಬಗ್ಗೆ ದುಃಖ ವ್ಯಕ್ತಪಡಿಸಿದ ಲಖ್ವಿಂದರ್ ಸಿಂಗ್, ತನ್ನ ಮಗನ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ