AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ: ಮಗಳಿಂದ ದೂರ ಇರು ಎಂದಿದ್ದಕ್ಕೆ ಪ್ರಿಯತಮೆಯ ​ತಂದೆ ಹತ್ಯೆ ಮಾಡಿದ ಪ್ರಿಯಕರ

ತನ್ನ ಮಗಳಿಂದ ದೂರು ಇರು ಎಂದು ಯುವತಿಯ ತಂದೆ ಯುವಕನಿಗೆ ಥಳಿಸಿ ವಾರ್ನಿಂಗ್ ಕೊಟ್ಟಿದ್ದರು. ಇದೇ ಸಿಟ್ಟಿನಲ್ಲಿದ್ದ ಯುವಕ ಸಮಯ ನೋಡಿ ತಾನು ಪ್ರೀತಿಸಿದ ಯುವತಿಯ ತಂದೆ ಕೊಲೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಾಗಲಕೋಟೆ: ಮಗಳಿಂದ ದೂರ ಇರು ಎಂದಿದ್ದಕ್ಕೆ ಪ್ರಿಯತಮೆಯ ​ತಂದೆ ಹತ್ಯೆ ಮಾಡಿದ ಪ್ರಿಯಕರ
ಆರೋಪಿ ಪ್ರವೀಣ್ ಕಾಂಬಳೆ, ಮೃತ ಸಂಗನಗೌಡ ಪಾಟೀಲ್
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Mar 12, 2024 | 9:43 AM

Share

ಬಾಗಲಕೋಟೆ, ಮಾರ್ಚ್​.12: ತಮ್ಮ ಪ್ರೀತಿಯನ್ನು (Love) ನಿರಾಕರಿಸಿ, ನನ್ನ ಮಗಳಿಂದ ದೂರ ಇರು ಎಂದಿದ್ದಕ್ಕೆ ಯುವಕ ತಾನು ಪ್ರೀತಿಸಿದ್ದ ಯುವತಿಯ​ ತಂದೆಯನ್ನೇ ಕೊಲೆ (Murder) ಮಾಡಿದ್ದಾನೆ. ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮದಲ್ಲಿ ಪ್ರವೀಣ್ ಕಾಂಬಳೆ ಎಂಬ ಯುವಕ ಮಚ್ಚಿನಿಂದ ಕೊಚ್ಚಿ ಸಂಗನಗೌಡ ಪಾಟೀಲ್(52) ಎಂಬುವವರ ಕೊಲೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದಲಿತ ಯುವಕ ಪ್ರವೀಣ್ ಕಾಂಬಳೆ ಕೊಲೆಯಾದ ಸಂಗನಗೌಡ ಪಾಟೀಲ್ ಅವರ ಮಗಳನ್ನು ಪ್ರೀತಿಸಿದ್ದ. ಇಬ್ಬರ ನಡುವೆಯೂ ಪ್ರೀತಿ ಅರಳಿತ್ತು. ಆದರೆ ಅಂತರ್ಜಾತಿ ಹಿನ್ನೆಲೆ ಮಗಳಿಂದ ದೂರ ಇರಲು ಸಂಗನಗೌಡ ಪಾಟೀಲ್ ಎಚ್ಚರಿಕೆ ನೀಡಿದ್ದರು. ಅಲ್ಲದೆ ಕೆಲ‌ ದಿನಗಳ ಹಿಂದೆ ಮಗಳಿಂದ ದೂರ ಇರುವಂತೆ ಥಳಿಸಿದ್ದರು. ಇದೇ ಕೋಪದಲ್ಲಿದ್ದ ಪ್ರವೀಣ್ ಕಾಂಬಳೆ ಮಚ್ಚಿನಿಂದ ಹಲ್ಲೆ ನಡೆಸಿ ತನ್ನ ಪ್ರಿಯತಮೆಯ ತಂದೆಯ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಿವಾಜಿ ಜಯಂತಿ ಮೆರವೇಣಿಗೆ ವೇಳೆ ಹೊಡೆದಾಟ

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ವೇಳೆ ಯುವಕರ ಹೊಡೆದಾಟ ನಡೆದಿದೆ. ಯಾದಗಿರಿಯಲ್ಲಿ ವೀರ ಸಾವರ್ಕರ್ ಸೇನಾ ನೇತೃತ್ವದಲ್ಲಿ ನಗರದ ಹಿರೇಅಗಸಿ ಬಳಿ ಬೃಹತ್ ಶೋಭಾಯಾತ್ರೆ ಆಯೋಜಿಸಲಾಗಿತ್ತು. ಈ ವೇಳೆ ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಡಿಜೆ ಸದ್ದಿಗೆ ಹೆಜ್ಜೆ ಹಾಕುವಾಗ ಕಾಲ್ತುಳಿತ ಉಂಟಾಗಿದೆ. ಇದ್ರಿಂದ ಮಾತಿಗೆ ಮಾತು ಬೆಳೆದು ಯುವಕರ ನಡುವೆ ಹೊಡೆದಾಟ ನಡೆದಿದೆ.

ಇದನ್ನೂ ಓದಿ: ತಡರಾತ್ರಿ ಪ್ರಯಾಣಿಸುತ್ತಿದ್ದ ಮಹಿಳೆಗೆ KSRTC ಬಸ್​ನಲ್ಲಿ ಕಂಡಕ್ಟರ್​ನಿಂದ ಲೈಂಗಿಕ ಕಿರುಕುಳ

ವೃದ್ಧ ಮಾವನ ಮೇಲೆ ಸೊಸೆಯಿಂದ ಹಲ್ಲೆ

ವೃದ್ಧ ಮಾವನ ಮೇಲೆ ಸೊಸೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾಳೆ. ಮಂಗಳೂರಿನ ಕುಲಶೇಖರ ಬಳಿ ಘಟನೆ ನಡೆದಿದ್ದು, ಮಾವ ಪದ್ಮನಾಭ ಸುವರ್ಣ ಮೇಲೆ ‘ಹೋಗಿ ಸಾಯಿ’ ಅಂತಾ ಸೊಸೆ ಉಮಾಶಂಕರಿ ಹಲ್ಲೆ ನಡೆಸಿದ್ದಾಳೆ. ಹಲ್ಲೆ ನಡೆಸಿರುವ ದೃಶ್ಯ ಸೆರೆಯಾಗಿದ್ದು, ಶರ್ಟ್ ನ್ನು ಸೋಫಾ ಮೇಲೆ ಇಟ್ಟ ವಿಚಾರಕ್ಕೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಈ ಬಗ್ಗೆ ವೃದ್ಧರ ಮಗಳು ಪ್ರಿಯಾ ದೂರು ಸಲ್ಲಿಸಿದ್ದಾರೆ.

ದೇಗುಲದ ಉದ್ಘಾಟನೆಗೆ ಕರೆದಿಲ್ಲವೆಂದು ಹಲ್ಲೆ

ಬೆಂಗಳೂರು ಉತ್ತರ ತಾಲೂಕಿನ ರಾವುತನಹಳ್ಳಿಯಲ್ಲಿ ದೇವಸ್ಥಾನದ ಉದ್ಘಾಟನೆಗೆ ಕರೆದಿಲ್ಲವೆಂದು ಖಜಾಂಚಿ ದಿನೇಶ್‌ ಮೇಲೆ ಹಲ್ಲೆ ನಡೆಸಲಾಗಿದೆ. ರಾಡ್ ಹಾಗೂ ಹಾಕಿ ಸ್ಟಿಕ್‌ಗಳಿಂದ ಹಲ್ಲೆ ನಡೆಸಲಾಗಿದ್ದು, ಗಾಯಗೊಂಡ ಅವರನ್ನ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಹಲ್ಲೆಯ ವಿಡಿಯೋ ಮೊಬೈಲ್ ಹಾಗೂ ಸಿಸಿಕ್ಯಾಮಾರದಲ್ಲಿ ಸರೆಯಾಗಿದ್ದು, ಮಾದನಾಯಕನಹಳ್ಳಿ ಠಾಣೆಯಲ್ಲಿ 7 ನರ ವಿರುದ್ ಕೇಸ್ ದಾಖಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ