ಹೈದರಾಬಾದ್: ಗೂಡ್ಸ್ ಲಾರಿ ಮತ್ತು ಕಾರು ಡಿಕ್ಕಿಯಾಗಿ ಕಾರಿಗೆ ಬೆಂಕಿ ಹತ್ತಿಕೊಂಡು ಓರ್ವ ಸಜೀವ ದಹನವಾಗಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಚಾಪಿರೇವುಲ ಟೋಲ್ ಬಳಿ ನಡೆದಿದೆ.
ಗೂಡ್ಸ್ ಲಾರಿ ಕಾರಿಗೆ ಡಿಕ್ಕಿಯಾದ ತೀವ್ರತೆಗೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕಾರು ಧಗಧಗನೇ ಹತ್ತಿ ಉರಿದಿದೆ. ಈ ಪರಿಣಾಮ ಕಾರಿನಲ್ಲಿದ್ದ ಓರ್ವ ಸಜೀವ ದಹನರಾಗಿದ್ದಾರೆ. ಹಾಗೂ ಇನ್ನೋರ್ವನಿಗೆ ತೀವ್ರ ಗಾಯಗಳಾಗಿದ್ದು, ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸಜೀವ ದಹನವಾದವರನ್ನು ಎಸ್.ಬಿ.ಐ. ಬ್ಯಾಂಕ್ ಉದ್ಯೋಗಿ ಶಿವಕುಮಾರ್ ಎಂದು ಗುರುತಿಸಲಾಗಿದೆ.
Published On - 9:31 am, Wed, 29 July 20